HEALTH TIPS

ವಿಶ್ವ ಮಲೇರಿಯಾ ದಿನ 2023: ಮಲೇರಿಯಾ ತಡೆಗಟ್ಟಲು ಸೊಳ್ಳೆ ಕಚ್ಚದಂತೆ ತಡೆಗಟ್ಟುವುದು ಹೇಗೆ?

 ಏಪ್ರಿಲ್ 25ನ್ನು ಮಲೇರಿಯಾ ದಿನವನ್ನಾಗಿ ಆಚರಿಸಲಾಗುವುದು. ಈ ವರ್ಷ "Time to deliver zero malaria: invest, innovate, implement" ಥೀಮ್‌ನಲ್ಲಿ ಈ ದಿನವನ್ನು ಆಚರಿಸಲಾಗುವುದು. 2018ರ ವರದಿ ಪ್ರಕಾರ ಭಾರತದ ಶೇ. 98ರಷ್ಟು ಜನಸಂಖ್ಯೆಗೆ ಮಲೇರಿಯಾದ ಅಪಾಯವಿದೆ. 2030ಕ್ಕೆ ಮಲೇರಿಯಾ ಮುಕ್ತ ಭಾರತವನ್ನಾಗಿ ಮಾಡಲು ಸರ್ಕಾರ ಶ್ರಮಿಸುತ್ತಿದೆ. ಆದರೆ ಜನರು ಕೂಡ ಇದಕ್ಕೆ ಕೈ ಜೋಡಿಸಬೇಕಾಗಿದೆ.

ಮಲೇರಿಯಾ ನಿರ್ಲಕ್ಷ್ಯ ಮಾಡಿದರೆ ಪ್ರಾಣಕ್ಕೆ ಅಪಾಯ
ಮಲೇರಿಯಾ ಎಂಬುವುದನ್ನು ನಿರ್ಲಕ್ಷ್ಯ ಮಾಡುವಂತಿಲ್ಲ, ನಿರ್ಲಕ್ಷ್ಯ ಮಾಡಿದರೆ ಇದರಿಂದ ಮನುಷ್ಯರ ಪ್ರಾಣಕ್ಕೆ ಅಪಾಯ ಉಂಟಾಗುವುದು. ಮಲೇರಿಯಾವನ್ನು ನಿಯಂತ್ರಿಸುವುದು ಮುನ್ಸಿಪಾಲಿಟಿಯವರ ಕರ್ತವ್ಯವೆಂದು ಸುಮ್ಮನಿರದೆ ಸೊಳ್ಳೆಗಳ ನಿಯಂತ್ರಣಕ್ಕೆ ಪ್ರತಿಯೊಬ್ಬರು ಮುಂದಾಗಬೇಕು, ಆಗ ಮಾತ್ರ ಈ ಮಲೇರಿಯಾವನ್ನು ಸಂಪೂರ್ಣವಾಗಿ ಹೋಗಲಾಡಿಸಲು ಸಾಧ್ಯ.

ಸೊಳ್ಳೆಗಳ ಉತ್ಪತ್ತಿಗೆ ಅವಕಾಶ ಮಾಡಕೊಡಬೇಡಿ:
ಮಲೇರಿಯಾ ಕಾಯಿಲೆಯು ಸೊಳ್ಳೆಗಳಿಂದಾಗಿ ಉಂಟಾಗುವುದು. ಅನಾಫಿಲಿಸ್ ಎಂಬ ಹೆಣ್ಣು ಸೊಳ್ಳೆ ಕಡಿತದಿಂದಾಗಿ ಮಲೇರಿಯಾ ರೋಗ ಹರಡುವುದು. ಮನೆಯ ಸುತ್ತ ಮುತ್ತ ನಿಂತ ನೀರು ಇದ್ದರೆ ಅದರಲ್ಲಿ ಸೊಳ್ಳೆಗಳು ಕುಳಿತು ಮೊಟ್ಟೆ ಇಡುತ್ತದೆ, ಇದರಿಂದ ಸೊಳ್ಳೆಗಳ ಸಂಖ್ಯೆ ಹೆಚ್ಚಾಗುವುದು.ಮಲೇರಿಯಾ ಸಮಸ್ಯೆ ಮಳೆಗಾಲದಲ್ಲಿ ಹೆಚ್ಚಾಗಿ ಕಂಡು ಬರುವುದು. ಬೇಸಿಗೆಯಲ್ಲೂ ಮನೆಯ ಸುತ್ತ ಮುತ್ತ ಪಾತ್ರೆ, ಬಕೆಟ್‌ನಲ್ಲಿ ನೀರು ತುಂಬಿಟ್ಟರೆ ಅದರಲ್ಲಿ ಸೊಳ್ಳೆಗಳು ಮೊಟ್ಟೆ ಇಡುವುದರಿಂದ ಈ ರೋಗ ಹರಡಬಹುದು. ಆದ್ದರಿಂದ ಬೇಸಿಗೆ ಇರಲಿ, ಮಳೆಗಾಲವಿರಲಿ ಮನೆಯ ಸುತ್ತ-ಮುತ್ತ ನೀರು ನಿಲ್ಲದಂತೆ ಎಚ್ಚರವಹಿಸಿ.

ಮಲೇರಿಯಾ ತಡೆಗಟ್ಟಲು ನೀವೇನು ಮಾಡಬೇಕು?
* ನಿಂತ ನೀರಿನಿಂದ ಸೊಳ್ಳೆಗಳ ಹೆಚ್ಚುವುದರಿಂದ ತೆಂಗಿನ ಚಿಪ್ಪು, ಪ್ಲಾಸ್ಟಿಕ್ ಡಬ್ಬಿ,ಬಕಟ್, ಟಯರ್ ಇವುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ.
* ಮಳೆಗಾಲಕ್ಕೆ ಇನ್ನೂ ಒಂದು ತಿಂಗಳು ಇದೆಯಾದರೂ ಈಗಲೇ ರೋಡ್‌ಗಳಲ್ಲಿರುವ ಗುಂಡಿಗಳನ್ನು ಮುಚ್ಚಿಸಲು ಗ್ರಾಮ ಪಂಚಾಯಿತಿ, ನಗರಸಭೆಗೆ ಅರ್ಜಿ ಸಲ್ಲಿಸಿ.
* ಕಸ ಸೂಕ್ತ ರೀತಿಯಲ್ಲಿ ವಿಲೇವಾರಿವಾಗುತ್ತಿದೆಯೇ ನೋಡಿಕೊಳ್ಳಿ. ನೀವು ಕೂಡ ಅಷ್ಟೇ ಒಣಕಸ-ಹಸಿ ಕಸ ಪ್ರತ್ಯೇಕಿಸಿ ಪೌರಕಾರ್ಮಿಕರಿಗೆ ನೀಡಿ.
* ನೀರು ತುಂಬಿಡುವ ಪಾತ್ರೆಗಳಲ್ಲಿ ಮುಚ್ಚಳವಿರಬೇಕು
* ಮನೆಗೆ ಎಸಿ ಹಾಕಿಸಿದ್ದರೆ ನೀರನ್ನು ಸಂಗ್ರಹಿಸಲು ಒಂದು ಬಕೆಟ್ ಇಟ್ಟು ಆ ನೀರನ್ನು ನಿಯಮಿತವಾಗಿ ಬಿಸಾಡಿ.

ಸೊಳ್ಳೆ ಕಚ್ಚುವುದನ್ನು ತಡೆಗಟ್ಟುವುದು ಹೇಗೆ?

* ಸೊಳ್ಳೆ ಕಚ್ಚದಿರಲು ಕಿಟಕಿಗೆ ಸೊಳ್ಳೆ ಪರದೆ ಹಾಕಿಸಿ, ಬೆಡ್‌ಗೆ ಸೊಳ್ಳೆ ಪರದೆ ಹಾಕಿಸಿ.
* ಬೆಳಗ್ಗೆ ಹಾಗೂ ಸಂಜೆ ಹೊತ್ತು ಕಿಟಿಕಿ, ಬಾಗಿಲುಗಳನ್ನು ತೆರೆಯಬೇಡಿ
* ಉದ್ದ ತೋಳಿನ ಉಡುಪು ಧರಿಸಬೇಕು
* ಸೊಳ್ಳೆ ಕಚ್ಚದಂತೆ ಸ್ಪ್ರೇ ಬಳಸಿ.
* ಮಕ್ಕಳಿಗೂ ಸೊಳ್ಳೆ ಕಚ್ಚದಂತೆ ಸೂಕ್ತ ಮುನ್ನೆಚ್ಚರಿಕೆವಹಿಸಿ.
* ಸೊಳ್ಳೆ ಕಚ್ಚದಿರಲು ಕ್ರೀಮ್ ಅಥವಾ repellent ಬಳಸಿ.
ಸೊಳ್ಳೆ ಕಚ್ಚುವುದನ್ನು ತಡೆಗಟ್ಟುವುದರಿಂದ ಮಲೇರಿಯಾ ಮಾತ್ರವಲ್ಲ ಡೆಂಗ್ಯೂ ಕೂಡ


ತಡೆಗಟ್ಟಬಹುದು.

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries