ನವದೆಹಲಿ: ಭಾರತ
ಜಗತ್ತಿನಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರದ ಪಟ್ಟಕ್ಕೇರಿರುವುದರ ಬಗ್ಗೆ
ಚೀನಾ ಪ್ರತಿಕ್ರಿಯೆ ನೀಡಿದ್ದು, ನಮ್ಮ ಬಳಿ ಗುಣಮಟ್ಟವಿದೆ ಎಂದು ಹೇಳಿದೆ.
ಹತ್ತಿರ ಹತ್ತಿರ 900 ಮಿಲಿಯನ್ ನಷ್ಟು ಗುಣಮಟ್ಟದ ಕಾರ್ಯಪಡೆಯನ್ನು ಹೊಂದಿರುವುದಾಗಿ
ಚೀನಾ ಹೇಳಿದ್ದು, ಇದು ಅಭಿವೃದ್ಧಿಗೆ ಬಲವಾದ ಉತ್ತೇಜನ ನೀಡುತ್ತದೆ ಎಂದು ಹೇಳಿದೆ.
ವಿಶ್ವಸಂಸ್ಥೆ ಜನಸಂಖ್ಯೆ ನಿಧಿ ಡೇಟಾ ಪ್ರಕಾರ, ಭಾರತ ಚೀನಾವನ್ನು ಹಿಂದಿಕ್ಕಿದ್ದು, 142.86 ಕೋಟಿ ಜನಸಂಖ್ಯೆ ಹೊಂದಿದೆ. ಚೀನಾ 142.57 ಕೋಟಿ ಜನಸಂಖ್ಯೆ ಹೊಂದಿದ್ದು 2ನೇ ಸ್ಥಾನದಲ್ಲಿದೆ.
ಈ ವರದಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್, ಜನಸಂಖ್ಯೆಯ ಲಾಭಾಂಶ ಕೇವಲ ಸಂಖ್ಯೆಯಲ್ಲಿ ನಿರ್ಧಾರವಾಗುವುದಿಲ್ಲ. ಆದರೆ ಗುಣಮಟ್ಟವೂ ಮುಖ್ಯವಾಗುತ್ತದೆ. ಜನಸಂಖ್ಯೆಯಷ್ಟೇ, ಪ್ರತಿಭೆ ಸಹ ಮುಖ್ಯವಾಗುತ್ತದೆ, ಕೆಲಸ ಮಾಡುವ ವಯಸ್ಸಿನವರು ಸುಮಾರು 900 ಮಿಲಿಯನ್ ಇದೆ ಎಂದು ವೆನ್ ಬಿನ್ ಹೇಳಿದ್ದಾರೆ.