ಕಾಸರಗೋಡು: ರಾಜ್ಯ ಸರ್ಕಾರದ ಮೀನುಗಾರಿಕಾ ಇಲಾಖೆಯ ಆಶ್ರಯದಲ್ಲಿ ಆಯೋಜಿಸಲಾಗುವ 'ಕರಾವಳಿ ಸಂಗಮ' ವಿಶೇಷ ಕಾರ್ಯಕ್ರಮದ ಪೂರ್ವಭಾವಿಯಾಗಿ ತ್ರಿಕರಿಪುರ ಕ್ಷೇತ್ರ ಸಂಘಟನಾ ಸಮಿತಿ ರಚನಾ ಸಭೆ ಚೆರುವತ್ತೂರು ಪಂಚಾಯಿತಿ ಸಭಾಂಗಣದಲ್ಲಿ ಜರುಗಿತು.
ಶಾಸಕ ಎಂ.ರಾಜಗೋಪಾಲನ್ ಸಮಾರಂಭ ಉದ್ಘಾಟಿಸಿದರು. ಚೆರುವತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಿ.ವಿ.ಪ್ರಮೀಳಾ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎಂ.ರಾಜಗೋಪಾಲನ್ ಅಧ್ಯಕ್ಷ ಮತ್ತು ವಲಿಯಪರಂಬ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿ.ವಿ.ಸಜೀವನ್ ಸಂಚಾಲಕರಾಗಿರುವ ಸಂಘಟನಾ ಸಮಿತಿಯನ್ನು ರಚಿಸಲಾಯಿತು. ವಿವಿಧ ರಾಜಕೀಯ ಮುಖಂಡರು, ಜನಪ್ರತಿನಿಧಿಗಳು, ಮೀನುಗಾರರ ಅಭಿವೃದ್ಧಿ ಕ್ಷೇಮಾಭಿವೃದ್ಧಿ ಸಹಕಾರ ಸಂಘದ ಅಧ್ಯಕ್ಷರು, ಮೀನುಗಾರರು ಹಾಗೂ ಮೀನುಗಾರರ ಗ್ರಾ.ಪಂ.ಆಡಳಿತ ಮಂಡಳಿ ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು. ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಪ್ರೀತಾ ಕರ್ಯಕ್ರಮಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಮೀನುಗಾರಿಕಾ ವಿಸ್ತರಣಾಧಿಕಾರಿ ಎಸ್. ಐಶ್ವರ್ಯ ಸ್ವಾಗತಿಸಿದರು. ಮೀನುಗಾರಿಕಾ ಅಧಿಕಾರಿ ಪಿ.ಕೆ.ವೇಣುಗೋಪಾಲನ್ ವಂದಿಸಿದರು. ತ್ರಿಕರಿಪುರ ಜಿಲ್ಲೆಯಲ್ಲಿ ಮೇ 23 ರಂದು ಮಧ್ಯಾಹ್ನ 3 ರಿಂದ ಸಂಜೆ 7 ರವರೆಗೆ ತ್ರಿಕ್ಕರಿಪುರ ಕ್ಷೇತ್ರದ ಕರಾವಳಿ ಸಂಗಮ ಆಯೋಜಿಸಲಾಗಿದೆ.
ಮೇ 23 ರಂದು ತ್ರಿಕರಿಪುರದಲ್ಲಿ 'ಕರಾವಳಿ ಸಂಗಮ'-ಸಮಿತಿ ರಚನಾಸಭೆ
0
ಏಪ್ರಿಲ್ 18, 2023