ಬದಿಯಡ್ಕ: ಮೀನಾಡಿಪಳ್ಳ ಶ್ರೀ ವನದುರ್ಗಾ, ವನಶಾಸ್ತಾ, ರಕ್ತೇಶ್ವರಿ, ನಾಗದೇವಸ್ಥಾನದ ವಾರ್ಷಿಕೋತ್ಸವ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ತಂತ್ರಿವರ್ಯರ ನೇತೃತ್ವದಲ್ಲಿ ಏಪ್ರಿಲ್ 26 ಬುಧವಾರ ಜರಗಲಿರುವುದು. ಏ.25ರಂದು ಬೆಳಗ್ಗೆ 10.30ಕ್ಕೆ ಉಗ್ರಾಣ ತುಂಬಿಸುವುದು. ಏ.26 ಬುಧವಾರ ಬೆಳಗ್ಗೆ 6 ಕ್ಕೆ ಗಣಪತಿಹೋಮ, 8.30ರಿಂದ ಶ್ರೀ ಶಾಸ್ತಾ ಮಹಿಳಾ ಭಜನಾ ಸಂಘ ಮಾನ್ಯ, 9.30ರಿಂದ ಶ್ರೀ ವನದುರ್ಗಾ ವನಶಾಸ್ತಾ ಭಜನ ಸಂಘ ಮೀನಾಡಿಪಳ್ಳ, 10.30ರಿಂದ ಶ್ರೀ ವನದುರ್ಗಾ ಬಾಲಗೋಕುಲ ಮೀನಾಡಿಪಳ್ಳ ಇದರ ಮಕ್ಕಳಿಂದ ಭಜನೆ, 11.30ರಿಂದ ಅಶ್ವಿನಿ ರಾಜ್ ಪಟ್ಟಾಜೆ ಇವರ ಶಿಷ್ಯರಿಂದ ರಾಗಸುಧಾ ಸಂಗೀತ ಕಾರ್ಯಕ್ರಮ, 12.30ಕ್ಕೆ ಮಹಾಪೂಜೆ, ಅನ್ನದಾನ ನಡೆಯಲಿದೆ. ಸಂಜೆ 6ಕ್ಕೆ ಶ್ರೀ ಶಕ್ತಿ ಫ್ರೆಂಡ್ಸ್ ಕ್ಲಬ್ ಶಕ್ತಿನಗರ ಮತ್ತು ಊರವರಿಂದ ಉಲೆ ಸಮರ್ಪಣೆ, 7 ಗಂಟೆಗೆ ಶ್ರೀ ವನದುರ್ಗಾ ಮಾತೃಸಮಿತಿಯವರಿಂದ ತಿರುವಾದಿರ, 7.30ಕ್ಕೆ ನೆಲ್ಲಿಕಟ್ಟೆ ಶ್ರೀ ಧರ್ಮಶಾಸ್ತಾ ಭಜನಾಮಂದಿರದ ಮಾತೃಸಮಿತಿ ಹಾಗೂ ಕನ್ನಾಡಿಪಾರೆ ಶ್ರೀ ಧರ್ಮಶಾಸ್ತಾ ಭಜನಾ ಮಂದಿರದ ಮಾತೃಸಮಿತಿಯವರಿಂದ ಕೈಕೊಟ್ಟುಕಳಿ, ರಾತ್ರಿ 9 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, 9.30ರಿಂದ ಊರಮಕ್ಕಳಿಂದ ನೃತ್ಯವೈವಿಧ್ಯ ಪ್ರದರ್ಶನಗೊಳ್ಳಲಿದೆ.