ಮಂಜೇಶ್ವರ: ನಾಗಬ್ರಹ್ಮ ಫ್ರಂಡ್ಸ್ ಕ್ಲಬ್ ತಲೇಕಳ ಸಂಘದ 34ನೇ ವಾರ್ಷಿಕೋತ್ಸವವು ಇತ್ತೀಚೆಗೆ ಶ್ರೀ ಮಹಾಗಣಪತಿ ಭಜನಾಸಂಘ ಮದಂಗಲ್ಲುಕಟ್ಟೆ ಮಂದಿರದ ವಠಾರದಲ್ಲಿ ಸಂಭ್ರಮದಿಂದ ಜರಗಿತು. ಸಭಾ ಕಾರ್ಯಕ್ರಮದಲ್ಲಿ ಮೀಂಜ ಗ್ರಾಮ ಪಂಚಾಯತಿ ಸದಸ್ಯೆ ಜ್ಯೋತಿ ಪಿ ರೈ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕಲೆ, ಸಂಸ್ಕøತಿ, ಕ್ರೀಡೆಯಲ್ಲಿ ಹಾಗೂ ಉತ್ತಮ ಸಮಾಜಸೇವೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು ಸಮಾಜನಿರ್ಮಾಣದಲ್ಲಿ ಯುವಕ ಸಂಘಗಳು ಸೇವೆ ಗೈಯುವಂತಾಗಲಿ ಎಂದು ಹಾರೈಸಿದರು.
ಮಂಗಳೂರು ರಾಮಕೃಷ್ಣನ ಕಾಲೇಜ್ ಉಪನ್ಯಾಸಕ ನಟೇಶ್ ಆಳ್ವ ಸಭೆಯಲ್ಲಿ ಮುಖ್ಯ ಆತಿಥಿಗಳಾಗಿ ಉಪಸ್ಥಿತರಿದ್ದು, ದುಶ್ಚಟಗಳು ಮಕ್ಕಳ ಮೇಲೆ ಬೀರುವ ಕೆಟ್ಟ ಪರಿಣಾಮಗಳು, ದೂರ ಇರಲು ಇಂದಿನ ಯುವಜನ ಸಮಾಜ ಪ್ರಮುಖ ಪಾತ್ರವಾಗಿ ಸಂಘ ಸಮಸ್ತೆಗಳ ಪಾತ್ರಗಳ ಬಗ್ಗೆ ತಿಳಿಸಿದರು. ಮೀಂಜ ಪಂಚಾಯತಿ ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮಂಜೇಶ್ವರ ಬ್ಲಾಕ್ ಪಂಚಾಯತಿ ಸದಸ್ಯ ರಾಧಾಕೃಷ್ಣ ಭಟ್.ಕೆ.ವಿ., ನಾಗಬ್ರಹ್ಮ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಅಶೋಕ್ ಮದಂಗಲ್ಲುಕಟ್ಟೆ ಗೌರವ ಉಪಸ್ಥಿತರಿದ್ದರು.
ತಲೇಕಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಉತ್ತಮ ಶ್ರೇಣಿ ಕೊಂಡೊಯ್ದು ಪುಟಾಣಿ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸವನ್ನು ಧಾರೆ ಎರೆದ ನಿವೃತ್ತ ಮುಖ್ಯೋಪಾಧ್ಯಾಯ ರವೀಂದ್ರ ಎಂ ಅವರನ್ನು ಕ್ಲಬ್ ವತಿಯಿಂದ ಗಣ್ಯರ ಸಮಕ್ಷಮ ಸನ್ಮಾನಿಸಿ ಗೌರವಿಸಲಾಯಿತು. ಸ್ಥಳೀಯ ಪ್ರತಿಭೆ ಕು. ಮಹಾಲಕ್ಷ್ಮಿ ಗೌರಿಮೂಲೆ ಮದಂಗಲ್ಲು ಅವರು ಇತೀಚೆಗೆ ನಡೆದ ರಾಜ್ಯ ಮಟ್ಟದ ಹಿಂದಿ ಕಥಾ ರಚನಾ ಸ್ಪರ್ಧೆಯಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿ ಪ್ರಥಮ ಸ್ಥಾನ ಪಡೆದಿದ್ದು ಅವರನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ನಾಗಬ್ರಹ್ಮ ಫ್ರೆಂಡ್ಸ್ ಕ್ಲಬ್ ನ ಹಿರಿಯ ಸದಸ್ಯ ಯಶವಂತ ಮಾಡ ಕಾರ್ಯಕ್ರಮ ನಿರ್ವಹಿಸಿದರು. ವಿಠ್ಠಲ್ ಶೆಟ್ಟಿಗಾರ್ ಸ್ವಾಗತಿಸಿ, ಸೌಮ್ಯ ರವಿ ಸನ್ಮಾನಪತ್ರ ವಾಚಿಸಿದರು. ಯಶವಂತ ಮಾಡ ವಂದಿಸಿದರು. ಆರಂಭದಲ್ಲಿ ಸ್ಥಳೀಯ ಬಾಲ ಪ್ರತಿಭೆಗಳಿಂದ ನೃತ್ಯ ವೈವಿದ್ಯ ಜರಗಿತು, ಸಭೆಯ ಬಳಿಕ ಮಂಗಳೂರಿನ ಪ್ರಸಿದ್ದ ನಾಟಕ ಲಕುಮಿ ತಂಡದ ಕುಸಲ್ದ ಕಲಾವಿದೆರ್ ಕುಡ್ಲ ತಂಡದವರಿಂದ ಅವು ದಾಲಾಪುಜಿ ಎಂಬ ಸಾಮಾಜಿಕ ತುಳುನಾಟಕ ಪ್ರಸ್ತುತಿ ಗೊಂಡಿತು.
ತಲೇಕಳ ನಾಗಬ್ರಹ್ಮ ಫ್ರಂಡ್ಸ್ ಕ್ಲಬ್ ನ ಸಂಭ್ರಮದ 34ನೇ ವಾರ್ಷಿಕೋತ್ಸವ
0
ಏಪ್ರಿಲ್ 12, 2023
Tags