ಕುಂಬಳೆ: ಕೆನರಾ ಅಭಿವೃದ್ಧಿ ಮತ್ತು ಶಾಂತಿ ಸಂಸ್ಥೆ ಮಂಗಳೂರು, ಸ್ಪಂದನ ಒಕ್ಕೂಟ ಕುಂಬಳೆ ಮತ್ತು ಸಂತ ಮೋನಿಕಾ ದೇವಾಲಯ ಕುಂಬಳೆ, ಇವರ ಜಂಟಿ ಆಶ್ರಯದಲ್ಲಿ ಪರಿಸರ ಸಂರಕ್ಷಣಾ ಸಮಾವೇಶವನ್ನು ಏಪ್ರಿಲ್ 25 ರಂದು ಕುಂಬಳೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ 10 ಕ್ಕೆ ಕುಂಬಳೆ ಸಂತ ಮೋನಿಕಾ ಶಾಲಾ ಸಭಾಂಗಣದಲ್ಲಿ ನಡೆಯುವ ಸಮಾವೇಶವನ್ನು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಉದ್ಘಾಟಿಸುವರು.
ಸಂತ ಮೋನಿಕಾ ದೇವಾಲಯದ ಧರ್ಮ ಗುರು ವಂದನೀಯ ಅನಿಲ್ ಪ್ರಕಾಶ್ ಡಿ ಸಿಲ್ವಾ ಅಧ್ಯಕ್ಷತೆ ವಹಿಸುವರು. ಸಿ ಒ ಡಿ ಪಿ ಸಂಸ್ಧೆಯ ನಿರ್ದೇಶಕ ವಂದನೀಯ ವಿನ್ಸೆಂಟ್ ಡಿ ಸೋಜ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡುವರು .
ಮುಖ್ಯ ಅತಿಥಿಗಳಾಗಿ ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷೆ ಶಮೀನಾ ಟೀಚರ್, ಕುಂಬಳೆ ಗ್ರಾಮ ಪಂಚಾಯತಿ ಅಧ್ಯಕ್ಷೆ ತಾಹೀರ ಯೂಸಫ್, ಕುಂಬಳೆ ಪಂಚಾಯತಿ ಸದಸ್ಯ ವಿವೇಕಾನಂದ ಶೆಟ್ಟಿ, ಸಂತ ಮೋನಿಕಾ ದೇವಾಲಯದ ಪಾಲನಾ ಸಮಿತಿಯ ಉಪಾಧ್ಯಕ್ಷ ರಾಜು ಸ್ಟೀಪನ್ ಡಿ ಸೋಜ, ಲಿಡಿಯಾ ಡಿ ಸೋಜ, ಸ್ಪಂಧನ ಒಕ್ಕೂಟದ ಅಧ್ಯಕ್ಷೆ ಜಯಶ್ರೀ ಮೊಂತೇರೊ, ಸ್ಪಂಧನ ಒಕ್ಕೂಟದ ಕಾರ್ಯದರ್ಶಿ ಲಕ್ಷ್ಮಿ ಉಪಸ್ಥಿತರಿರುವರು.
ಸಭಾ ಕಾರ್ಯಕ್ರಮದ ನಂತರ ಖ್ಯಾತ ಪರಿಸರ ಪ್ರೇಮಿ ಆನಂದ ಪೆಕ್ಕಾಡಮ್‍ವರು ಪರಿಸರ ಸಂರಕ್ಷಣೆಯ ಮಹತ್ವದ ಬಗ್ಗೆ ಮಾಹಿತಿ ನೀಡಲಿದ್ದಾರೆ.ಫಾದರ್ ಮುಲ್ಲರ್ಸ್ ಆಸ್ಪತ್ರೆಯ ಕಾಲೇಜ್ ವಿದ್ಯಾರ್ಥಿಗಳಿಂದ ಕ್ಯಾನ್ಸರ್ ರೋಗದ ಬಗ್ಗೆ ಕಿರು ನಾಟಕ, ವಿವಿಧ ಸ್ವ-ಸಹಾಯ ಸಂಘಗಳಿಂದ ಸಾಂಸ್ಕ್ರತಿಕ ಕಾರ್ಯಮ ನಡೆಯಲಿದೆ.