ಕಾಸರಗೋಡು: ರಾಜ್ಯ ಸರ್ಕಾರದ 2ನೇ ವಾರ್ಷಿಕೋತ್ಸವದ ಅಂಗವಾಗಿ ನನ್ನ ಕೇರಳ-ಪ್ರದರ್ಶನ ಮಾರಾಟಮೇಳ-2023 ಅಂಗವಾಗಿ ಮಹಿಳಾ ಫುಟ್ಬಾಲ್ ಪಂದ್ಯಾವಳಿ, ಏಪ್ರಿಲ್ 24 ರಂದು ಸಂಜೆ 4ಕ್ಕೆ ಕಾಸರಗೋಡು ಹಿಲ್‍ಟಾಪ್ ಅರಿನಾ ಒಳಾಂಗಣ ಫುಡ್‍ಸಾಲ್‍ನಲ್ಲಿ ನಡೆಯಲಿದೆ.
ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್‍ಚಂದ್ ಫುಟ್ ಬಾಲ್ ಪಂದ್ಯಾಟ ಉದ್ಘಾಟಿಸುವರು. ಯುವ ಮಹಿಳಾ ಜನಪ್ರತಿನಿಧಿಗಳು ಮತ್ತು ಕುಟುಂಬಶ್ರೀ ಕಾರ್ಯಕರ್ತರ ಮಧ್ಯೆ ಸ್ಪರ್ಧೆ ನಡೆಯಲಿರುವುದಾಗಿ ಪ್ರಕಟಣೆ ತಿಳಿಸಿದೆ.