ಕುಂಬಳೆ: ಅನಂತಪುರ ತ್ಯಾಜ್ಯ ಸಂಸ್ಕರಣಾಘಟಕ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸೇವ್ ಅನಂತಪುರ ಕ್ರಿಯಾ ಸಮಿತಿ ವತಿಯಿಂದ ಮಂಗಳವಾರ ಅನಂತಪುರದಲ್ಲಿ ನಡೆಸಲಾದ ರಸ್ತೆ ತಡೆ ಪ್ರತಿಭಟನೆಗೆ ಸಂಬಂಧಿಸಿ ಕುಂಬಳೆ ಠಾಣೆ ಪೊಲೀಸರು 212ಮಂದಿ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.
ರಸ್ತೆ ತಡೆಯೊಡ್ಡಿರುವುದು, ಕಾನೂನು ವಿರುದ್ಧವಾಗಿ ಗುಂಪು ಸೇರಿರುವುದು ಮುಂತಾದ ಪ್ರಕರಣಗಳಿಗೆ ಸಂಬಂಧಿಸಿ ಪೇರಾಲ್-ಕಣ್ಣುರು, ಅನಂತಪುರ ನಿವಾಸಿಗಳಾದ ಸಿದ್ದೀಕ್, ಸಉನಿಲ್, ಕೇಶವ ನಾಯ್ಕ್, ಕೃಷ್ಣ ಆಳ್ವ, ರಜಾಕ್, ನಾರಾಯಣ ಸೇರಿದಂತೆ ಹಲವರ ವಿರುದ್ಧ ಈ ಕೇಸು. ಕಸಾಯಿಖಾನೆಗಳ ಎಲುಬು, ಚರ್ಮ ಸಏರಿದಂತೆ ವಿವಿಧ ತ್ಯಾಜ್ಯವನ್ನು ಇಲ್ಲಿನ ಘಟಕಕ್ಕೆ ತಂದು ಸಂಸ್ಕರಿಸಲಾಗುತ್ತಿದ್ದು, ಈ ಸಂದರ್ಭ ಮಲಿನ ನೀರು ತೆರೆದ ಪ್ರದೇಶದಲ್ಲಿ ಹರಿಯುವುದಲ್ಲದೆ, ಈ ಪ್ರದೇಶದಲ್ಲಿ ದುರ್ಗಂಧ ವ್ಯಾಪಿಸುತ್ತಿರುವ ಬಗ್ಗೆ ನಾಗರಿಕರು ಕ್ರಿಯಾ ಸಮಿತಿ ರಚಿಸಿ ಪ್ರತಿಭಟನೆಗೆ ಮುಂದಾಗಿದ್ದರು.
ತ್ಯಾಜ್ಯ ಸಂಸ್ಕರಣಾ ಘಟಕ ವಿರುದ್ಧ ಪ್ರತಿಭಟನೆ-212ಮಂದಿಗೆ ಕೇಸು
0
ಏಪ್ರಿಲ್ 06, 2023