ಸಿಲಿಗುರಿ : ಜಿ-20 ಪ್ರವಾಸೋದ್ಯಮ ಕಾರ್ಯನಿರತ ಸಮೂಹದ 2ನೇ ಸಭೆಯು ದೇಶಿಯ ಪ್ರವಾಸೋದ್ಯಮವನ್ನು ಮಿಷನ್ ವಿಧಾನದಲ್ಲಿ ಯೋಜಿಸುವುದರ ಮೇಲೆ ಹೆಚ್ಚಿನ ಗಮನ ನೀಡಲಿದ್ದು, ಇದು ಭಾತರದ ಪ್ರವಾಸೋದ್ಯಮ ಸಾಮರ್ಥ್ಯವನ್ನು ವೃದ್ಧಿಸಲು ನೆರವಾಗಲಿದೆ ಎಂದು ಪ್ರವಾಸೋದ್ಯಮ ಸಚಿವ ಜಿ.ಕಿಶನ್ ರೆಡ್ಡಿ ಭಾನುವಾರ ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಮತ್ತು ಸಿಲಿಗುರಿಯಲ್ಲಿ ಏಪ್ರಿಲ್ 1 ರಂದು ಪ್ರಾರಂಭವಾಗಿರುವ ಸಭೆಯು 3ರವರೆಗೆ ನಡೆಯಲಿದೆ. ಸಭೆಯಲ್ಲಿ ಜಿ-20 ಪ್ರತಿನಿಧಿಗಳು, ವಿವಿಧ ದೇಶಗಳ ಆಹ್ವಾನಿತರು, ಅಂತರರಾಷ್ಟ್ರೀಯ ಸಂಸ್ಥೆಗಳು, ಪ್ರವಾಸೋದ್ಯಮ ಕ್ಷೇತ್ರದ ಪಾಲುದಾರರು, ಪ್ರವಾಸೋದ್ಯಮ ಅಧಿಕಾರಿಗಳು ಮತ್ತು ಸ್ಥಳೀಯ ಪ್ರವಾಸ ನಿರ್ವಾಹಕರು ಸೇರಿದಂತೆ 130ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.
ಎರಡನೇ ದಿನದ ಸಭೆಯಲ್ಲಿ ಮಾತನಾಡಿದ ರೆಡ್ಡಿ, ಸಭೆಯ ಪ್ರಮುಖ ಉದ್ದೇಶವು ಮಿಷನ್ ಮಾದರಿಯಲ್ಲಿ ದೇಶಿಯ ಪ್ರವಾಸೋದ್ಯಮವನ್ನು ಯೋಜಿಸುವುದಾಗಿದೆ. 'ಇದು ಭಾರತದ ಪ್ರವಾಸೋದ್ಯಮ ಕ್ಷೇತ್ರದ ಸಾಮರ್ಥ್ಯವನ್ನು ಹೆಚ್ಚಿಸಲಿದೆ,' ಎಂದು ಹೇಳಿದ್ದಾರೆ.