HEALTH TIPS

33 ವರ್ಷಗಳ ನಂತರ ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಮತ್ತೆ ಕಾಣಿಸಿಕೊಂಡ ಸಿನಿಮಾ ಪೋಸ್ಟರ್‌ಗಳು!

 

                  ಶ್ರೀನಗರ: ಯಾವುದೇ ಒಂದು ಚಿತ್ರ ಬಿಡುಗಡೆಗೂ ಮುನ್ನ ಚಿತ್ರದ ಪೋಸ್ಟರ್ ಗಳನ್ನು ಪ್ರಮುಖ ಜಾಗಗಳ ರಸ್ತೆ ಪಕ್ಕದ ಗೋಡೆಗಳ ಮೇಲೆ ಅಂಟಿಸಲಾಗುತ್ತದೆ. ಈ ಮೂಲಕ ಜನರನ್ನು ಗಮನವನ್ನು ಸೆಳೆಯುವುದು ಚಿತ್ರತಂಡದ ಉದ್ದೇಶ. ದೇಶಾದ್ಯಂತ ಇಂತಹ ಸಿನಿಮಾ ಪೋಸ್ಟರ್ ಗಳನ್ನು ಕಾಣಬಹುದು. ಆದರೆ ಇದು ಶ್ರೀನಗರಕ್ಕೆ ಹೊಸದಾಗಿದೆ. 

                      1990ರಲ್ಲಿ ಕಾಶ್ಮೀರಿ ಪಂಡಿತರ ಮೇಲೆ ಉಗ್ರಗಾಮಿಗಳ ಏಕಾಏಕಿ ದಾಳಿಯ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಪೋಸ್ಟರ್ ಸಂಸ್ಕೃತಿ ಕಡಿಮೆಯಾಗಿತ್ತು. ಹಿಂದಿ ಸಿನಿಮಾ ಭೋಲಾದೊಂದಿಗೆ ಪೋಸ್ಟರ್ ಸಂಸ್ಕೃತಿಯು ಇಲ್ಲಿ ಪುನರಾವರ್ತನೆಯಾಗಿದೆ. ದಾಲ್ ಸರೋವರದ ಬೌಲೆವಾರ್ಡ್ ರಸ್ತೆಯಲ್ಲಿ, ಪ್ರವಾಸಿ ಸ್ವಾಗತ ಕೇಂದ್ರದ ಬಳಿ ಮತ್ತು ಶ್ರೀನಗರದ ಅಪ್‌ಟೌನ್‌ನಲ್ಲಿರುವ ಇತರ ಪ್ರದೇಶಗಳಲ್ಲಿ ಪೋಸ್ಟರ್ ಗಳನ್ನು ಕಾಣಬಹುದು. 

               ಬೌಲೆವಾರ್ಡ್ ರಸ್ತೆಯು ಪ್ರವಾಸಿ ಚಟುವಟಿಕೆಯ ತಾಣ. ಕಳೆದ ಸೆಪ್ಟೆಂಬರ್‌ನಲ್ಲಿ ತೆರೆಕಂಡ INOX ಮಲ್ಟಿಪ್ಲೆಕ್ಸ್‌ನಲ್ಲಿ ಭೋಲಾ ಚಿತ್ರ ಪ್ರದರ್ಶನಗೊಳ್ಳುತ್ತಿದ್ದು, 33 ವರ್ಷಗಳ ನಂತರ ಮತ್ತೆ ಕಾಶ್ಮೀರದಲ್ಲಿ ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ.

                  ಕಾಶ್ಮೀರ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಓದುತ್ತಿರುವ ಜಾವೇದ್ ಅಹ್ಮದ್, ಕಾಶ್ಮೀರದಲ್ಲಿ ಸಿನಿಮಾ ಪೋಸ್ಟರ್‌ಗಳನ್ನು ನೋಡಿದ್ದು ಜೀವನದಲ್ಲಿ ಮೊದಲ ಬಾರಿಗೆ ಎಂದಿದ್ದಾರೆ. 'ನಾನು ದೊಡ್ಡ ಸಿನಿಮಾ ಪ್ರೇಮಿಯಲ್ಲದಿದ್ದರೂ, ಈ ಪೋಸ್ಟರ್ ಗಳು ಮಲ್ಟಿಪ್ಲೆಕ್ಸ್‌ನಲ್ಲಿ ಪ್ರದರ್ಶನಗೊಳ್ಳುತ್ತಿರುವ ಚಲನಚಿತ್ರಗಳಿಗೆ ತೆರಳಲು ಜನರಿಗೆ ಸಹಾಯವಾಗುತ್ತದೆ. ಇದು ಪ್ರವಾಸಿಗರನ್ನೂ ಸೆಳೆಯುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

                  ಹಿರಿಯ ನಾಗರಿಕರಾದ ಅಬ್ದುಲ್ ಅಜೀಜ್ ಅವರು 33 ವರ್ಷಗಳ ನಂತರ ಪೋಸ್ಟರ್‌ಗಳು ಮತ್ತೆ ಕಾಣಿಸಿಕೊಂಡ ಬಗ್ಗೆ ಖುಷಿಪಟ್ಟರು. 'ಉಗ್ರವಾದ ಸ್ಫೋಟಗೊಳ್ಳುವ ಮೊದಲು, ನಟರ ದೊಡ್ಡ ಚಲನಚಿತ್ರ ಪೋಸ್ಟರ್‌ಗಳನ್ನು ಗೋಡೆಗಳಿಗೆ ಅಂಟಿಸುತ್ತಿದದ್ದನ್ನು ನೆನಪಿಸಿಕೊಂಡರು.

               ಕಾಶ್ಮೀರಿ ಪಂಡಿತ್ ವಿಜಯ್ ಧರ್ ಒಡೆತನದ INOX ಮಲ್ಟಿಪ್ಲೆಕ್ಸ್, 522 ಆಸನ ಸಾಮರ್ಥ್ಯದೊಂದಿಗೆ ಮೂರು ಚಲನಚಿತ್ರ ಮಂದಿರಗಳನ್ನು ಹೊಂದಿದೆ. ಇದು ಅಪ್ಟೌನ್ ಶ್ರೀನಗರದ ಶಿವಪೋರಾ ಪ್ರದೇಶದಲ್ಲಿದೆ.

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries