ನವದೆಹಲಿ::ಭಾರತೀಯ ರೈಲ್ವೆಯ ಅಧಿಕೃತ ಪ್ರಕಟಣೆಯ ಪ್ರಕಾರ, 2022-23ನೇ ಸಾಲಿನಲ್ಲಿ ಭಾರತೀಯ ರೈಲ್ವೆಯು (Indian Railways) ದಾಖಲೆಯ ರೂ. 2.40 ಲಕ್ಷ ಕೋಟಿ ಗಳಿಕೆ ಮಾಡಿದ್ದು, ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ರೂ.
49,000 ಕೋಟಿ ಆದಾಯ ಏರಿಕೆಯಾಗಿದೆ. ಈ ಏರಿಕೆಯು ಶೇ. 25ರಷ್ಟು ಬೆಳವಣಿಗೆಯನ್ನು ಪ್ರತಿಫಲಿಸಿದೆ ಎಂದು ಹೇಳಿದೆ.
ಭಾರತೀಯ ರೈಲ್ವೆಯ ಪ್ರಯಾಣಿಕರ ಸಾರಿಗೆ ಆದಾಯವೂ ದಾಖಲೆ ಮಟ್ಟದ ಶೇ. 61ರಷ್ಟು ವೃದ್ಧಿಯಾಗಿದ್ದು, ರೂ. 63,000 ಕೋಟಿ ತಲುಪಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
2022-23ನೇ ಸಾಲಿನಲ್ಲಿ ಸರಕು ಸಾಗಾಣಿಕೆ ಆದಾಯವೂ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದು, ರೂ. 1.62 ಲಕ್ಷ ಕೋಟಿ ತಲುಪುವ ಮೂಲಕ ಶೇ. 15ರಷ್ಟು ಬೆಳವಣಿಗೆಯಾಗಿದೆ ಎಂದು ತಿಳಿಸಲಾಗಿದೆ.
"ಮೂರು ವರ್ಷಗಳ ನಂತರ ಪಿಂಚಣಿ ವೆಚ್ಚವನ್ನು ಸಂಪೂರ್ಣವಾಗಿ ಭರಿಸಲು ರೈಲ್ವೆ ಇಲಾಖೆಗೆ ಸಾಧ್ಯವಾಗಿದೆ. ತುಂಬಿ ತುಳುಕುವ ಆದಾಯ ಹಾಗೂ ಬಿಗಿಯಾದ ವೆಚ್ಚ ನಿರ್ವಹಣೆಯಿಂದ ಕಾರ್ಯಾಚರಣೆ ಅನುಪಾತದಲ್ಲಿ ಶೇ. 98.14ರಷ್ಟು ಆದಾಯ ಗಳಿಸಲು ಸಾಧ್ಯವಾಗಿದ್ದು, ಇದು ರೈಲ್ವೆ ವೆಚ್ಚದ ಗುರಿಯ ಒಳಗೇ ಇದೆ. ಎಲ್ಲ ಆದಾಯ ವೆಚ್ಚಗಳನ್ನು ಪೂರೈಸಿದ ನಂತರ ರೈಲ್ವೆ ಇಲಾಖೆಯು ತನ್ನ ಆಂತರಿಕ ಸಂಪನ್ಮೂಲಗಳಿಗಾಗಿ ರೂ. 3,200 ಕೋಟಿ ಮೂಲ ಬಂಡವಾಳ ಉತ್ಪಾದಿಸಲು ಸಾಧ್ಯವಾಗಿದೆ" ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
2021-22ನೇ ಸಾಲಿನ ರೂ. 39,214 ಕೋಟಿ ಪ್ರಯಾಣಿಕ ಸಾರಿಗೆ ಆದಾಯಕ್ಕೆ ಹೋಲಿಸಿದರೆ, 2022-23ನೇ ಸಾಲಿನಲ್ಲಿ ರೂ. 63,000 ಕೋಟಿ ಆದಾಯ ಗಳಿಸಲಾಗಿದ್ದು, ಇದು ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇ. 61ರಷ್ಟು ಏರಿಕೆಯಾಗಿದೆ ಎಂದೂ ಹೇಳಲಾಗಿದೆ.ಭಾರತೀಯ ರೈಲ್ವೆಯ ಅಧಿಕೃತ ಪ್ರಕಟಣೆಯ ಪ್ರಕಾರ, 2022-23ನೇ ಸಾಲಿನಲ್ಲಿ ಭಾರತೀಯ ರೈಲ್ವೆಯು (Indian Railways) ದಾಖಲೆಯ ರೂ. 2.40 ಲಕ್ಷ ಕೋಟಿ ಗಳಿಕೆ ಮಾಡಿದ್ದು, ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ರೂ.
49,000 ಕೋಟಿ ಆದಾಯ ಏರಿಕೆಯಾಗಿದೆ. ಈ ಏರಿಕೆಯು ಶೇ. 25ರಷ್ಟು ಬೆಳವಣಿಗೆಯನ್ನು ಪ್ರತಿಫಲಿಸಿದೆ ಎಂದು ಹೇಳಿದೆ.
ಭಾರತೀಯ ರೈಲ್ವೆಯ ಪ್ರಯಾಣಿಕರ ಸಾರಿಗೆ ಆದಾಯವೂ ದಾಖಲೆ ಮಟ್ಟದ ಶೇ. 61ರಷ್ಟು ವೃದ್ಧಿಯಾಗಿದ್ದು, ರೂ. 63,000 ಕೋಟಿ ತಲುಪಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
2022-23ನೇ ಸಾಲಿನಲ್ಲಿ ಸರಕು ಸಾಗಾಣಿಕೆ ಆದಾಯವೂ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದು, ರೂ. 1.62 ಲಕ್ಷ ಕೋಟಿ ತಲುಪುವ ಮೂಲಕ ಶೇ. 15ರಷ್ಟು ಬೆಳವಣಿಗೆಯಾಗಿದೆ ಎಂದು ತಿಳಿಸಲಾಗಿದೆ.
"ಮೂರು ವರ್ಷಗಳ ನಂತರ ಪಿಂಚಣಿ ವೆಚ್ಚವನ್ನು ಸಂಪೂರ್ಣವಾಗಿ ಭರಿಸಲು ರೈಲ್ವೆ ಇಲಾಖೆಗೆ ಸಾಧ್ಯವಾಗಿದೆ. ತುಂಬಿ ತುಳುಕುವ ಆದಾಯ ಹಾಗೂ ಬಿಗಿಯಾದ ವೆಚ್ಚ ನಿರ್ವಹಣೆಯಿಂದ ಕಾರ್ಯಾಚರಣೆ ಅನುಪಾತದಲ್ಲಿ ಶೇ. 98.14ರಷ್ಟು ಆದಾಯ ಗಳಿಸಲು ಸಾಧ್ಯವಾಗಿದ್ದು, ಇದು ರೈಲ್ವೆ ವೆಚ್ಚದ ಗುರಿಯ ಒಳಗೇ ಇದೆ. ಎಲ್ಲ ಆದಾಯ ವೆಚ್ಚಗಳನ್ನು ಪೂರೈಸಿದ ನಂತರ ರೈಲ್ವೆ ಇಲಾಖೆಯು ತನ್ನ ಆಂತರಿಕ ಸಂಪನ್ಮೂಲಗಳಿಗಾಗಿ ರೂ. 3,200 ಕೋಟಿ ಮೂಲ ಬಂಡವಾಳ ಉತ್ಪಾದಿಸಲು ಸಾಧ್ಯವಾಗಿದೆ" ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
2021-22ನೇ ಸಾಲಿನ ರೂ. 39,214 ಕೋಟಿ ಪ್ರಯಾಣಿಕ ಸಾರಿಗೆ ಆದಾಯಕ್ಕೆ ಹೋಲಿಸಿದರೆ, 2022-23ನೇ ಸಾಲಿನಲ್ಲಿ ರೂ. 63,000 ಕೋಟಿ ಆದಾಯ ಗಳಿಸಲಾಗಿದ್ದು, ಇದು ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇ. 61ರಷ್ಟು ಏರಿಕೆಯಾಗಿದೆ ಎಂದೂ ಹೇಳಲಾಗಿದೆ.