ತಿರುವನಂತಪುರ: . 'ಮಹಿಳಾ ಸಬಲೀಕರಣ ಸಮಾನತೆ ಮತ್ತು ಆರ್ಥಿಕತೆಗೆ ಪ್ರಯೋಜನಗಳು' ಎಂಬ ವಿಷಯದ ಕುರಿತು ಎರಡನೇ ಜಿ-20 ಸಬಲೀಕರಣ ಸಭೆ ತಿರುವನಂತಪುರದಲ್ಲಿ ಆರಂಭಗೊಂಡಿತು. ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ರಾಜ್ಯ ಸಚಿವೆ ಡಾ. ಮುಂಜಾಪರ ಮಹೇಂದ್ರಭಾಯಿ ಅವರು ಉದ್ಘಾಟಿಸಿದರು.
ಅವರು ಮಹಿಳಾ ನೇತೃತ್ವದ ಅಭಿವೃದ್ಧಿಯನ್ನು ಉತ್ತೇಜಿಸಲು ಈ ಸಂದರ್ಭ ಸಲಹೆ ನೀಡಿದರು ಮತ್ತು ಈ ಕ್ಷೇತ್ರದಲ್ಲಿ ದೇಶದ ಸಾಧನೆಗಳನ್ನು ಎತ್ತಿ ತೋರಿಸಿದರು. 30 ದಶಲಕ್ಷಕ್ಕೂ ಹೆಚ್ಚು ಮಹಿಳೆಯರು ಕೈಗಾರಿಕಾ ಸಾಲದಿಂದ ಪ್ರಯೋಜನ ಪಡೆದಿರುವÀರು. ಮಹಿಳೆಯರಿಗಾಗಿ 257 ಮಿಲಿಯನ್ ಜನಧನ್ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಹಣಕಾಸು ಸೇವೆಗಳಿಗೆ ಹೆಚ್ಚಿದ ಪ್ರವೇಶ ಲಭಿಸಿದೆ. ಸಶಸ್ತ್ರ ಪಡೆಗಳಲ್ಲಿ 2091 ಮಹಿಳಾ ಅಧಿಕಾರಿಗಳನ್ನು ಖಾಯಂ ಆಧಾರದ ಮೇಲೆ ನೇಮಿಸಲಾಗಿದೆ ಎಂದು ಸಚಿವರು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಾರ್ಯದರ್ಶಿ ಇಂದೀವರ್ ಪಾಂಡೆ ಮಾತನಾಡಿ, ಭಾರತವು ಮಹಿಳೆಯರ ಜೀವನದ ಸಮಸ್ಯೆಗಳನ್ನು ಕೇಂದ್ರೀಕರಿಸುವ ಮೂಲಕ ವಿಶ್ವಕ್ಕೆ ಮಾದರಿಯಾಗಿದೆ. ಆಯುμÁ್ಮನ್ ಭಾರತ್ ಫಲಾನುಭವಿಗಳಲ್ಲಿ 49.3% ಮಹಿಳೆಯರು, 500 ಮಿಲಿಯನ್‍ಗಿಂತಲೂ ಹೆಚ್ಚು ನಾಗರಿಕರಿಗೆ ಉಚಿತ ಚಿಕಿತ್ಸೆಯನ್ನು ಒದಗಿಸಲಾಗುತ್ತಿದೆ. ಮುಟ್ಟಿನ ನೈರ್ಮಲ್ಯವನ್ನು ಉತ್ತೇಜಿಸುವ ಜನೌಷಧಿ ಕೇಂದ್ರಗಳ ಮೂಲಕ 310 ಮಿಲಿಯನ್ ಆಕ್ಸೋ-ಬಯೋಡಿಗ್ರೇಡಬಲ್ ಸ್ಯಾನಿಟರಿ ಉತ್ಪನ್ನಗಳನ್ನು ವಿತರಿಸಲಾಗಿದೆ ಎಂದು ಅವರು ಹೇಳಿದರು.
ಭಾರತದ ಎಸ್.ಟಿ.ಇ.ಎಂ. ಪದವೀಧರರಲ್ಲಿ 43% ಮಹಿಳೆಯರು ಎಂದು ಸಂಗೀತಾ ರೆಡ್ಡಿ ಹೇಳಿದರು. ವಿಶೇಷ ಪ್ರದರ್ಶನವನ್ನು ಕೇಂದ್ರ ರಾಜ್ಯ ಸಚಿವರು ಉದ್ಘಾಟಿಸಿದರು. ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ ಆಯೋಜಿಸಿರುವ ಈ ಪ್ರದರ್ಶನವು ಆರ್ಥಿಕತೆ ಮತ್ತು ಸಾಂಪ್ರದಾಯಿಕ ಉದ್ಯಮಗಳ ಮೇಲೆ ಮಹಿಳೆಯರ ಪ್ರಭಾವವನ್ನು ಎತ್ತಿ ತೋರಿಸುತ್ತದೆ. ವೈಜ್ಞಾನಿಕ ಮತ್ತು ಸಾಂಪ್ರದಾಯಿಕವಲ್ಲದ ಕೆಲಸ ಕ್ಷೇತ್ರಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಬಲಪಡಿಸುವುದು ಸೇರಿದಂತೆ ವಿಷಯಗಳ ಕುರಿತು ಸಮಿತಿ ಚರ್ಚೆಗಳು ನಡೆಯಲಿವೆ.
ಜಿ-20 ಸಬಲೀಕರಣ ಸಭೆ ಆರಂಭ; ಭಾರತ ಲಿಂಗ ಸಮಾನತೆಗೆ ಪ್ರಾಮುಖ್ಯತೆ ನೀಡುತ್ತಿದೆ: ಕೇಂದ್ರ ಸಚಿವ ಡಾ. ಮುಂಜಾಪರ ಮಹೇಂದ್ರಭಾಯಿ
0
ಏಪ್ರಿಲ್ 06, 2023
Tags