ಡೆಹರಡೂನ್: ಪ್ರತಿದಿನವೂ ಸೋಷಿಯಲ್ ಮೀಡಿಯಾ ಮೂಲಕ್ ಆನ್‌ಲೈನ್ ವಂಚನೆಗಳು (Online Scams) ನಡೆಯುತ್ತಿವೆ. ನಿಮ್ಮ ಹೆಸರಲ್ಲಿ ಲಾಟರಿ ಬಂದಿದೆ, ಹಣ ಸಿಗುತ್ತೆ ಎಂದು ಹೇಳಿ ಒಟಿಪಿ ಕೊಡಬೇಕೆಂದು ಕೇಳಿ ಪಡೆದು ವಂಚನೆ ಮಾಡಲಾಗುತ್ತಿದೆ. ಇನ್ನು ಕೆಲವೆಡೆ ಆನ್‌ಲೈನ್ ಮೂಲಕ ಹನಿ ಟ್ರ್ಯಾಪ್ ಹಗರಣಗಳು (Honey Trap) ಬೆಳಕಿಗೆ ಬರುತ್ತಿವೆ. ಯಾರೆಂದು ಗೊತ್ತಿಲ್ಲದ ವ್ಯಕ್ತಿಗಳನ್ನು ಸ್ನೇಹಿತರಾಗಿ (Friend) ಮಾಡಿಕೊಳ್ಳುವುದರಿಂದ ವಂಚನೆಗೆ ಒಳಗಾಗುತ್ತಿದ್ದಾರೆ. ಕೆಲವು ಖತರ್ನಾಕ್ಗಳು ಹೆಂಗಸರಂತೆ ವಯನಾಗಿ ಚಾಟಿಂಗ್ ಮಾಡಿ, ಇತರರನ್ನು ಬುಟ್ಟಿಗೆ ಹಾಕಿಕೊಂಡು ವಂಚನೆ ಮಾಡುತ್ತಿದ್ದಾರೆ. ಇವರ ಗಾಳಕ್ಕೆ ಬಿದ್ದು ಲಕ್ಷ ಲಕ್ಷ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ.
ಇನ್ನೂ ಕೆಲವರು ಜನರನ್ನು ಮರಳು ಮಾಡಿ ಕರೆಯಲ್ಲಿ ಮಾತನಾಡುವುದು, ನಗ್ನ ಕರೆಗಳನ್ನು ಮಾಡಿ ಅದನ್ನೂ ರೆಕಾರ್ಡ್ ಮಾಡಿಕೊಂಡು ಬ್ಲಾಕ್ ಮೇಲ್ ಮಾಡುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇದಲ್ಲದೆ ಮ್ಯಾಟ್ರಿಮೋನಿಯಲ್ಲೂ ಕೂಡ ಮೋಸ ನಡೆಯುತ್ತಿವೆ. ಮದುವೆ ಆಗುವುದಾಗಿ ವಿಚ್ಛೇದಿತರನ್ನು, ವಯಸ್ಸಾದವರನ್ನು ಮೋಸದ ಬಲೆ ಬೀಳಿಸಿಕೊಂಡು ಹಣವನ್ನು ವಸೂಲಿ ಮಾಡಿ, ನಂತರ ಮದುವೆಯಾಗದೇ ಕೈ ಕೊಟ್ಟು ಎಸ್ಕೇಪ್ ಆಗುತ್ತಿದ್ದಾರೆ. ಇದೇ ರೀತಿಯ ಘಟನೆಯಲ್ಲಿ ನಿವೃತ್ತ ಬ್ಯಾಂಕ್ ಅಧಿಕಾರಿಯೊಬ್ಬರು 80 ಲಕ್ಷ ಕಳೆದುಕೊಂಡ ಘಟನೆ ಉತ್ತರಾಖಂಡದಲ್ಲಿ ನಡೆದಿದೆ.
20 ವರ್ಷ ಕಿರಿಯವಳೊಂದಿಗೆ ಸ್ನೇಹ
ಉತ್ತರಾಖಂಡ ರಾಜಧಾನಿ ಡೆಹರಾಡೂನ್ನಲ್ಲಿ ನಿವೃತ್ತ ಬ್ಯಾಂಕ್ ಅಧಿಕಾರಿಯೊಬ್ಬರು ವಂಚನೆಗೆ ಒಳಗಾಗಿ ಲಕ್ಷ ಲಕ್ಷ ಕಳೆದುಕೊಂಡ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ನಿವೃತ್ತಿಗೆ ಮುಂಚೆಯೇ ಬ್ಯಾಂಕ್ ಉದ್ಯೋಗಿ ಪತ್ನಿಯಿಂದ ವಿಚ್ಛೇದನ ಪಡೆದುಕೊಂಡಿದ್ದರು. ಅವರು ಒಬ್ಬಂಟಿಯಾಗಿದ್ದರಿಂದ ಖಿನ್ನತೆಗೆ ಒಳಗಾಗಿದ್ದಾದ್ದರು. ಹಾಗಾಗಿ ಸೋಷಿಯಲ್ ಮೀಡಿಯಾ ಮತ್ತು ಮ್ಯಾಟ್ರಿಮೋನಿಯಲ್ ಸೈಟ್ಗಳಲ್ಲಿ ಸೂಕ್ತ ಸಂಗಾತಿಗಾಗಿ ಹುಡುಕುತ್ತಿದ್ದರು. ಈ ಕ್ರಮದಲ್ಲಿ ತನಗಿಂತ 20 ವರ್ಷ ಕಿರಿಯ ಮಹಿಳೆ ಆತನ ಸಂಪರ್ಕಕ್ಕೆ ಸಿಕ್ಕಿದ್ದಾಳೆ.
ಪೋನ್ನಲ್ಲೇ ಲವ್
ತನಗಿಂತ 20 ವರ್ಷ ಕಿರಿಯ ಮಹಿಳೆಯೊಂದಿಗೆ ಸ್ನೇಹವಾದ ತಕ್ಷಣ ಚಾಟ್ ಮಾಡುವ ಮೂಲಕ ಅವಳನ್ನು ಪ್ರೀತಿಸಲು ಶುರು ಮಾಡಿದ್ದಾರೆ. ನಂತರ ಇದು ಮದುವೆ ವರೆಗೆ ಹೋಗಿದೆ. ಅತ್ತ ಕಡೆ ಮಹಿಳೆ ತನಗೆ 43 ವರ್ಷ ಎಂದು ಹೇಳಿಕೊಂಡಿದ್ದು, ಈಗಾಗಲೇ ವಿಚ್ಛೇದನ ಹೊಂದಿರುವುದಾಗಿ ಹೇಳಿದ್ದಾಳೆ. ಹಾಗಾಗಿ ಇಬ್ಬರು ಒಂದಾಗಲು ಬಯಸಿದ್ದಾರೆ. ಹೀಗೆ ಬ್ಯಾಂಕ್ ನೌಕರನನ್ನು ಬಲೆಗೆ ಬೀಳಿಸಿ ಮಹಿಳೆ, ಒಟ್ಟಿಗೆ ಜೀವನ ನಡೆಸಲು ಇಬ್ಬರು ಸೇರಿ ಒಂದು ಮನೆಯೊಂದನ್ನು ಕಟ್ಟಿಕೊಳ್ಳೊಣ, ಅದಕ್ಕಾಗಿ ನಿವೇಶನ ಖರೀದಿಸುತ್ತಿದ್ದೇನೆ ಎಂದು ಹೇಳಿ ಹಣ ಕೇಳಿದ್ದಾಳೆ.
80 ಲಕ್ಷ ಪೀಕಿದ ಮಹಿಳೆ
ಇದನ್ನೆಲ್ಲ ನಿಜವೆಂದು
ನಂಬಿದ ವ್ಯಕ್ತಿ. ಹಲವು ಹಂತಗಳಲ್ಲಿ 80 ಲಕ್ಷ ರೂಪಾಯಿ ಕೊಟ್ಟಿದ್ದಾನೆ. ಮಹಿಳೆ ಈ
ಮೊತ್ತವನ್ನು ಕೆಲವೊಮ್ಮೆ ನಿವೇಶನ ಖರೀದಿಯ ಹೆಸರಿನಲ್ಲಿ ಮತ್ತು ಕೆಲವೊಮ್ಮೆ ಮನೆ
ನಿರ್ಮಾಣದ ಹೆಸರಿನಲ್ಲಿ ತೆಗೆದುಕೊಂಡಿದ್ದಾಳೆ. ಆದರೆ ಮದುವೆಯ ದಿನ ಮಹಿಳೆ ತನ್ನ ಫೋನ್
ಸ್ವಿಚ್ ಆಫ್ ಮಾಡಿ ಎಸ್ಕೇಪ್ ಆಗಿದ್ದಾಳೆ. ಬ್ಯಾಂಕ್ ಉದ್ಯೋಗಿಯ ದೂರಿನ ಮೇರೆಗೆ ಪೊಲೀಸರು
ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಮಹಿಳೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಭೇಟಿ ನಂತರ ಪ್ರತಿದಿನ ಮಾತನಾಡತೊಡಗಿದ್ದಾರೆ. ಪ್ರೀತಿ ಆತನಿಗೆ ನಿವೇಶನ ಖರೀದಿಸಲು 20 ಲಕ್ಷ ರೂಪಾಯಿ ಕೇಳಿದ್ದಾರೆ. ಹಣ ಕೊಟ್ಟ ನಂತರ 3-4 ದಿನಗಳಲ್ಲಿ ಅವರು ಈ ಮೊತ್ತವನ್ನೂ ಸುಂದರ್ಗೆ ವಾಪಸ್ ನೀಡಿದ್ದಾರೆ. ಅದರಿಂದಾಗಿ ಅವರ ಮೇಲೆ ವಿಶ್ವಾಸ ಮೂಡಿತು. ಡಿಸೆಂಬರ್ 2021ರಿಂದ ಮೇ 2022ರವರೆಗೆ ಪ್ರೀತಿಯ ಖಾತೆಗೆ ಒಟ್ಟು 70 ಲಕ್ಷ ರೂಪಾಯಿ ನೀಡಿದ್ದಾರೆ. ಆದರೆ ಇಷ್ಟು ದಿನಗಳಲ್ಲಿ ಆಕೆ ಒಮ್ಮೆಯೂ ಮನೆಯ ವಿಳಾಸವನ್ನು ನೀಡಿಲ್ಲ. ವಿಳಾಸ ಕೇಳಿದಾಗಲೆಲ್ಲ ಕೆನಾಲ್ ರಸ್ತೆಯಲ್ಲಿರುವ ತನ್ನ ಮನೆ ಮತ್ತು ಕೆಲವೊಮ್ಮೆ ಜಖಾನ್‌ನಲ್ಲಿದೆ ಎಂದು ಹೇಳಿ ಯಾಮಾರಿಸಿದ್ದಾಳೆ. ಮತ್ತೆ 10 ಲಕ್ಷ ರೂ.ಗೆ ಬೇಡಿಕೆ ಇಟ್ಟಾಗ ನಿರಾಕರಿಸಿದ್ದಾರೆ. ಆದರೆ ಭೇಟಿ ಆದಾಗ ಮತ್ತೆ 10 ಲಕ್ಷ ರೂಪಾಯಿ ನೀಡಿದ್ದಾರೆ. ಆಗಲೂ ಇಬ್ಬರೂ ಒಟ್ಟಿಗೆ ಇರಬಹುದು ಎಂದು ಯಾಮಾರಿಸಿದ್ದಾಳೆ.
ಮದುವೆ ದಿನ ಕೈಕೊಟ್ಟ ವಂಚಕಿ
ಎಲ್ಲಾ
ಮಾತುಕತೆಯಾದ ನಂತರ ಅಕ್ಟೋಬರ್ 5, 2022ರಂದು ದೇವಸ್ಥಾನದ ಮದುವೆಯ ದಿನಾಂಕವನ್ನ
ನಿಗದಿಪಡಿಸಲಾಗಿದೆ. ಮದುವೆಗೆ ಎಲ್ಲ ವ್ಯವಸ್ಥೆ ಮಾಡಿಕೊಂಡು ದೇವಸ್ಥಾನಕ್ಕೆ ಸುಂದರ್
ಪ್ರಕಾಶ್ ಬಂದಿದ್ದಾರೆ. ಆದರೆ ಸಂಜೆಯವರೆಗೂ ಪ್ರೀತಿ ಮಾತ್ರ ಬಂದಿರಲಿಲ್ಲ. ಫೋನ್
ಮಾಡಿದರೆ ಕರೆಯನ್ನು ಸ್ವೀಕರಿಸಲಿಲ್ಲ. ಕೊನೆಗೆ ಸಂಜೆ ಫೋನ್ ಸ್ವಿಚ್ ಆಫ್
ಮಾಡಿದಕೊಂಡಿದ್ದಾಳೆ. ಆಗ ಸುಂದರ್ಗೆ ತಾನು ಮೋಸ ಹೋಗಿರುವುದು ಅರಿವಾಗಿದೆ.
ತನಿಖೆ ಕೈಗೆತ್ತಿಕೊಂಡ ಅಧಿಕಾರಿಗಳು
ತಕ್ಷಣಕ್ಕೆ ಸುಂದರ್ ಪ್ರಕಾಶ್ ಪೊಲೀಸರ ಮೊರೆ ಹೋಗಲಿಲ್ಲ ಎನ್ನಲಾಗಿದೆ. ಅವನು ಪ್ರೀತಿಯನ್ನು ತನ್ನ ಹಣವನ್ನು ಹಿಂದಿರುಗಿಸುವಂತೆ ಮತ್ತು ವಿಷಯವನ್ನು ಹೊರಗೆ ಇತ್ಯರ್ಥಗೊಳಿಸುವಂತೆ ಕೇಳಿದ್ದಾರೆ. ಆದರೆ ಆಕೆ ಹಣವನ್ನು ಹಿಂದಿರುಗಿಸಿರಲಿಲ್ಲ. ಬಳಿಕ ವೃದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಸಂತ್ರಸ್ತ ಸುಂದರ್ ಪ್ರಕಾಶ್ ದೂರಿನ ಮೇರೆಗೆ ಪ್ರೀತಿ ಎಂಬ ಮಹಿಳೆ ವಿರುದ್ಧ ವಂಚನೆ ಪ್ರಕರಣ ದಾಖಲಿಸಲಾಗಿದೆ ಎಂದು ಇನ್ಸ್ ಪೆಕ್ಟರ್ ಸೂರ್ಯಭೂಷಣ ನೇಗಿ ತಿಳಿಸಿದ್ದಾರೆ. ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.