ಬದಿಯಡ್ಕ: ನೀರ್ಚಾಲು ಬೇಳ ಶ್ರೀ ಕುಮಾರಚಾಮುಂಡಿ ದೈವದ ಬಯಲಕೋಲ ಮತ್ತು ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ಕೆಂಡಸೇವೆಯು ಏಪ್ರಿಲ್ 4 ಮತ್ತು 5ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು.
ಏ.4ರಂದು ರಾತ್ರಿ 7 ಗಂಟೆಯಿಂದ ಭಜನೆ, 8 ಗಂಟೆಗೆ ಏಣಯರ್ಪು ಕೋದಂರ್ಬತ್ತ್ ತರವಾಡು ಮನೆಯಿಂದ ಭಂಡಾರ ಹೊರಟು 8.30ಕ್ಕೆ ತಲುಪಲಿರುವುದು. ರಾತ್ರಿ 11 ಗಂಟೆಯಿಂದ ಶ್ರೀ ಕುಮಾರಚಾಮುಂಡಿ, ಬಬ್ಬರ್ಯ ಇತ್ಯಾದಿ ದೈವಗಳಿಗೆ ಕೋಲ, ರಾತ್ರಿ 3.30ರಿಂದ ಶ್ರೀ ವಿಷ್ಣುಮೂರ್ತಿ ದೈವದ ನೃತ್ಯ, ಅರಸಿನಹುಡಿ ಪ್ರಸಾದ ವಿತರಣೆ ಜರಗಲಿದೆ. ಏ.5ರಂದು ಬೆಳಗ್ಗೆ ಮೇಲರಿ ಕೂಡುವುದು, ಸಂಜೆ 6.30ಕ್ಕೆ ಏಣಿಯರ್ಪು ಕೋದಂರ್ಬತ್ ತರವಾಡು ದೈವಸ್ಥಾನದಿಂದ ಭಂಡಾರ ಹೊರಟು 7.30ಕ್ಕೆ ಭಂಡಾರ ಆಗಮನ, ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರ ಆಗಮನ, ಸ್ವಾಗತ, ಮೇಲೇರಿಗೆ ಅಗ್ನಿಸ್ಪರ್ಶ, ಸಿಂಧೂರ ಯುವಕ ವೃಂದದ ಪ್ರಾಯೋಜಕತ್ವದಲ್ಲಿ ಸ್ಥಳೀಯ ಸಾಧಕರಿಗೆ ಸನ್ಮಾನ ನಡೆಯಲಿದೆ ಬಳಿಕ ಟಿ.ವಿ. ರಿಯಾಲಿಟಿ ಶೋ ಖ್ಯಾತಿಯ ಸುಧೀರ್ ಉಳ್ಳಾಲ್ ನೇತೃತ್ವದ ಸಿಟಿ ಗೈಸ್ ಕುಡ್ಲಕ್ವೀನ್ಸ್ ತಂಡದಿಂದ ನೃತ್ಯ ವೈಭವ ನೂತನ ಕಾರ್ಯಕ್ರಮದ ಪ್ರದರ್ಶನ, ರಾತ್ರಿ 10 ಗಂಟೆಯಿಂದ ಶ್ರೀ ವಿಷ್ಣುಮೂರ್ತಿ ದೈವದ ಕುಳಿಚ್ಚಾಟ, ರಾತ್ರಿ 3 ಗಂಟೆಯಿಂದ ಶ್ರೀ ವಿಷ್ಣುಮೂರ್ತಿ ದೈವದ ಅಗ್ನಿಸೇವೆ (ಕೆಂಡಸೇವೆ), ಅರಸಿನಹುಡಿ ಪ್ರಸಾದ ವಿತರಣೆ ನಡೆಯಲಿದೆ. ಭಕ್ತಾದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಏ.4, 5ರಂದು ಬೇಳದಲ್ಲಿ ಬಯಲಕೋಲ ಮತ್ತು ಒತ್ತೆಕೋಲ
0
ಏಪ್ರಿಲ್ 01, 2023