ನವದೆಹಲಿ: ದೇಶದಲ್ಲಿ ಪ್ರಸ್ತುತ ಕೊರೊನಾವೈರಸ್ ಪ್ರಕರಣಗಳು ಉಲ್ಬಣಗೊಳ್ಳುತ್ತಿರುವುದಕ್ಕೆ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮೂರು ಮುಖ್ಯ ಕಾರಣಗಳನ್ನು ಪಟ್ಟಿ ಮಾಡಿದೆ.
ಆ ಕಾರಣಗಳು ಯಾವುವು
1. ಕೋವಿಡ್-19ಗೆ ಸಂಬಂಧಿಸಿದ ಸೂಕ್ತ ನಡವಳಿಕೆಯಲ್ಲಿನ ಸಡಿಲಿಕೆ
2. ಸೋಂಕು ಪತ್ತೆ ಪರೀಕ್ಷಾ ದರ ಕಡಿಮೆಯಾಗಿರುವುದು
3. ಕೊರೊನಾ ವೈರಸ್‌ನ ಹೊಸ ರೂಪಾಂತರಿ ತಳಿ
ಈ ಮೂರು ಕಾರಣಗಳಿಂದ ಸೋಂಕುಗಳು ಹೆಚ್ಚುತ್ತಿವೆ ಎಂದು ಐಎಂಎ ಹೇಳಿದೆ.
ಇಂದು 5,888 ಪ್ರಕರಣ
ದೇಶದಲ್ಲಿ ಇಂದು 5,888 ಕೋವಿಡ್ ಹೊಸ ಪ್ರಕರಣಗಳು ದಾಖಲಾಗಿವೆ. ಹಿಂದಿನ ದಿನಕ್ಕೆ ಹೋಲಿಸಿಕೊಂಡರೆ ಇದು ಶೇ 10ರಷ್ಟು ಏರಿಕೆ. ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 35,199ಕ್ಕೆ ತಲುಪಿದೆ.
ಸೋಂಕಿನಿಂದ 24 ಗಂಟೆಗಳಲ್ಲಿ 14 ಜನರು ಮೃತಪಟ್ಟಿರುವುದಾಗಿಯೂ ವರದಿಯಾಗಿದೆ. ಇದರಲ್ಲಿ ದೆಹಲಿ, ಹಿಮಾಚಲ ಪ್ರದೇಶ, ಗುಜರಾತ್, ಜಮ್ಮು-ಕಾಶ್ಮೀರ, ಮಹಾರಾಷ್ಟ್ರ, ರಾಜಸ್ಥಾನ, ಕೇರಳದಲ್ಲಿ ಸಾವಿನ ಪ್ರಕರಣಗಳು ದಾಖಲಾಗಿದೆ.
ದೈನಂದಿನ ಕೋವಿಡ್ ಪಾಸಿಟಿವಿಟಿ ದರ ಶೇ 6.91ರಷ್ಟಿದ್ದು, ಮರಣ ಪ್ರಮಾಣ ಶೇ 1.1 ಆಗಿದೆ. ಹಾಗೂ, ಚೇತರಿಕೆ ಶೇ 98.73ರಷ್ಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.