ಕಾಸರಗೋಡು: ಭಾರತೀಯ ಸೇನೆಯ ಮದ್ರಾಸ್ ರೆಜಿಮೆಂಟ್‍ನ ಮಾಜಿ ಸೈನಿಕರು ಮತ್ತು ವಿಧವೆಯರ ಕುಂದುಕೊರತೆ ಪರಿಹಾರ ಮತ್ತು ಕಲ್ಯಾಣ ಚಟುವಟಿಕೆಗಳ ಬಗ್ಗೆ ವಿವರಿಸಲು ಏಪ್ರಿಲ್ 17ರಂದು ಬೆಳಗ್ಗೆ 10.30ಕ್ಕೆ ಕಾಸರಗೋಡು ಜಿಲ್ಲಾ ಸೈನಿಕ ಕಲ್ಯಾಣ ಕಛೇರಿಯಲ್ಲಿ ಮದ್ರಾಸ್ ರೆಜಿಮೆಂಟಲ್ ಸೆಂಟರ್ ಪ್ರತಿನಿಧಿಗಳು ಸಭೆ ನಡೆಸಲಿದ್ದಾರೆ. ಈ ಅವಕಾಶವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಬೇಕು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ(04994 256860)ಸಂಪರ್ಕಿಸುವಂತೆ ಕಾಸರಗೋಡು ಜಿಲ್ಲಾ ಸೈನಿಕ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
17ರಂದು ಮಾಜಿ ಸೈನಿಕರು, ವಿಧವೆಯರ ಕುಂದುಕೊರತೆ ಪರಿಹಾರ ಸಭೆ
0
ಏಪ್ರಿಲ್ 14, 2023
Tags