ಕಾಸರಗೋಡು: ರಾಜ್ಯ ಮಾನವ ಹಕ್ಕುಗಳ ಆಯೋಗದ ನ್ಯಾಯಾಂಗ ಸದಸ್ಯ ಕೆ.ಬೈಜುನಾಥ್ ಅವರು ಕಾಸರಗೋಡು ಸರ್ಕಾರಿ ಅತಿಥಿ ಗೃಹದಲ್ಲಿ ನಡೆಸಿದ ದೂರು ಸ್ವೀಕಾರ ಅದಲತ್‍ನಲ್ಲಿ ಒಟ್ಟು 40ದೂರುಗಳಲ್ಲಿ 22ದೂರುಗಳನ್ನು ಪರಿಗಣಿಸಿದ್ದಾರೆ.
ಉಳಿದವುಗಳನ್ನು ಮುಂದಿನ ಪ್ರಕ್ರಿಯೆಗಳಿಗಾಗಿ ಮತ್ತು ಹೆಚ್ಚಿನ ತನಿಖೆಗಳಿಗಾಗಿ ಕಾಯ್ದಿರಿಸಲಾಯಿತು. ರಾಷ್ಟ್ರೀಯ ವಿಚಾರಣೆ ಮತ್ತು ಮುಂದಿನ ತನಿಖೆಗಾಗಿ ಕಲಾಪವನ್ನು ಮುಂದೂಡಲಾಯಿತು. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಅಂಗವಾಗಿ ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಏಳು ಕುಟುಂಬಗಳು ಆಯೋಗಕ್ಕೆ ದೂರು ನೀಡಿದ್ದವು. ರಸ್ತೆ ನಿರ್ಮಾಣದ ಅಂಗವಾಗಿ ಅವರ ಜಮೀನು ಇಬ್ಭಾಗವಾಗಿದ್ದು, ಜಮೀನಿಗೆ ತೆರಳುವ ರಸ್ತೆ ನಾಪತ್ತೆಯಾಗಿದೆ ಎಂಬ ದೂರಿನ ಮೇರೆಗೆ ಪ್ರಸಕ್ತ ಜಮೀನಿನಲ್ಲಿ ಜಮೀನಿಗೆ ತೆರಳಲು ರಸ್ತೆ ನಿರ್ಮಾಣ ಮಾಡಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಯೋಜನಾ ವ್ಯವಸ್ಥಾಪಕರು ಭರವಸೆ ನೀಡಿದರು.
ಮಾನವ ಹಕ್ಕುಗಳ ಆಯೋಗ: ಅದಾಲತ್-22ದೂರುಗಳ ಪರಿಗಣನೆ
0
ಏಪ್ರಿಲ್ 19, 2023