ಮಂಜೇಶ್ವರ: ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವವು ಮೇ 14 ರಿಂದ ಮೇ 24ರವರೆಗೆ ಜರಗಲಿದ್ದು, ಆ ಪ್ರಯುಕ್ತ ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಆಶ್ರಯಯದಲ್ಲಿ ಕಾಸರಗೋಡು ವಲಯದ ಬ್ರಹ್ಮಕಲಶೋತ್ಸವ ಸಿದ್ಧತಾ ಸಭೆಯು ಭಾನುವಾರ ಏಪ್ರಿಲ್ 23 ರಂದು ಬೆಳಗ್ಗೆ 9.30 ಕ್ಕೆ ಜಿಲ್ಲಾ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಗೋಪಾಲ ಸಾಲ್ಯಾನ್ ಕುಂಜತ್ತೂರು (ಮೊಸ್ಕೋ ಹಾಲ್ ಹಿಂಬದಿ )ರವರ ನಿವಾಸದಲ್ಲಿ ಜರಗಲಿದೆ. ಸಭೆಗೆ ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಸರ್ವ ಕಾರ್ಯಕಾರಿ ಸಮಿತಿ ಸದಸ್ಯರು, ಕುಲಾಲ ಪಂಚಾಯತಿ ಶಾಖೆಗಳ ಸಮಿತಿ ಸದಸ್ಯರು ಹಾಗೂ ಶ್ರೀ ವೀರನಾರಾಯಣ ಕ್ಷೇತ್ರದ ಭಕ್ತಾಧಿಗಳಾದ ಜಿಲ್ಲೆಯ ಸಮಸ್ತ ಕುಲಾಲ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸ ಬೇಕೆಂದು ಜಿಲ್ಲಾ ಕುಲಾಲ ಸಂಘದ ಅಧ್ಯಕ್ಷ ನ್ಯಾಯವಾದಿ ರವೀಂದ್ರ ಮುನ್ನಿಪ್ಪಾಡಿ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
ಶ್ರೀ ವೀರ ನಾರಾಯಣ ದೇವಸ್ಥಾನ ಬ್ರಹ್ಮಕಲಶೋತ್ಸವ: ಕಾಸರಗೋಡು ವಲಯ ಸಿದ್ಧತಾ ಸಭೆ 23 ರಂದು
0
ಏಪ್ರಿಲ್ 20, 2023