ನವದೆಹಲಿ : ಭಾರತದ ನಿರುದ್ಯೋಗ ದರ ಮಾರ್ಚ್ ನಲ್ಲಿ ಮೂರು ತಿಂಗಳ ಗರಿಷ್ಠವಾದ 7.8%ವನ್ನು ತಲುಪಿತ್ತು ಎಂದು ಭಾರತೀಯ ಆರ್ಥಿಕತೆ ನಿಗಾ ಕೇಂದ್ರ (CMIE) ಹೇಳಿದೆ. ನಿರುದ್ಯೋಗ ದರವು ಫೆಬ್ರವರಿಯಲ್ಲಿ 7.5% ಆಗಿತ್ತು.
ನಿರುದ್ಯೋಗವು ಡಿಸೆಂಬರ್ ನಲ್ಲಿ 16 ತಿಂಗಳ ಗರಿಷ್ಠವಾದ 8.3%ವನ್ನು ತಲುಪಿತ್ತು.
ಆದರೆ, ಬಳಿಕ ಜನವರಿಯಲ್ಲಿ ಅದು 7.14%ಕ್ಕೆ ಇಳಿದಿತ್ತು. ಆದರೆ, ನಂತರದ ಎರಡು ತಿಂಗಳುಗಳಲ್ಲಿ ನಿರುದ್ಯೋಗ ದರವು ಏರಿದೆ ಎನ್ನುವುದನ್ನು ಸಿಎಮ್‌ಐಇ ಅಂಕಿಸಂಖ್ಯೆಗಳು ತೋರಿಸಿವೆ. ಮಾರ್ಚ್ ನಲ್ಲಿ ನಿರುದ್ಯೋಗ ದರವು ನಗರ ಪ್ರದೇಶಗಳಲ್ಲಿ 8.4% ಆಗಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ ಅದು 7.5% ಆಗಿತ್ತು.
ನಿರುದ್ಯೋಗವು ಕಳೆದ ತಿಂಗಳಲ್ಲಿ ಹರ್ಯಾಣ (26.8%)ದಲ್ಲಿ ಗರಿಷ್ಠವಾಗಿತ್ತು. ನಂತರದ ಸ್ಥಾನಗಳಲ್ಲಿ ರಾಜಸ್ಥಾನ (26.4%), ಜಮ್ಮು ಮತ್ತು ಕಾಶ್ಮೀರ (23.1%) ಮತ್ತು ಸಿಕ್ಕಿಮ್ (20.7%) ರಾಜ್ಯಗಳಿವೆ. ಉತ್ತರಾಖಂಡ, ಛತ್ತೀಸ್ ಗಢ ಮತ್ತು ಪುದುಚೇರಿ ರಾಜ್ಯಗಳು ಕನಿಷ್ಠ ನಿರುದ್ಯೊಗ ದರವನ್ನು ಹೊಂದಿವೆ.