HEALTH TIPS

ವಿಶ್ವದ ಶ್ರೀಮಂತ ರಾಷ್ಟ್ರ ಯಾವುದು ಗೊತ್ತಾ? 3 ಲಕ್ಷಕ್ಕೂ ಹೆಚ್ಚು ಮಿಲಿಯನೇರ್​​ಗಳು ಇಲ್ಲಿದ್ದಾರಂತೆ!

             ನ್ಯೂಯಾರ್ಕ್:2023 ರಲ್ಲಿ ಅತ್ಯಧಿಕ ಮಿಲಿಯಾಧಿಪತಿಗಳನ್ನು ಹೊಂದಿರುವ ನ್ಯೂಯಾರ್ಕ್ (New York) ವಿಶ್ವದ ಅತ್ಯಂತ ಶ್ರೀಮಂತ ನಗರ (Richest City) ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಜಾಗತಿಕ ವರದಿಯೊಂದು ತಿಳಿಸಿದೆ. ಜಾಗತಿಕ ಸಂಪತ್ತು ಟ್ರ್ಯಾಕರ್ ಹೆನ್ಲಿ ಹಾಗೂ ಪಾರ್ಟ್‌ನರ್ಸ್ ಪ್ರಕಾರ, ನಗರವು 3,40,000 ಮಿಲಿಯನೇರ್‌ಗಳನ್ನು ಹೊಂದಿದೆ. ನ್ಯೂಯಾರ್ಕ್ ನಂತರ ಟೋಕಿಯೊ (Tokiyo) ಮತ್ತು ಸ್ಯಾನ್ ಫ್ರಾನ್ಸಿಸ್ಕೊ ಬೇ ಏರಿಯಾದಲ್ಲಿ 290,300 ಮತ್ತು 285,000 ಮಿಲಿಯಾಧಿಪತಿಗಳಿದ್ದಾರೆ ಎಂದು ವರದಿ ತಿಳಿಸಿದೆ.

ವಿಶ್ವದ ಅತ್ಯಂತ ಶ್ರೀಮಂತ ನಗರಗಳು

                 ವರದಿಯು ಸೂಚಿಸಿರುವಂತೆ ವಿಶ್ವದ ಅತ್ಯಂತ ಶ್ರೀಮಂತ ನಗರಗಳ ವರದಿ 2023 ರ ಪ್ರಕಾರ ಪ್ರಪಂಚದಾದ್ಯಂತ ಒಂಬತ್ತು ಪ್ರದೇಶಗಳಲ್ಲಿ (ಆಫ್ರಿಕಾ, ಆಸ್ಟ್ರೇಲಿಯಾ, ಸಿಐಎಸ್, ಪೂರ್ವ ಏಷ್ಯಾ, ಯುರೋಪ್, ಮಧ್ಯಪ್ರಾಚ್ಯ, ಉತ್ತರ ಅಮೇರಿಕಾ, ದಕ್ಷಿಣ ಏಷ್ಯಾ ಮತ್ತು ಆಗ್ನೇಯ ಏಷ್ಯಾ) 97 ನಗರಗಳನ್ನು ಒಳಗೊಂಡಿದೆ ಮತ್ತು ವಿಶ್ವದ ಹೆಚ್ಚಿನ ಸಂಪತ್ತನ್ನು ಒಳಗೊಂಡಿರುವ ಕೇಂದ್ರಗಳು ಎಂದೆನಿಸಿವೆ.

ಪ್ರಾಬಲ್ಯ ಮೆರೆದ ಯುಎಸ್

                     ಶ್ರೀಮಂತ ನಗರಗಳ ಪಟ್ಟಿಯಲ್ಲಿರುವ ದೇಶಗಳ ಪೈಕಿ ನ್ಯೂಯಾರ್ಕ್, ದಿ ಬೇ ಏರಿಯಾ, ಲಾಸ್ ಏಂಜಲೀಸ್ ಮತ್ತು ಚಿಕಾಗೋವನ್ನು ನಗರಗಳನ್ನು ಸೇರಿಸಿ ಯುಎಸ್ ಪ್ರಾಬಲ್ಯ ಸಾಧಿಸಿದೆ.

                  ಯುನೈಟೆಡ್ ಸ್ಟೇಟ್ಸ್ 10 ನಗರಗಳನ್ನು ಹೊಂದಿದ್ದು, ಚೀನಾ ಹಾಗೂ ಆಸ್ಟ್ರೇಲಿಯಾವನ್ನು ಸೋಲಿಸಿ ವಿಶ್ವದ 50 ಅಗ್ರ ಶ್ರೀಮಂತ ನಗರಗಳನ್ನು ಹೊಂದಿದೆ. ಕೆಲವು ಯುಎಸ್ ನಗರಗಳು, ನಿರ್ದಿಷ್ಟವಾಗಿ, 2012 ರಿಂದ ಸಾಕಷ್ಟು ಅಭಿವೃದ್ಧಿಗಳಿಗೆ ಸಾಕ್ಷಿಯಾಗಿವೆ. ಆಸ್ಟಿನ್, ಟೆಕ್ಸ್., ಹೆಚ್ಚಿನ ನಿವ್ವಳ ಮೌಲ್ಯದ ಆದಾಯ ಹೊಂದಿರುವವರಿಂದ 102% ಹೆಚ್ಚಳದೊಂದಿಗೆ ಎರಡನೇ ಸ್ಥಾನವನ್ನಲಂಕರಿಸಿದೆ.

ಯಾವ ದೇಶದಲ್ಲಿ ಎಷ್ಟೆಷ್ಟು ಮಿಲಿಯನೇರ್‌ಗಳಿದ್ದಾರೆ?

                    ಹಾಂಗ್ ಕಾಂಗ್‌ 129,500 ಮಿಲಿಯನೇರ್‌ಗಳು 32 ಬಿಲಿಯನೇರ್‌ಗಳು, ಬೀಜಿಂಗ್ 128,200 ಮಿಲಿಯನೇರ್‌ಗಳು ಮತ್ತು 43 ಬಿಲಿಯನೇರ್‌ಗಳು, ಶಾಂಘೈ 127,200 ಮಿಲಿಯನೇರ್‌ಗಳು ಹಾಗೂ 40 ಬಿಲಿಯನೇರ್‌ಗಳೊಂದಿಗೆ ಚೀನಾ ಏಳನೇ, ಎಂಟನೇ ಮತ್ತು ಒಂಬತ್ತನೇ ಸ್ಥಾನಗಳನ್ನು ಪಡೆದುಕೊಂಡಿದೆ.

ಯಾವ ದೇಶಕ್ಕೆ ಎಷ್ಟನೇ ಸ್ಥಾನ ರಷ್ಯಾದ ಸ್ಥಿತಿ ಏನು?

               126,900 ಮಿಲಿಯನೇರ್‌ಗಳು ಮತ್ತು 15 ಬಿಲಿಯನೇರ್‌ಗಳೊಂದಿಗೆ ಆಸ್ಟ್ರೇಲಿಯಾದ ಸಿಡ್ನಿ ಜಾಗತಿಕವಾಗಿ ಹತ್ತನೇ ಸ್ಥಾನದಲ್ಲಿದೆ. ರಷ್ಯಾವು ಪ್ರಪಂಚದ ಸಂಪತ್ತಿನ ಉತ್ತಮ ವ್ಯವಹಾರಕ್ಕೆ ಬಹಳ ಹಿಂದಿನಿಂದಲೂ ನೆಲೆಯಾಗಿದೆ. ಆದರೆ ಉಕ್ರೇನ್‌ನೊಂದಿಗಿನ ಹಾಗೂ ಇನ್ನಿತರ ಅಂಶಗಳಿಂದಾಗಿ ದೇಶದ ಹೆಚ್ಚಿನ ನಿವ್ವಳ ಮೌಲ್ಯದ ಜನಸಂಖ್ಯೆಯಲ್ಲಿ ಅತ್ಯಧಿಕ ಕುಸಿತ ಕಂಡುಬಂದಿದೆ. ಮಾಸ್ಕೋ ಕಳೆದ ದಶಕದಲ್ಲಿ 44% ಕುಸಿತವನ್ನು ಕಂಡಿದ್ದು, ಸೇಂಟ್ ಪೀಟರ್ಸ್ಬರ್ಗ್ 38% ಇಳಿಕೆಯನ್ನು ವರದಿ ಮಾಡಿದೆ.

ಲಂಡನ್ ಈ ವರ್ಷದ ಪಟ್ಟಿಯಲ್ಲಿ 258,000 ಮಿಲಿಯಾಧಿಪತಿಗಳ ವಿವರಗಳೊಂದಿಗೆ ನಾಲ್ಕನೇ ಸ್ಥಾನಕ್ಕೆ ಇಳಿದಿದೆ ತದನಂತರ ಸಿಂಗಾಪುರ್ 240,100 ಮಿಲಿಯಾಧಿಪತಿಗಳನ್ನು ಒಳಗೊಂಡಿದೆ. 2000 ರಲ್ಲಿ, ಲಂಡನ್ ಮಿಲಿಯನೇರ್‌ಗಳಿಗೆ ವಿಶ್ವದ ಅಗ್ರ ನಗರವಾಗಿತ್ತು, ಆದರೆ ಕಳೆದ 20 ವರ್ಷಗಳಲ್ಲಿ ಅದು ಪಟ್ಟಿಯಿಂದ ಕೆಳಗಿಳಿದಿದೆ.

ಶ್ರೀಮಂತ ನಗರ ನ್ಯೂಯಾರ್ಕ್

                     ಬಿಗ್ ಆ್ಯಪಲ್ ಎಂಬ ಅಡ್ಡಹೆಸರನ್ನು ಹೊಂದಿರುವ ನ್ಯೂಯಾರ್ಕ್ 3,40,000 ಮಿಲಿಯನೇರ್‌ಗಳು, 724 ಸೆಂಟಿ-ಮಿಲಿಯನೇರ್‌ಗಳು ಮತ್ತು 58 ಬಿಲಿಯನೇರ್‌ಗಳಿಗೆ ತಾಣವಾಗಿದೆ. ಇದು ಮಾರುಕಟ್ಟೆ ಕ್ಯಾಪ್ (NYSE ಮತ್ತು Nasdaq) ಮೂಲಕ ವಿಶ್ವದ ಎರಡು ದೊಡ್ಡ ಸ್ಟಾಕ್ ಎಕ್ಸ್ಚೇಂಜ್ಗಳಿಗೆ ನೆಲೆಯಾಗಿದೆ. ನಗರವು ಬ್ರಾಂಕ್ಸ್, ಬ್ರೂಕ್ಲಿನ್, ಮ್ಯಾನ್‌ಹ್ಯಾಟನ್, ಕ್ವೀನ್ಸ್ ಮತ್ತು ಸ್ಟೇಟನ್ ಐಲ್ಯಾಂಡ್‌ನ ಐದು ಆಡಳಿತ ಘಟಕವಾಗಿರುವ ಪಟ್ಟಣಗಳನ್ನು ಹೊಂದಿದೆ.

              ಅಂತೆಯೇ ಮ್ಯಾನ್‌ಹ್ಯಾಟನ್‌ನ 5 ನೇ ಅವೆನ್ಯೂ ಸೇರಿದಂತೆ ವಿಶ್ವದ ಕೆಲವು ವಿಶೇಷ ವಸತಿ ಬೀದಿಗಳಿಗೆ ನೆಲೆಯಾಗಿದೆ. ಇಲ್ಲಿನ ಪ್ರಮುಖ ಅಪಾರ್ಟ್‌ಮೆಂಟ್‌ಗಳ ಬೆಲೆ ಪ್ರತಿ ಚದರ ಮೀಟರ್‌ಗೆ $27,000 ಮೀರಬಹುದು ಎಂದು ವರದಿ ತಿಳಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries