ಕುಂಬಳೆ : ಕಾಸರಗೋಡು ಜಿಲ್ಲೆ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿರುವ ಬೇಗುದಿಯಿಂದ ಶೀಘ್ರ ಬದಲಾಗಲಿದೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯಲ್ಲಿ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ.
ದಕ್ಷಿಣ ಭಾರತದ ಮೊದಲ ಏಕಪಿಲ್ಲರ್ ಸೇತುವೆಯ ಕಾಮಗಾರಿಯೂ ವೇಗವಾಗಿ ಸಾಗುತ್ತಿದೆ.ಒಂದು ಕಿಲೋಮೀಟರ್ ಗೂ ಹೆಚ್ಚು ಉದ್ದವಿರುವ ಸೇತುವೆ ಮುಂದಿನ ವರ್ಷ ಏಪ್ರಿಲ್ ಮಧ್ಯದ ವೇಳೆಗೆ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಅಂದಾಜಿಸಲಾಗಿದೆ.
ಇತರೆ ಜಿಲ್ಲೆಗಳಲ್ಲಿ ಅರ್ಧದಷ್ಟು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಂಡಿಲ್ಲ. ಇದರೊಂದಿಗೆ ಕಾಸರಗೋಡು ಕರಂದಕ್ಕಾಡಿನಿಂದ ನಗರದ ಹೊಸ ಬಸ್ ನಿಲ್ದಾಣದವರೆಗೆ ಒಂದೂವರೆ ಕಿಲೋಮೀಟರ್ ದೂರದಲ್ಲಿ ಮೇಲ್ಸೇತುವೆ ನಿರ್ಮಾಣವೂ ಪ್ರಗತಿಯಲ್ಲಿದೆ. ರಸ್ತೆ ಸೇತುವೆಯನ್ನು ತಲಾ 27 ಮೀಟರ್‍ಗಳ 29 ಪಿಲ್ಲರ್‍ಗಳಲ್ಲಿ ನಿರ್ಮಿಸಲಾಗುತ್ತಿದೆ. ಮುಂದಿನ ತಿಂಗಳಾಂತ್ಯಕ್ಕೆ ಕಾಂಕ್ರಿಟೀಕರಣ ಆರಂಭಿಸಿ ಏಪ್ರಿಲ್ ಮಧ್ಯದೊಳಗೆ ಕಾಮಗಾರಿ ಪೂರ್ಣಗೊಳಿಸುವುದು ಸದ್ಯದ ನಿರ್ಧಾರವಾಗಿದೆ.
ಮೊದಲ ರೀಚ್‍ನಲ್ಲಿ ತಲಪ್ಪಾಡಿ-ಚೆಂಗಳ ರೀಚ್‍ನಲ್ಲಿ ನಿರ್ಮಾಣವು ವೇಗವಾಗಿ ನಡೆಯುತ್ತಿದೆ. ಇದುವರೆಗೆ ಶೇ.60ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಮೊದಲ ರೀಚ್ ಕರ್ನಾಟಕ ಗಡಿಭಾಗದ ತಲಪ್ಪಾಡಿಯಿಂದ ಆರಂಭವಾಗಿ ಚೆಂಗಳದಲ್ಲಿ ಕೊನೆಗೊಳ್ಳುತ್ತದೆ. ಈ 39 ಕಿ.ಮೀ ವ್ಯಾಪ್ತಿಯ ಕಾಮಗಾರಿಯನ್ನು 1700 ಕೋಟಿ ರೂ.ವೆಚ್ಚದಲ್ಲಿ ಮಾಡಲಾಗುತ್ತಿದೆ.