HEALTH TIPS

ಡ್ರೈವಿಂಗ್ ಲೈಸೆನ್ಸ್ ಅನ್ನು 200 ರೂ.ಗೆ ಪಡೆಯಿರಿ; ಒಂದು ವರ್ಷದ ನಂತರ 1200 ಪಾವತಿಸಬೇಕು!


               ತಿರುವನಂತಪುರಂ: ಲ್ಯಾಮಿನೇಟೆಡ್ ಡ್ರೈವಿಂಗ್ ಲೈಸೆನ್ಸ್ ಹೊಂದಿರುವವರು 200 ರೂಪಾಯಿ ಪಾವತಿಸಿ ಹೊಸ ಸ್ಮಾರ್ಟ್ ಲೈಸನ್ಸ್ ಗೆ ಬದಲಾಯಿಸಿಕೊಳ್ಳಬಹುದು.
             ಏಳು ಭದ್ರತಾ ವೈಶಿಷ್ಟ್ಯಗಳೊಂದಿಗೆ ಹೊಸ ಪರವಾನಗಿಗಳ ವಿತರಣೆಯನ್ನು ಉದ್ಘಾಟಿಸಿ ಸಚಿವ ಆಂಟನಿ ರಾಜು ಈ ವಿಷಯ ತಿಳಿಸಿರುವÀರು. ಹೊಸ ಸ್ಮಾರ್ಟ್ ಪರವಾನಗಿಗೆ ಬದಲಾಯಿಸುವಾಗ ಹಳೆಯ ಪರವಾನಗಿಯನ್ನು ಹಿಂತಿರುಗಿಸುವ ಅಗತ್ಯವಿಲ್ಲ. ಅರ್ಜಿಯನ್ನು ಪರಿವಾಹನ್ ವೆಬ್‍ಸೈಟ್ ಮೂಲಕ ಆನ್‍ಲೈನ್‍ನಲ್ಲಿ ಸಲ್ಲಿಸಬೇಕು. ಅಂಚೆ ಮೂಲಕ ಹೊಸ ಪರವಾನಗಿ ಪಡೆಯಲು ಬಯಸುವವರು ಅಂಚೆ ಶುಲ್ಕವನ್ನೂ ಪಾವತಿಸಬೇಕಾಗುತ್ತದೆ. ಒಂದು ವರ್ಷಕ್ಕೆ ಮಾತ್ರ ವಿನಾಯಿತಿ ನೀಡಲಾಗುತ್ತದೆ. ಇದರ ನಂತರ ನೀವು ನಕಲಿ ಚಾಲನಾ ಪರವಾನಗಿಗಾಗಿ ರೂ.120 ಮತ್ತು ಅಂಚೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
          ಮೇ ತಿಂಗಳಿನಿಂದ ವಾಹನ ನೋಂದಣಿ ಪ್ರಮಾಣ ಪತ್ರಗಳನ್ನೂ ಪೆಟ್ ಜಿ ಕಾರ್ಡ್ ಆಗಿ ಪರಿವರ್ತಿಸಲಾಗುವುದು. ಈ ಕಾರ್ಡ್‍ನಲ್ಲಿ ಏಳು ಭದ್ರತಾ ವ್ಯವಸ್ಥೆಗಳನ್ನು ಸಹ ಒದಗಿಸಲಾಗಿದೆ. ಪೆಟ್ ಜಿ ಕಾರ್ಡ್‍ಗಳು ಎಟಿಎಂ ಕಾರ್ಡ್‍ಗಳಂತೆಯೇ ಇರುತ್ತವೆ ಮತ್ತು ಅವುಗಳನ್ನು ವ್ಯಾಲೆಟ್‍ನಲ್ಲಿ ಇರಿಸಬಹುದು. ಅಕ್ಷರಗಳು ಮಸುಕಾಗದಂತೆ ಉತ್ತಮ ಮುದ್ರಣ ವ್ಯವಸ್ಥೆಯನ್ನು ಬಳಸಲಾಗುತ್ತದೆ.
             ವಿಶೇಷ ಸಂಖ್ಯೆ, ನೇರಳಾತೀತ ಬೆಳಕಿನ ಅಡಿಯಲ್ಲಿ ಗೋಚರಿಸುವ ಮಾದರಿ, ಟಿಪ್ಪಣಿಯಲ್ಲಿರುವಂತೆ ಗಿಲೋಚೆ ವಿನ್ಯಾಸ, ಬದಿಗಳಲ್ಲಿ ಸೂಕ್ಷ್ಮ ಅಕ್ಷರಗಳಲ್ಲಿ ಗಡಿರೇಖೆ, ಹೊಲೊಗ್ರಾಮ್, ಬೆಳಕು ಬೀಳುವ ಪ್ರಕಾರ ಬಣ್ಣವನ್ನು ಬದಲಾಯಿಸುವ ಭಾರತದ ಚಿತ್ರ, ಸ್ಕ್ಯಾನ್ ಮಾಡಿದ ನಂತರ ಪರವಾನಗಿಯ ಬಗ್ಗೆ ಎಲ್ಲಾ ಮಾಹಿತಿ ಲಭ್ಯವಿರುವ ಕ್ಯು.ಆರ್ ಕೋಡ್ ಕೂಡಾ ಇದರಲ್ಲಿವೆ.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries