ಬದಿಯಡ್ಕ : ನೀರ್ಚಾಲು ಜ್ಯೋತಿ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್‍ನ 37ನೇ ವಾರ್ಷಿಕೋತ್ಸವದ ಪ್ರಯುಕ್ತ ಹೊನಲು ಬೆಳಕಿನ ವಾಲಿ ಬಾಲ್ ಪಂದ್ಯಾಟವು ನೀರ್ಚಾಲು ಶಾಲಾ ಮೈದಾನದಲ್ಲಿ ನಡೆಯಿತು. ನಿವೃತ್ತ ಪೊಲೀಸ್ ಅಧಿಕಾರಿ ಶಿವರಾಮ ಕೆ. ಮಲ್ಲಡ್ಕ ಪಂದ್ಯವನ್ನು ಉದ್ಘಾಟಿಸಿದರು. ಕ್ಲಬ್ ಅಧ್ಯಕ್ಷ ಸೀತಾರಾಮ ಕುಲಾಲ್ ಅಧ್ಯಕ್ಷತೆ ವಹಿಸಿದರು. ರಾಮಚಂದ್ರ ಭಟ್ ಖಂಡಿಗೆ, ದೈಹಿಕ ಕ್ರೀಡಾ ಶಿಕ್ಷಕ ವೆಂಕಟರಮಣ ಭಟ್ ಮುಖ್ಯ ಅತಿಥಿಯಾಗಿದ್ದರು. ಕ್ಲಬ್ ಕಾರ್ಯದರ್ಶಿ ಕರುಣಾಕರನ್ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ರವಿ ಮೆಣಸಿನಪಾರೆ ವಂದಿಸಿದರು. ಕ್ರೀಡಾ ಶಿಕ್ಷಕ ಶಿವರಾಮ ಭಟ್ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು.