HEALTH TIPS

ಬಾವಿಗೆ ಬಿದ್ದ ತಮ್ಮನನ್ನು ರಕ್ಷಿಸಿದ 3ನೇ ತರಗತಿ ವಿದ್ಯಾರ್ಥಿನಿ! ದಿಯಾಳ ಶೌರ್ಯಕ್ಕೆ ಬಹುಪರಾಕ್​

 

            ಕೊಚ್ಚಿ: ಪ್ರಾಣಾಪಾಯದಲ್ಲಿ ಸಿಲುಕ್ಕಿದ್ದ ತನ್ನ ತಮ್ಮನನ್ನು ಕೊಂಚವೂ ಹಿಂಜರಿಯದೇ ರಕ್ಷಣೆ ಮಾಡುವ ಮೂಲಕ ಮೂರನೇ ತರಗತಿ ವಿದ್ಯಾರ್ಥಿನಿ ದಿಯಾ ತನ್ನ ಶೌರ್ಯವನ್ನು ಪ್ರದರ್ಶಿಸಿದ್ದಾಳೆ.

                   ಈ ಘಟನೆ ಕಳೆದ ಮಂಗಳವಾರ ಸಂಜೆ 5 ಗಂಟೆಗೆ ನಡೆದಿದೆ.

ಸುಮಾರು 20 ಅಡಿ ಆಳದ ಬಾವಿಗೆ ಬಿದ್ದಿದ್ದ ಸಹೋದರ ಇವಾನ್​ನನ್ನು 8 ವರ್ಷದ ದಿಯಾ ರಕ್ಷಣೆ ಮಾಡಿದ್ದಾಳೆ.

                    ವಿವರಣೆಗೆ ಬರುವುದಾದರೆ, ದಿವ್ಯಾ ಅವರ ಕುಟುಂಬ ಬಾಡಿಗೆ ಮನೆಯಲ್ಲಿ ವಾಸವಿದೆ. ಈ ಘಟನೆ ನಡೆದ ಸಂದರ್ಭದಲ್ಲಿ ಕುಟುಂಬ ನಿತ್ಯದ ಕೆಲಸದಲ್ಲಿ ಬಿಜಿಯಾಗಿದ್ದರು. ತಾಯಿ ಪಾತ್ರೆ ತೊಳೆಯುತ್ತಿದ್ದರೆ, ದಿಯಾ ಮತ್ತು ಆಕೆಯ ತಂಗಿ ದುನಿಯಾ ತಮ್ಮ ತಾಯಿಗೆ ಬಟ್ಟೆ ಒಗೆಯಲು ಸಹಾಯ ಮಾಡುತ್ತಿದ್ದರು. ಯಾರೂ ಗಮನಿಸದ ಸಂದರ್ಭದಲ್ಲಿ ಇವಾನ್​ ಬಾವಿಯ ಸುತ್ತು ಅಳವಡಿಸಿದ್ದ ಕಬ್ಬಿಣದ ಗ್ರಿಲ್‌ ಮೇಲೆ ಹತ್ತಿದ್ದ. ಆದರೆ, ಕಬ್ಬಿಣ ತುಕ್ಕು ಹಿಡಿದಿದ್ದ ಪರಿಣಾಮ ಮಧ್ಯದ ಭಾಗ ಒಡೆದು 20 ಅಡಿ ಆಳದ ಬಾವಿಗೆ ಇವಾನ್​ ಬಿದ್ದಿದ್ದ.

                     ಸಹೋದರನ ಅಳುವ ಕೂಗು ಕೇಳಿಸಿಕೊಂಡ ದಿಯಾ ಬಾವಿಯ ಬಳಿಕ ಧಾವಿಸಿದಳು. ಈ ವೇಳೆ ಸಹೋದರ ತೇಲಲು ಹೆಣಗಾಡುತ್ತಿರುವುದನ್ನು ನೋಡಿದಳು. ತಡಮಾಡದೆ, ಪಿವಿಸಿ ಪೈಪ್ ಮೂಲಕ ಬಾವಿಗೆ ಇಳಿದು, ಇವಾನ್ ಅನ್ನು ತನ್ನ ಹತ್ತಿರಕ್ಕೆ ಹಿಡಿದು ಎಳೆದುಕೊಂಡಳು ಮತ್ತು ತನ್ನ ಇನ್ನೊಂದು ಕೈಯಿಂದ ಪೈಪ್ ಅನ್ನು ಹಿಡಿದಳು. ಇಬ್ಬರನ್ನು ನೋಡಿದ ತಾಯಿ ಶಾಜಿಲ ಜೋರಾಗಿ ಕೂಗಿಕೊಂಡಾಗ, ಅದನ್ನು ಕೇಳಿ ಅಕ್ಕಪಕ್ಕದವರು ಸ್ಥಳಕ್ಕೆ ಧಾವಿಸಿದರು. ಬಳಿಕ ಮಕ್ಕಳಿಬ್ಬರನ್ನು ಬಾವಿಯಿಂದ ರಕ್ಷಿಸಿದರು.

                   ಇವಾನ್ ತಲೆಗೆ ಸಣ್ಣ ಗಾಯವಾಗಿದ್ದು, ಅಲಪ್ಪುಳ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಮಕ್ಕಳ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆತಂಕ ಪಡುವ ಅಗತ್ಯವಿಲ್ಲ ಎಂದು ವೈದ್ಯರು ಭರವಸೆ ನೀಡಿದ್ದು, ದಿಯಾ ಅವರಿಗೆ ಯಾವುದೇ ಗಾಯಗಳಾಗಿಲ್ಲ.

                 ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರ ಸೂಚನೆಯಂತೆ ಮಾವೇಲಿಕ್ಕರ ಜಿಲ್ಲಾ ಆಸ್ಪತ್ರೆಯ ಅಧೀಕ್ಷಕ ಡಾ.ಕೆ.ಎ.ಜಿತೇಶ್ ಅವರು ಮಗುವಿನ ಮನೆಗೆ ಭೇಟಿ ನೀಡಿ ಸಿಹಿತಿಂಡಿ ನೀಡಿ ದಿಯಾಳನ್ನು ಅಭಿನಂದಿಸಿದರು. ಅಲ್ಲದೆ, ಸಚಿವೆ ವೀಣಾ ಅವರು ವೈದ್ಯರ ಫೋನ್‌ಗೆ ವಿಡಿಯೋ ಕರೆ ಮಾಡಿ ಮಗುವಿನೊಂದಿಗೆ ಮಾತನಾಡಿ, ಮಗುವಿಗೆ ಶುಭ ಹಾರೈಸಿದರು ಮತ್ತು ಮಗುವಿನ ತಾಯಿ ಬಳಿ ಸಂತೋಷವನ್ನು ವ್ಯಕ್ತಪಡಿಸಿದರು. ಸಹೋದರನ ಮೇಲೆ ದಿಯಾ ಇಟ್ಟಿರುವ ಪ್ರೀತಿ, ಹೃದಯವನ್ನು ಗೆದ್ದಿತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries