ಕೊಚ್ಚಿ: ಪ್ರಧಾನಿ ನರೇಂದ್ರ ಮೋದಿ ಅವರ ಕೇರಳ ಪ್ರವಾಸವನ್ನು ಏಪ್ರಿಲ್ 24ಕ್ಕೆ ನಿಗದಿಪಡಿಸಲಾಗಿದೆ. ಇದೇ ತಿಂಗಳ 25ಕ್ಕೆ ಎಂದು ಮೊದಲು ಘೋಷಿಸಲಾಗಿತ್ತು.
ಆದರೆ, ಕರ್ನಾಟಕದಲ್ಲಿ ವಿಧಾನಸಭಾ ಚುನಾವಣಾ ಪ್ರಚಾರದ ಭಾಗವಾಗಲಿರುವ ಕಾರಣ ಇದೇ 24ರಂದು ಕೇರಳ ಭೇಟಿ ನೀಡುವರೆಂದು ತಿಳಿಸಲಾಗಿದೆ.
ಕೊಚ್ಚಿಯಲ್ಲಿ ನಡೆಯುವ 'ಯುವಂ' ಕಾರ್ಯಕ್ರಮದಲ್ಲಿ ಭಾಗವಹಿಸಲು ನರೇಂದ್ರ ಮೋದಿ ಕೇರಳಕ್ಕೆ ಆಗಮಿಸುತ್ತಿದ್ದಾರೆ. ಕಾಂಗ್ರೆಸ್‍ನ ಮಾಜಿ ಸಾಮಾಜಿಕ ಮಾಧ್ಯಮ ಸಂಯೋಜಕ ಎ.ಕೆ. ಆ್ಯಂಟನಿ ಪುತ್ರ ಅನಿಲ್ ಆಂಟೋನಿ ಮೋದಿ ಜತೆ ವೇದಿಕೆ ಹಂಚಿಕೊಳ್ಳಲಿದ್ದಾರೆ. ಪ್ರಧಾನಿಯವರ ರೋಡ್ ಶೋ ಕೂಡ ಕೊಚ್ಚಿಯಲ್ಲಿ ನಡೆಯಲಿದೆ.
ರೋಡ್ ಶೋ ನೇವಲ್ ಏರ್ ಸ್ಟೇಷನ್, ವೆಲ್ಲಿಂಗ್ಟನ್ ಐಲ್ಯಾಂಡ್‍ನಿಂದ ತೇವಾರಾ ಕಾಲೇಜು ಮೈದಾನದವರೆಗೆ ನಡೆಯಲಿದೆ. ನಿನ್ನೆ ಕೊಚ್ಚಿಯಲ್ಲಿ ಸಭೆ ಸೇರಿದ್ದ ಬಿಜೆಪಿ ರಾಜ್ಯ ಕೋರ್ ಕಮಿಟಿ ಪ್ರಧಾನಿಯವರ ಕೇರಳ ಭೇಟಿಗೆ ಅಗತ್ಯ ಸಿದ್ಧತೆಗಳನ್ನು ಪರಿಶೀಲಿಸಿತು.
ಪ್ರಧಾನಿಯವರ ಕೇರಳ ಭೇಟಿ ದಿನಾಂಕ ಬದಲಾವಣೆ: 24ರಂದು ಕೊಚ್ಚಿಗೆ
0
ಏಪ್ರಿಲ್ 13, 2023