ನವದೆಹಲಿ: ಆರ್ಥಿಕ ವರ್ಷದ ಕೊನೆಯ ತಿಂಗಳು 2023ನೇ ಸಾಲಿನ ಮಾರ್ಚ್ ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ (GST) ಸಂಗ್ರಹವು 1.6 ಲಕ್ಷ ಕೋಟಿಯನ್ನು ದಾಟಿದೆ, ಜುಲೈ 2017 ರಲ್ಲಿ ಜಿಎಸ್‌ಟಿ ಜಾರಿಗೆ ಬಂದ ನಂತರ ಇದು ಎರಡನೇ ಬಾರಿ ಇಷ್ಟು ಸಂಗ್ರಹವಾಗಿದೆ. ಮಾರ್ಚ್ 2023 ರಲ್ಲಿ ಸರ್ಕಾರವು 160,122 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ, ಅಂದರೆ ಕಳೆದ ವರ್ಷ ಮಾರ್ಚ್ ಗಿಂತ ಶೇಕಡಾ 13ರಷ್ಟು ಹೆಚ್ಚಾಗಿದೆ. ಗರಿಷ್ಠ GST ಸಂಗ್ರಹವು ಏಪ್ರಿಲ್ 2022 ರಲ್ಲಿ 167,540 ಕೋಟಿ ರೂಪಾಯಿ ಸಂಗ್ರಹಣೆಯಾಗಿತ್ತು.
2022-23 ರಲ್ಲಿ, ಒಟ್ಟು ಜಿಎಸ್‌ಟಿ ಸಂಗ್ರಹವು 18.1 ಲಕ್ಷ ಕೋಟಿ ರೂಪಾಯಿಗಳ ದಾಖಲೆಯ ಗರಿಷ್ಠ ಮಟ್ಟದಲ್ಲಿತ್ತು, ಹಿಂದಿನ ವರ್ಷದ ಮಾರ್ಚ್-ಏಪ್ರಿಲ್ ಗಿಂತ ಶೇಕಡಾ 22ರಷ್ಟು ಹೆಚ್ಚಾಗಿದೆ. ಆರ್ಥಿಕ ವರ್ಷ 2023ರಲ್ಲಿ ಸರಾಸರಿ ಮಾಸಿಕ ಸಂಗ್ರಹವು 1.5 ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದೆ, ಇದು ಹಿಂದಿನ ವರ್ಷದಲ್ಲಿ ಸರಾಸರಿ ಮಾಸಿಕ 1.23 ಲಕ್ಷ ಕೋಟಿಗಿಂತ ಗಮನಾರ್ಹವಾಗಿ ಹೆಚ್ಚಾಗಿದೆ.
ಜಿಎಸ್‌ಟಿ ಸಂಗ್ರಹಣೆಯಲ್ಲಿನ ಹೆಚ್ಚಳವು ಆರ್ಥಿಕ ಚಟುವಟಿಕೆಯಲ್ಲಿನ ಒಟ್ಟಾರೆ ಜಿಗಿತಕ್ಕೆ ಮತ್ತು ಉತ್ತಮ ಅನುಸರಣೆಗೆ ಕಾರಣವಾಗಿದೆ, ತೆರಿಗೆ ವಂಚನೆ ಮತ್ತು ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್‌ಗಳನ್ನು ಅಕ್ರಮಗಳನ್ನು ಪತ್ತೆಹಚ್ಚಿ ಕಡಿವಾಣ ಹಾಕಿರುವುದೇ ಇದಕ್ಕೆ ಕಾರಣವಾಗಿದೆ. ಹಣಕಾಸು ಸಚಿವಾಲಯದ ಹೇಳಿಕೆಯ ಪ್ರಕಾರ, ಮಾರ್ಚ್ 2023 ರಲ್ಲಿ ಐಟಿ ರಿಟರ್ನ್‌ಗಳ ಸಲ್ಲಿಕೆಯು ಶೇಕಡಾ 93.2 ಇನ್‌ವಾಯ್ಸ್‌ಗಳ ಸ್ಟೇಟ್‌ಮೆಂಟ್ (GSTR-1 ರಲ್ಲಿ) ಮತ್ತು ಶೇಕಡಾ 91.4 ರಿಟರ್ನ್ಸ್ (GSTR-3B ನಲ್ಲಿ) ಫೆಬ್ರವರಿ 2023 ರವರೆಗೆ ಸಲ್ಲಿಸಲಾಗಿದೆ. ಕಳೆದ ವರ್ಷ ಇದೇ ತಿಂಗಳಿನಲ್ಲಿ ಕ್ರಮವಾಗಿ ಕ್ರಮವಾಗಿ ಶೇಕಡಾ 83.1 ಮತ್ತು ಶೇಕಡಾ 84.7 ರಷ್ಟಿದ್ದವು.
ಟ್ಯಾಕ್ಸ್ ಕನೆಕ್ಟ್ ಅಡ್ವೈಸರಿಯ ಪಾಲುದಾರ ವಿವೇಕ್ ಜಲನ್, ಜಿಎಸ್‌ಟಿ ಅಡಿಯಲ್ಲಿ ದೃಢವಾದ ಅನುಸರಣೆಯು ಏಕೈಕ ಮಾರ್ಗವಾಗಿದೆ ಎಂದು ಇತ್ತೀಚೆಗೆ ವ್ಯಾಪಾರ ವಹಿವಾಟುಗಳಲ್ಲಿ ಗೊತ್ತಾಗಿದೆ. GST ರಿಟರ್ನ್ ಫೈಲಿಂಗ್‌ನಲ್ಲಿ ಗಮನಾರ್ಹವಾದ ಉತ್ತೇಜನವು ಅನುಸರಣೆ ಅನುಪಾತವನ್ನು ಆರಂಭಿಕ ಶೇಕಡಾ 80ರಿಂದ 90ಕ್ಕಿಂತ ಹೆಚ್ಚು ತೆಗೆದುಕೊಳ್ಳುವುದರಿಂದ ಭಾರತೀಯ ವ್ಯವಹಾರಗಳು ಮುಖ್ಯವಾಹಿನಿಗೆ ವೇಗವಾಗಿ ಚಲಿಸುತ್ತಿವೆ ಎಂದು ತೋರಿಸುತ್ತದೆ ಎಂದು ಅವರು ಹೇಳಿದರು.