ಕಾಸರಗೋಡು: ನನ್ನ ಕೇರಳ ವಸ್ತುಪ್ರದರ್ಶನ ಮತ್ತು ಮಾರ್ಕೆಟಿಂಗ್ ಫೇರ್ 2023 ರ ಅಂಗವಾಗಿ, ಮಾಹಿತಿ ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಹಿತಿ ಕಛೇರಿ ಆಯೋಜಿಸಿರುವ 'ಕೇಕ್ ತಯಾರಿಸಿ ಮತ್ತು ಬಹುಮಾನ ಗೆಲ್ಲಿರಿ'ಸ್ಪರ್ಧೆಯು ಏ. 25 ರಂದು ಬೆಳಿಗ್ಗೆ 10.30 ಕ್ಕೆ ವಿದ್ಯಾನಗರದ ಅಸಾಪ್ ಸಮುದಾಯ ಕೌಶಲ್ಯ ಪಾರ್ಕಿನಲ್ಲಿ ಜರುಗಲಿದೆ. ಸ್ಪರ್ಧಾಳುಗಳು ಸ್ವಂತವಾಗಿ ತಯಾರಿಸಿದ ಎರಡು ಕಿಲೋಗ್ರಾಂ ಕೇಕ್‍ನೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.
ಸ್ಪರ್ಧೆಗೆ ವಯಸ್ಸಿನ ಯಾವುದೇ ಮಿತಿ ಇರುವುದಿಲ್ಲ. ಪ್ರಥಮ ಮತ್ತು ದ್ವಿತೀಯ ರನ್ನರ್ಸ್‍ಅಪ್‍ಗಳಿಗೆ ನಗದು ಬಹುಮಾನ ಮತ್ತು ಪ್ರಮಾಣಪತ್ರ ನೀಡಲಾಗುವುದು. ಆಸಕ್ತರು ಏಪ್ರಿಲ್ 24 ರೊಳಗೆ ಠಿಡಿಜಛಿoಟಿಣesಣ@gmಚಿiಟ.ಛಿom ಇಮೇಲ್ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ (04994 255145)ಸಂಪರ್ಕಿಸುವಂತೆ ಪ್ರಕಟಣೆ ತಿಲಿಸಿದೆ.