ಬದಿಯಡ್ಕ : ಬೆಂಗಳೂರಿನ ಜಾಗೃತಿ ಸೇವಾ ಟ್ರಸ್ಟ್ ಸೇವಾ ಸಂಸ್ಥೆಯ ಆಶ್ರಯದಲ್ಲಿ ಮತ್ತು ಎಡನೀರು ಮಠದ ಸಹಕಾರದಲ್ಲಿ 'ಗಡಿನಾಡಿನಲ್ಲಿ ಕನ್ನಡ ಜಾಗೃತಿ' ಎಂಬ ಉದ್ದೇಶದೊಂದಿಗೆ ಎ.15ರಂದು ಬೆಳಗ್ಗೆ 9.30ರಿಂದ ಕಾಸರಗೋಡಿನ ಎಡನೀರು ಮಠದಲ್ಲಿ ಕನ್ನಡ ಸಾಹಿತ್ಯ ಸಮಾವೇಶ, 2023ನೇ ಸಾಲಿನ ಪ್ರಶಸ್ತಿ ಪುರುಸ್ಕಾರ ಹಾಗೂ ಅಂತರ್ ರಾಜ್ಯ ಮಟ್ಟದ ಕವಿಗೋಷ್ಠಿ ಮತ್ತು ಸಾಂಸ್ಕøತಿಕ ಸಂಭ್ರಮ ಕಾರ್ಯಕ್ರಮ ನಡೆಯಲಿದೆ.
ಬೆಳಗ್ಗೆ 9.30ರಿಂದ ವಿಶ್ವ ಮಾನವ ಸಂಗೀತ ಯಾನ ಕಾರ್ಯಕ್ರಮ ನಡೆಯಲಿದೆ. ನಂತರ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕಾಸರಗೋಡಿನ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕøತಿಕ ಸಂಘದ ಅಧ್ಯಕ್ಷೆ ಡಾ. ವಾಣಿಶ್ರೀ ಕಾಸರಗೋಡು ಅಧ್ಯಕ್ಷತೆ ವಹಿಸಲಿದ್ದಾರೆ. ಮಂಜೇಶ್ವರ ಶಾಸಕ ಎ ಕೆ ಎಂ ಅಶ್ರಫ್, ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕøತಿ ಸಂಘದ ಕಾರ್ಯದರ್ಶಿ ಗುರುರಾಜ್, ಸಮಾಜ ಸೇವಕಿ ಡಾ. ಭಾಗೀರಥಿ ಡಿ ಎಸ್ ಜ್ಯೋತಿ ರೆಡ್ಡಿ, ಮಮತಾ, ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯ ಮೈಕ್ರೋ ಬಯಾಲಜಿ ವಿಭಾಗದ ಡಾ. ಸಿ ಎಲ್ ಶಿವಮೂರ್ತಿ ಭಾಗವಹಿಸಲಿದ್ದಾರೆ. ನಂತರ ಕಾಸರಗೋಡಿನ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕøತಿಕ ಸಂಘದ ಕಲಾವಿದರಿಂದ ನೃತ್ಯ ವೈವಿಧ್ಯ ನಡೆಯಲಿದೆ. ಪತ್ರಕರ್ತ, ಸಂಘಟಕ ಶೇಖರ್ ಅಜೆಕಾರ್, ಯೋಗ ಶಿಕ್ಷಕರಾದ ನಾಗರತ್ನ, ಕಾರ್ತಿಕ್, ಸಮಾಜ ಸೇವಕ ನಾಗರಾಜ್, ಮಹೇಂದ್ರ ಮನೋತ ಉಪಸ್ಥಿತರಿರುವರು. ನಂತರ ನಡೆಯುವ ಅಂತರ್‍ರಾಜ್ಯ ಕವಿಗೋಷ್ಠಿಯಲ್ಲಿ ರಾಕೇಶ್ ಡಿ ವೀರಾಪುರ್. ಸುಶ್ಮಿತಾ ಕೆ, ಬಸವರಾಜು ಬಿ ಎಸ್ ಕಡಬನಕಟ್ಟೆ, ವಿರಾಜ್ ಅಡೂರು, ಗುರುಮೂರ್ತಿ ಟಿ ಓಬಯ್ಯನಹಟ್ಟಿ, ಆದ್ಯಂತ್ ಅಡೂರು, ಎನ್ ಆರ್ ನಾಗರಾಜು, ಅಂಬಿಕಾ, ನಿಶ್ಚಲಾ, ನರಸಿಂಹ ಭಟ್ ಕಟ್ಟದಮೂಲೆ, ನಾರಾಯಣ ನಾಯ್ಕ ಕುದುಕ್ಕೋಳಿ, ಪ್ರಭಾವತಿ ಕೆದಿಲಾಯ ಪುಂಡೂರು, ಶಂಕರನಾರಾಯಣ ಭಟ್ ಕಕ್ಕೆಪ್ಪಾಡಿ, ಡಾ. ಶಂಕರನಾರಾಯಣ ಭಟ್, ಪ್ರಣಮ್ಯ ಎನ್ ಪುದುಕೋಳಿ, ಪ್ರಣತಿ ಎನ್ ಪುದುಕೋಳಿ, ಪ್ರಸ್ತುತಿ ಪಿ ನೀರ್ಚಾಲು, ದಿವಾಕರ ಬಲ್ಲಾಳ್, ಗೋರೂರು ಪಂಕಜ, ಹಣೆಬೆ ನಾ ಪಾಪೇಗೌಡ ಕೋಲಾರ, ಗೀತಾ ವಿಜಯ ಕುಮಾರ್ ಭಾಗವಹಿಸಲಿದ್ದಾರೆ. ನಂತರ ನಡೆಯುವ ವಿಶ್ವಮಾನವ ಸಂಗೀತ ಯಾನ ಕಾರ್ಯಕ್ರಮದಲ್ಲಿ ರಾಜ ನಾಯಕ್, ವಸಂತ ಬಾರಡ್ಕ, ನಮ್ರತಾ ಆರ್ ನಾಯಕ್, ಪ್ರತಿಭಾ ನಾಯಕ್, ವಿಜಯಲಕ್ಷ್ಮಿ ಎಚ್, ಗೀತಾ, ಅನುರಾಧ ಎಚ್, ಸರ್ವೇಶ್ ದೊಡ್ಡಮನಿ ಭಾಗವಹಿಸಲಿದ್ದಾರೆ. ನಂತರ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಾಸಿಲ ಮಲ್ಲಿಗೆ ಮುಡುವು (ಗಮಕ ಗಾಯನ ಗಾರುಡಿಗ ಪ್ರಶಸ್ತಿ), ವೆಂಕಟ ಭಟ್ ಎಡನೀರು( ಕುಂಚ ಚಿತ್ರ ಬ್ರಹ್ಮ ಪ್ರಶಸ್ತಿ), ಡಾ.ವಾಣಿಶ್ರೀ ಕಾಸರಗೋಡು, ಶಾಂತಾ ಪುತ್ತೂರು (ಡಾ. ರಾಜ್ ಕುಮಾರ್ ಪ್ರಶಸ್ತಿ), ಮನೀಷ್ ಕುಲಾಲ್ (ಪುನೀತ್ ರಾಜಕುಮಾರ್ ಪ್ರಶಸ್ತಿ), ಪುಂಡಲೀಕ ಮೊಗವೀರ(ಪುನೀತ್ ರಾಜ್ ಕುಮಾರ್ ಸಮಾಜ ಸೇವಾ ಪ್ರಶಸ್ತಿ) ಅವರು ಸನ್ಮಾನ ಸ್ವೀಕರಿಸಲಿದ್ದಾರೆ ಎಂದು ಬೆಂಗಳೂರಿನ ಜಾಗೃತಿ ಸೇವಾ ಟ್ರಸ್ಟ್ ಸೇವಾ ಸಂಸ್ಥೆಯ ಬಿ ನಾಗೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಡನೀರಿನಲ್ಲಿ ಸಾಹಿತ್ಯ ಸಮಾವೇಶ, ಪ್ರಶಸ್ತಿ ಪ್ರದಾನ ಸಮಾರಂಭ ಎ.15ರಂದು
0
ಏಪ್ರಿಲ್ 12, 2023
Tags