ನವದೆಹಲಿ : 'ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಕೈಗೊಂಡ ಇ-ವಾಹನಗಳ ಬಳಕೆ, ಕಾಗದ ರಹಿತ ಕಚೇರಿಯಂತಹ ಉಪಕ್ರಮಗಳಿಂದಾಗಿ 17ನೇ ಲೋಕಸಭೆಯ ನಾಲ್ಕು ವರ್ಷಗಳ ಅವಧಿಯಲ್ಲಿ ಒಟ್ಟು ₹801.46 ಕೋಟಿ ಉಳಿತಾಯ ಮಾಡಲಾಗಿದೆ' ಎಂದು ಸಂಸತ್ತಿನ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

'ಲೋಕಸಭೆಯ ಸೆಕ್ರೆಟರಿಯೇಟ್ 2021-22ನೇ ಹಣಕಾಸು ವರ್ಷದಲ್ಲಿ ₹258.47 ಕೋಟಿ ಹಾಗೂ 2022-23ನೇ ಹಣಕಾಸು ವರ್ಷದಲ್ಲಿ ₹132.60 ಕೋಟಿ ಉಳಿಸಿದೆ' ಎಂದು ಹೇಳಿದ್ದಾರೆ.
'12ನೇ ಲೋಕಸಭೆಗೆ ಹಂಚಿಕೆಯಾಗಿದ್ದ ಒಟ್ಟು ಅನುದಾನದಲ್ಲಿ ₹7.01 ಕೋಟಿ, 13ನೇ ಲೋಕಸಭೆಗೆ (1999-2004) ಹಂಚಿಕೆಯಾಗಿದ್ದ ಅನುದಾನದಲ್ಲಿ ₹99.52 ಕೋಟಿ ಉಳಿತಾಯ ಮಾಡಲಾಗಿತ್ತು. 14, 15 ಮತ್ತು 16ನೇ ಲೋಕಸಭೆಗಳಿಗೆ ಹಂಚಿಕೆಯಾಗಿದ್ದ ಅನುದಾನದಲ್ಲಿ ಕ್ರಮವಾಗಿ ₹145.07 ಕೋಟಿ, ₹94.17 ಕೋಟಿ ಹಾಗೂ ₹461 ಕೋಟಿ ಉಳಿಸಲಾಗಿತ್ತು. ಕೋವಿಡ್‌ನಿಂದಾಗಿ ಸಂಸತ್ತಿನ ಅಧಿವೇಶನಗಳನ್ನು ಮೊಟಕುಗೊಳಿಸಿದ್ದರಿಂದ ಹಾಗೂ ಸ್ಪೀಕರ್ ಬಿರ್ಲಾ ಅವರು ಕೈಗೊಂಡ ಉಪ ಕ್ರಮಗಳಿಂದಾಗಿ 17ನೇ ಲೋಕಸಭೆಗೆ ಹಂಚಿಕೆಯಾಗಿದ್ದ ಅನುದಾನದಲ್ಲಿ ದಾಖಲೆಯ ಮೊತ್ತ ಉಳಿತಾಯವಾಗಿದೆ' ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.