ಆಗ್ರ : ಇಲ್ಲಿನ ಹೊಟೇಲೊಂದರಲ್ಲಿ ಸಸ್ಯಹಾರಿಯೊಬ್ಬರಿಗೆ ಅಜಾಗರೂಕತೆಯಿಂದ ಮಾಂಸಹಾರ ಬಡಿಸಿದ ಕಾರಣಕ್ಕೆ ಹೊಟೇಲ್‌ನಿಂದ ₹ 1 ಕೋಟಿ ಪರಿಹಾರ ಕೇಳಿದ ಘಟನೆ ನಡೆದಿದೆ.
ಅರ್ಪಿತ್ ಗುಪ್ತಾ ಎಂಬ ವ್ಯಕ್ತಿ ಫತೇಹ್‌ಬಾದ್ ರಸ್ತೆಯಲ್ಲಿರುವ ಐಷಾರಾಮಿ ಹೊಟೇಲೊಂದಕ್ಕೆ ಹೋಗಿದ್ದಾರೆ.
'ಜನ್ಮತಃ ಸಸ್ಯಹಾರಿಯಾದ ಗುಪ್ತಾ ಅವರಿಗೆ ಹೊಟೇಲ್‌ನಲ್ಲಿ ತಾವು ತಿಂದದ್ದು ಚಿಕನ್ ರೋಲ್ ಎಂದು ಗೊತ್ತಾದಾಗ ವಾಂತಿ ಮಾಡಿಕೊಂಡಿದ್ದಷ್ಟೇ ಅಲ್ಲ, ಆಸ್ಪತ್ರೆಗೆ ಕೂಡ ಅವರು ದಾಖಲಾಗಬೇಕಾಯಿತು' ಎಂದೂ ವಕೀಲರು ತಿಳಿಸಿದ್ದಾರೆ.
ಹೊಟೇಲ್ ತನ್ನ ತಪ್ಪನ್ನು ಮರೆಮಾಚುವ ಸಲುವಾಗಿ ಊಟದ ಬಿಲ್ ಸಹ ನೀಡಲಿಲ್ಲ. ಈ ಕುರಿತಾದ ಸತ್ಯಾಸತ್ಯತೆಗೆ ನಮ್ಮ ಕಕ್ಷಿದಾರರು ಇಡೀ ಘಟನೆಯನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಹೊಟೇಲ್ ಸಿಬ್ಬಂದಿ ಸರಳವಾಗಿ ಕ್ಷಮೆಯಾಚಿಸುವುದು ಸಾಕಾಗುವುದಿಲ್ಲ. ಸಸ್ಯಾಹಾರಿ ವ್ಯಕ್ತಿಯೊಬ್ಬರ ಧಾರ್ಮಿಕ ಭಾವನೆಯನ್ನು ಘಾಸಿಗೊಳಿಸಿದ್ದಕ್ಕಾಗಿ ಹೊಟೇಲ್ ಆಡಳಿತದ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕು. ಪರಿಹಾರವಾಗಿ ಸಂತ್ರಸ್ತ ಗುಪ್ತಾ ಅವರಿಗೆ ₹ 1 ಕೋಟಿ ಕೊಡಬೇಕು ಎಂದು ವಕೀಲ ನರೋತ್ತಮ್ ಸಿಂಗ್ ಹೇಳಿದ್ದಾರೆ.
ವ್ಯಕ್ತಿಯ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾದರೆ ಮೂರರಿಂದ ಹತ್ತು ವರ್ಷಗಳ ವರೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ.