ನವದೆಹಲಿ: ಕೋವಿಡ್
ಸಾಂಕ್ರಾಮಿಕದ ನಂತರ ಬ್ರ್ಯಾಂಡೆಡ್ ಹಾಲು ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.
ಹೀಗಾಗಿ ಪ್ರಸಕ್ತ ಹಣಕಾಸು ವರ್ಷ ದಲ್ಲಿ ವರಮಾನ ಶೇಕಡ 20ರಷ್ಟು ಹೆಚ್ಚಾಗಿ ₹ 66 ಸಾವಿರ
ಕೋಟಿಗೆ ತಲುಪುವ ನಿರೀಕ್ಷೆ ಇದೆ ಎಂದು ಅಮೂಲ್ ಬ್ರ್ಯಾಂಡ್ ಅಡಿಯಲ್ಲಿ ವಹಿವಾಟು ನಡೆಸುವ ಗುಜರಾತ್ಸಹಕಾರ ಹಾಲು ಮಾರಾಟ ಮಹಾಮಂಡಳದ (ಜಿಸಿಎಂ
ಎಂಎಫ್) ವ್ಯವಸ್ಥಾಪಕ ನಿರ್ದೇಶಕ ಜಯನ್ ಮೆಹ್ತಾ ಹೇಳಿದ್ದಾರೆ.