HEALTH TIPS

1987ರ ಮಲಿಯಾನ ಗಲಭೆ ಪ್ರಕರಣ: 40 ಆರೋಪಿಗಳ ಖುಲಾಸೆ

 

                  ಮೀರತ್: 36 ವರ್ಷ ಹಳೆಯ ಮಲಿಯಾನ ಕೋಮು ಘರ್ಷಣೆಯಲ್ಲಿ ಕಿಚ್ಚಿಡುವಿಕೆ, ಹತ್ಯೆ ಹಾಗೂ ಗಲಭೆ ಪ್ರಕರಣದ 40 ಆರೋಪಿಗಳನ್ನು ಮೀರತ್ ನ್ಯಾಯಾಲಯ ಸಾಕ್ಷಾಧಾರದ ಕೊರತೆಯಿಂದ ಖುಲಾಸೆಗೊಳಿಸಿದೆ. ಶಬ್-ಎ-ಬರಾತ್ ಸಂದರ್ಭ ನಗರದಲ್ಲಿ 1987 ಎಪ್ರಿಲ್ 14ರಂದು ಕೋಮು ಹಿಂಸಾಚಾರ ಸಂಭವಿಸಿ 12 ಮಂದಿ ಮೃತಪಟ್ಟಿದ್ದರು.

                    ಅನಂತರ ಮೇ 22ರಂದು ಹಾಶಿಂಪುರದಲ್ಲಿ ನಡೆದ ಘರ್ಷಣೆಯ ಹಿನ್ನೆಲೆಯಲ್ಲಿ ಮಲಿಯಾನದಲ್ಲಿ ಮೇ 23ರಂದು ಗಲಭೆ ಬುಗಿಲೆದ್ದಿತ್ತು. ಈ ಹಿಂಸಾಚಾರದಲ್ಲಿ ಮಲಿಯಾನದಲ್ಲಿ 63 ಮಂದಿ ಮೃತಪಟ್ಟಿದ್ದರು. ಹಾಶಿಂಪುರದಲ್ಲಿ 42 ಮಂದಿ ಸಾವನ್ನಪ್ಪಿದ್ದರು. ಮಲಿಯಾನ ಪ್ರಕರಣದ ಉಭಯ ತಂಡದ ವಾದವನ್ನು ಆಲಿಸಿದ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶ ಲಖ್ವಿಂದರ್ ಸೂದ್ ಶನಿವಾರ ಪ್ರಕರಣದ 40 ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿದರು. ಈ ತೀರ್ಪಿನ ವಿರುದ್ಧ ನಾವು ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಿದ್ದೇವೆ ಎಂದು ಸಂತ್ರಸ್ತರ ಕುಟುಂಬದ ಸದಸ್ಯರು ಹೇಳಿದ್ದಾರೆ.

                    ಸಾಕ್ಷಾಧಾರದ ಕೊರತೆಯನ್ನು ಉಲ್ಲೇಖಿಸಿ ನ್ಯಾಯಾಲಯ ಆರೋಪಿಗಳನ್ನು ಖುಲಾಸೆಗೊಳಿಸಿದೆ. ಮಲಿಯಾನ ಪ್ರಕರಣದ ವಿಚಾರಣೆ 800ಕ್ಕೂ ಅಧಿಕ ದಿನಗಳ ಕಾಲ ನಡೆದಿದೆ. ವಿಚಾರಣೆಯಲ್ಲಿ 74 ಸಾಕ್ಷಿಗಳು ಇದ್ದರು. ಅವರಲ್ಲಿ ಕೇವಲ 25 ಮಂದಿ ಮಾತ್ರ ಉಳಿದುಕೊಂಡರು. ಕೆಲವು ಸಾಕ್ಷಿಗಳು ಪಟ್ಟಣದಿಂದ ಹೊರಗೆ ಹೋದರು ಎಂದು ಆರೋಪಿಗಳನ್ನು ಪ್ರತಿನಿಧಿಸಿದ ನ್ಯಾಯವಾದಿ ಸಿ.ಎಲ್. ಬನ್ಸಾಲ್ ಹೇಳಿದ್ದಾರೆ.

                 ಈ ಪ್ರಕರಣವನ್ನು 1987 ಮೇ 24ರಂದು ಅಪರಿಚಿತರು ಸೇರಿದಂತೆ 93 ಮಂದಿಯ ವಿರುದ್ಧ ದಾಖಲಿಸಲಾಗಿದೆ. ಇವರಲ್ಲಿ 40 ಮಂದಿ ಮೃತಪಟ್ಟಿದ್ದಾರೆ. ಇತರನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಈ ಘಟನೆ ಮೀರತ್ ನ ಮಲಿಯಾನ ಹೋಲಿ ಚೌಕ್ ನಲ್ಲಿ 1987 ಮೇ 23ರಂದು ನಡೆದಿತ್ತು. ಅದೇ ವರ್ಷ ಮೇ 24ರಂದು ಸ್ಥಳೀಯ ನಿವಾಸ ಯಾಕುಬ್ ಆಲಿ ಪ್ರಕರಣ 93 ಮಂದಿಯ ವಿರುದ್ಧ ದಾಖಲಿಸಿದ್ದರು ಎಂದು ಹೆಚ್ಚುವರಿ ಜಿಲ್ಲಾ ಸರಕಾರಿ ವಕೀಲ (ಎಡಿಜಿಸಿ) ಸಚಿನ್ ಮೋಹನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

                   1987 ಮೇ 23ರಂದು ನಡೆದ ಘಟನೆಯಲ್ಲಿ 63 ಮಂದಿ ಸಾವನ್ನಪ್ಪಿದ್ದರು. 100ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು. ಆರೋಪಿಗಳು ಕಿಚ್ಚಿರಿಸಿದ್ದಾರೆ ಹಾಗೂ ಜನರ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಅಲಿ ಆರೋಪಿಸಿರುವುದಾಗಿ ಎಡಿಜಿಸಿಎ ತಿಳಿಸಿದ್ದಾರೆ. ಮಲಿಯಾನಾ ಪ್ರಕರಣದಲ್ಲಿ ಕಕ್ಷಿದಾರ ಸೇರಿದಂತೆ 10 ಮಂದಿ ಸಾಕ್ಷಿಗಳು ನ್ಯಾಯಾಲಯದಲ್ಲಿ ಸಾಕ್ಷ ನುಡಿದಿದ್ದಾರೆ. ಆದರೆ, ಸಾಕ್ಷಾಧಾರಗಳ ಆಧಾರದಲ್ಲಿ ಆರೋಪಿಗಳ ವಿರುದ್ಧ ಪ್ರಕರಣವನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ಸಫಲವಾಗಿಲ್ಲ ಎಂದು ಅವರು ಹೇಳಿದ್ದಾರೆ.

                ಸಾಕ್ಷಿಗಳ ಸಾಕ್ಷ ಹಾಗೂ ಸಲ್ಲಿಸಲಾದ ದಾಖಲೆಗಳನ್ನು ಗಮನಿಸಿದ ಬಳಿಕ ನ್ಯಾಯಾಲಯ ಸಂಶಯದ ಲಾಭದಲ್ಲಿ 40 ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶ ನೀಡಿತು ಎಂದು ಮೋಹನ್ ತಿಳಿಸಿದ್ದಾರೆ. ಈ ಪ್ರಕರಣ ಇತರ 40 ಅಪರಾಧಿಗಳು ಘಟನೆಯ ಬಳಿಕ ಮೃತಪಟ್ಟಿದ್ದಾರೆ.

             ಉಳಿದವರನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದು ಅವರು ತಿಳಿಸಿದ್ದಾರೆ. ತೀರ್ಪಿನ ಹಿನ್ನೆಲೆಯಲ್ಲಿ ಮಲಿಯಾನ ಹಿಂಸಾಚಾರದ ಓರ್ವ ಸಂತ್ರಸ್ತರ ಕುಟುಂಬದ ಸದ್ಯನಾದ ಮಹ್ತಾಬ್ (40), ''ಗಲಭೆಯ ಸಂದರ್ಭ ನನ್ನ ತಂದೆ ಅಶ್ರಫ್ ಅವರನ್ನು ಗುಂಡು ಹಾರಿಸಿ ಹತ್ಯೆಗೈಯಲಾಗಿತ್ತು'' ಎಂದು ಹೇಳಿದ್ದಾರೆ. ''ನಾನು ಆಗ ಯುವಕನಾಗಿದ್ದೆ. ಯಾವುದೇ ಕಾರಣವಿಲ್ಲದೆ ಅವರನ್ನು ಹತ್ಯೆಗೈಯಲಾಯಿತು'' ಎಂದು ಮಹ್ತಾಬ್ ತಿಳಿಸಿದ್ದಾರೆ.

              ''ಇತರ ಕುಟುಂಬದೊಂದಿಗೆ ಮಾತುಕತೆ ನಡೆಸಿದ ಬಳಿಕ ನಾವು ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಿದ್ದೇವೆ'' ಎಂದು ಅವರು ತಿಳಿಸಿದ್ದಾರೆ. ಹಿಂಸಾಚಾರದ ದಿನ ತನ್ನ ತಂದೆ ಯಾಸಿನ್ ಅವರು ಮನೆಗೆ ಹಿಂದಿರುಗುತ್ತಿದ್ದರು. ಅವರನ್ನು ಗುಂಡು ಹಾರಿಸಿ ಹತ್ಯೆಗೈಲಾಗಿತ್ತು. ಅನಂತರ ಅವರ ಮೃತದೇಹವನ್ನು ಸಕ್ಕರೆ ಕಾರ್ಖಾನೆಯ ಸಮೀಪ ಎಸೆಯಲಾಗಿತ್ತು ಎಂದು ಅಪ್ಝಲ್ ಅಲಿ (45) ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries