ನವದೆಹಲಿ : ಏಪ್ರಿಲ್ 19 ರಂದು ಬೆಳಿಗ್ಗೆ 7 ಗಂಟೆಗೆ ನಿರುಪಯುಕ್ತ ಉಪಗ್ರಹವೊಂದು ಬಾಹ್ಯಾಕಾಶದಿಂದ ಭೂಮಿಯ ಮೇಲೆ ಬೀಳಲಿದೆ. ನಾಸಾ ಈ ಉಪಗ್ರಹವನ್ನ 21 ವರ್ಷಗಳ ಹಿಂದೆ ಫೆಬ್ರವರಿ 2002ರಂದು ಉಡಾವಣೆ ಮಾಡಿತು. ಇದರ ಹೆಸರು RHESSI ಸ್ಪೇಸ್‌ಕ್ರಾಫ್ಟ್.
ಇದು ಪತನದ ಸಮಯ ಮತ್ತು ಮಾರ್ಗವನ್ನ ನಿಖರವಾಗಿ ಲೆಕ್ಕಾಚಾರ ಮಾಡಲು ವಿಜ್ಞಾನಿಗಳಿಗೆ ಸಾಧ್ಯವಾಗದಿರುವುದು ಕಳವಳಕಾರಿ ವಿಷಯವಾಗಿದೆ. ಅದ್ರಂತೆ, ಬೆಳಿಗ್ಗೆ ಏಳು ಗಂಟೆಯಿಂದ 16 ಗಂಟೆಗಳ ಮೊದಲು ಅಥವಾ 16 ಗಂಟೆಗಳ ನಂತರ ಯಾವುದೇ ಸಮಯದಲ್ಲಿ ಭೂಮಿಯ ಮೇಲೆ ಬೀಳುತ್ತದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.
ಸಮುದ್ರದಲ್ಲಿ ಬಿದ್ದರೆ ತೊಂದರೆ ಇಲ್ಲ. ಆದ್ರೆ, 273 ಕೆಜಿ ತೂಕವಿರುವ ಈ ಉಪಗ್ರಹ ವಸತಿ ಪ್ರದೇಶದಲ್ಲಿ ಬಿದ್ದರೆ, ಸಾಕಷ್ಟು ತೊಂದರೆ ಉಂಟಾಗಬಹುದು. ಅದ್ಯಾಗೂ ಈ ಉಪಗ್ರಹದ ಹೆಚ್ಚಿನ ಭಾಗವು ವಾತಾವರಣಕ್ಕೆ ಬರುವಾಗ ಸುಟ್ಟು ಹೋಗುತ್ತದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಸ್ವಲ್ಪ ಭಾಗವನ್ನ ಮಾತ್ರ ಉಳಿಯಬೋದು ಎಂದಿದ್ದಾರೆ.
ರೆಸಿ ಬಾಹ್ಯಾಕಾಶ ನೌಕೆಯ ಪೂರ್ಣ ಹೆಸರು ರೆವೆನ್ ರಾಮಟಿ ಹೈ ಎನರ್ಜಿ ಸೋಲಾರ್ ಸ್ಪೆಕ್ಟ್ರೋಸ್ಕೋಪಿಕ್ ಇಮೇಜರ್. ಇದು ತುಂಬಾ ದೊಡ್ಡ ಉಪಗ್ರಹವಲ್ಲ. ಆದರೆ ಬಾಹ್ಯಾಕಾಶದಿಂದ ಬರುವ ಸಣ್ಣ ವಸ್ತು ಕೂಡ ದೊಡ್ಡ ಹಾನಿಯನ್ನುಂಟು ಮಾಡುತ್ತದೆ. ಏಕೆಂದರೆ ಈ ಉಪಗ್ರಹದ ಕೆಲವು ಭಾಗಗಳು ವಾತಾವರಣದಿಂದ ತಪ್ಪಿಸಿಕೊಂಡು ಭೂಮಿಯ ಮೇಲೆ ಬೀಳುತ್ತವೆ ಎಂದು ನಾಸಾ ಅಂದಾಜಿಸಿದೆ. ಆದರೆ ಯಾರಿಗಾದರೂ ಹಾನಿ ಮಾಡುವ ಸಂಭವನೀಯತೆ 2467ರಲ್ಲಿ 1 ಆಗಿದೆ.
ಭೂಮಿ ಅಪಾಯದಲ್ಲಿದೆ ಎಂಬುದನ್ನ ರೆಸಿ ನೆನಪಿಸುತ್ತದೆ.!
RHESSI ಉಪಗ್ರಹದ ಕೆಳಗೆ ಬೀಳುವ ಘಟನೆಯು ಭೂಮಿಯು ಯಾವಾಗಲೂ ಬಾಹ್ಯಾಕಾಶದಲ್ಲಿ
ತೇಲುತ್ತಿರುವ ಉಪಗ್ರಹಗಳ ಗುರಿಯಾಗಿದೆ ಎಂದು ತೋರಿಸುತ್ತದೆ. ಬಾಹ್ಯಾಕಾಶದಲ್ಲಿ ಹೆಚ್ಚಿನ
ಉಪಗ್ರಹಗಳ ಕಾರಣ, ಅವುಗಳ ನಡುವಿನ ಘರ್ಷಣೆಯೂ ಹೆಚ್ಚಾಗುತ್ತದೆ. ಅಂತಹ
ಪರಿಸ್ಥಿತಿಯಲ್ಲಿ, ಭೂಮಿಯ ಮೇಲೆ ತ್ಯಾಜ್ಯ ಬರುವ ಅಪಾಯ ಹೆಚ್ಚಾಗುತ್ತದೆ. ಸದ್ಯ 30
ಸಾವಿರಕ್ಕೂ ಹೆಚ್ಚು ತ್ಯಾಜ್ಯದ ರಾಶಿ ಭೂಮಿಯ ಸುತ್ತ ಸುತ್ತುತ್ತಿದೆ.
ಯುರೋಪಿಯನ್ ಸ್ಪೇಸ್ ಏಜೆನ್ಸಿಯ ಪ್ರಕಾರ, 0.4 ರಿಂದ 4 ಇಂಚುಗಳವರೆಗಿನ ಒಂದು ಮಿಲಿಯನ್ ವಸ್ತುಗಳು ಬಾಹ್ಯಾಕಾಶದಲ್ಲಿ ಭೂಮಿಯ ಸುತ್ತ ಚಲಿಸುತ್ತಿವೆ. ಆದರೆ 0.4 ಇಂಚುಗಳ ತ್ಯಾಜ್ಯವು 1.30 ಕೋಟಿ ಅಥವಾ ಅದಕ್ಕಿಂತ ಹೆಚ್ಚು ಇರಬಹುದು. ಈ ಸಣ್ಣ ತುಣುಕುಗಳು ನಮ್ಮ ಉಪಗ್ರಹಗಳನ್ನ ಸ್ಫೋಟಿಸಬಹುದು. ಅವುಗಳನ್ನ ಹಾಳುಮಾಡಬಹುದು. ಬಾಹ್ಯಾಕಾಶ ನಿಲ್ದಾಣವನ್ನ ಹಾನಿಗೊಳಿಸಬಹುದು.