ಕಾಸರಗೋಡು: ವಂದೇಭಾರತ್ ಎಕ್ಸ್‍ಪ್ರೆಸ್‍ನ ಎರಡನೇ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದೆ. ತಿರುವನಂತಪುರದಿಂದ ಕಾಸರಗೋಡಿಗೆ ತಲುಪಲು 7 ಗಂಟೆ 50 ನಿಮಿಷಗಳನ್ನು ತೆಗೆದುಕೊಂಡಿತು.
ಬೆಳಗ್ಗೆ 5.20ಕ್ಕೆ ತಂಬಾನೂರು ರೈಲು ನಿಲ್ದಾಣದಿಂದ ಪ್ರಯಾಣ ಆರಂಭಿಸಿದ ರೈಲು ಮಧ್ಯಾಹ್ನ 1.10ಕ್ಕೆ ಕಾಸರಗೋಡು ರೈಲು ನಿಲ್ದಾಣ ತಲುಪಿತು. ಕಾಸರಗೋಡು ನಿಲ್ದಾಣಕ್ಕೆ ಪ್ರಥಮ ಬಾರಿಗೆ ಆಗಮಿಸಿದ ವಂದೇಭಾರತ್ ರೈಲನ್ನು ವೀಕ್ಷಿಸಲು ಮುಸ್ಲಿಂ ಲೀಗ್ ಮುಖಂಡರು ಸೇರಿದಂತೆ ನೂರಾರು ಜನರು ಆಗಮಿಸಿದ್ದರು.
ತಿರುವನಂತಪುರಂನಿಂದ ಕಾಸರಗೋಡಿಗೆ ವಂದೇಭಾರತ್ ಎಕ್ಸ್‍ಪ್ರೆಸ್ ರೈಲಿನ ಪ್ರಯಾಣವನ್ನು ವಿಸ್ತರಿಸಲಾಗಿದೆ ಎಂದು ಕೇಂದ್ರವು ನಿನ್ನೆ ಘೋಷಿಸಿತ್ತು. ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಕೇಂದ್ರ ಸಚಿವ ವಿ ಮುರಳೀಧರನ್ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದರು. ಪ್ರಧಾನಮಂತ್ರಿಗಳೇ ಕೇರಳಕ್ಕೆ ಆಗಮಿಸಿ ವಂದೇ ಭಾರತ್ ನ ಅಧಿಕೃತ ಸಂಚಾರಕ್ಕೆ ಹಸಿರು ನಿಶಾನೆ ಪ್ರದರ್ಶನ ಮಾಡಲಿದ್ದಾರೆ ಎಂದು ಅವರು ಹೇಳಿದ್ದಾರೆ. 25ರಂದು ಕೇರಳಕ್ಕೆ ವಂದೇ ಭಾರತ್ ಸಮರ್ಪಿಸಲಾಗುವುದು ಎಂದು ಕೇಂದ್ರ ರೈಲ್ವೆ ಸಚಿವರು ಮಾಹಿತಿ ನೀಡಿದ್ದಾರೆ.
ವಂದೇಭಾರತ್ ರೈಲಿನ ಮೊದಲ ಪ್ರಾಯೋಗಿಕ ಓಡಾಟವನ್ನು ತಿರುವನಂತಪುರಂನಿಂದ ಕಣ್ಣೂರಿಗೆ ನಡೆಸಲಾಯಿತು. ಬೆಳಗ್ಗೆ 5.10ಕ್ಕೆ ತಿರುವನಂತಪುರದಿಂದ ಹೊರಟು ಮಧ್ಯಾಹ್ನ 12.20ರ ಸುಮಾರಿಗೆ ಕಣ್ಣೂರು ರೈಲು ನಿಲ್ದಾಣ ತಲುಪಿತ್ತು.
ಕಾಸರಗೋಡಿಗೆ ಹತ್ತಿರ-ಹತ್ತಿರ ಎಂಟೇ ಗಂಟೆ!: ವಂದೇ ಭಾರತ್ 2ನೇ ಪರೀಕ್ಷಾರ್ಥ ಸಂಚಾರ ಯಶಸ್ವಿ; ತಿರುವನಂತಪುರದಿಂದ ಕಾಸರಗೋಡಿಗೆ ತಲುಪಲು 7 ಗಂಟೆ 50 ನಿಮಿಷ: ಅದ್ಧೂರಿ ಸ್ವಾಗತ ನೀಡಿದ ಜನತೆ
0
ಏಪ್ರಿಲ್ 19, 2023
Tags