ಬ್ಯಾಂಕಾಕ್ : ಹೊಸ ವರ್ಷದ ಆಚರಣೆ ನಿಮಿತ್ತ ಮ್ಯಾನ್ಮಾರ್‌ನ ಸೇನಾ ಸರ್ಕಾರವು ಸೋಮವಾರ ಸುಮಾರು 3,113 ಕೈದಿಗಳಿಗೆ ಕ್ಷಮಾದಾನವನ್ನು ನೀಡಿದ್ದು, ಬಿಡುಗಡೆಗೆ ಕ್ರಮವಹಿಸಿದೆ.
ಆದರೆ, ಸೇನಾ ದಂಗೆಯನ್ನು ವಿರೋಧಿಸಿದ ಕಾರಣಕ್ಕೆ ಬಂಧಿಸಲಾಗಿರುವ ರಾಜಕೀಯ ಕೈದಿಗಳೂ ಇದರಲ್ಲಿ ಸೇರಿದ್ದಾರೆಯೇ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ.