ನಾವು ಹೆಚ್ಚೆಂದರೆ ಒಬ್ಬ ಮಹಿಳೆ 10 ರಿಂದ 20 ಮಕ್ಕಳಿಗೆ ಜನ್ಮ ನೀಡಿರುವ ಬಗ್ಗೆ ಕೇಳಿರುತ್ತೇವೆ. ಆದರೆ ಉಗಾಂಡದ ಮಹಿಳೆಯೊಬ್ಬರು ತನ್ನ 40ನೇ ವಯಸ್ಸಿಗೆ ಬರೋಬ್ಬರಿ 44 ಮಕ್ಕಳಿಗೆ ಜನ್ಮ ನೀಡಿದ್ದಾರೆ. (Image Credit: @Twitter)ಉಗಾಂಡಾದ ಮರಿಯಮ್ ನಬಂಟಾಜಿ ಎಂಬ ಮಹಿಳೆ 44 ಮಕ್ಕಳಿಗೆ ಜನ್ಮ ನೀಡಿ ವಿಶ್ವವೇ ಬೆರಗಾಗುವಂತೆ ಮಾಡಿದ್ದಾಳೆ. ಮರಿಯಮ್ ತನ್ನ 12 ನೇ ವಯಸ್ಸಿನಲ್ಲಿ ವಿವಾಹವಾಗಿದ್ದಾರೆ. ಆಕೆ ತನ್ನ 13ನೇ ವಯಸ್ಸಿಗೆ ಮೊದಲ ಬಾರಿಗೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ನಂತರ 36 ವರ್ಷ ತುಂಬುವ ವೇಳೆಗಾಗಲೇ 42 ಮಕ್ಕಳ ತಾಯಿಯಾಗಿದ್ದರು.
ಆಕೆಗೆ 40 ವರ್ಷ ತುಂಬುವ ವೇಳೆಗೆ 44 ಮಕ್ಕಳಿಗೆ ಜನ್ಮ ನೀಡಿದ್ದಾರೆ. ಈ ಮಹಾತಾಯಿಯನ್ನು ಸ್ಥಳೀಯರು ಮಾಮಾ ಎಂದು ಕರೆಯುತ್ತಾರೆ. ಮಾಮಾ 4 ಬಾರಿ ಅವಳಿ, 5 ಜೋಡಿ ತ್ರಿವಳಿ ಹಾಗೂ 5 ಬಾರಿ 4 ಮಕ್ಕಳಿಗೆ ಹಾಗೂ ಒಮ್ಮೆ ಮಾತ್ರ ಒಂಟಿ ಮಗುವಿಗೆ ಜನ್ಮ ನೀಡಿದ್ದಾರೆ.
44 ಮಕ್ಕಳಲ್ಲಿ 6 ಮಕ್ಕಳು ಸಾವನ್ನಪ್ಪಿದ್ದು 38 ಮಕ್ಜಳು ಜೀವಂತವಾಗಿವೆ. ಆದರೆ ಆಕೆಯ ಗಂಡ ಬೃಹತ್ ಮಕ್ಕಳ ಕುಟುಂಬವನ್ನು ಬಿಟ್ಟು ಹೋಗಿದ್ದಾರೆ. ಮಾಮಾ ಇಡೀ ಕುಟುಂಬವನ್ನು ನಿರ್ವಹಿಸುತ್ತಿದ್ದಾಳೆ. ಮರಿಯಮ್ ತಮ್ಮ 24 ವರ್ಷಗಳ ತಾಯ್ತನದ ಅವಧಿಯಲ್ಲಿ ಜನ್ಮ ನೀಡಿರುವ 38 ಮಕ್ಕಳಲ್ಲಿ 20 ಗಂಡು 18 ಹೆಣ್ಣು ಮಕ್ಕಳಿದ್ದಾರೆ.
ಇತರೆ ಮಹಿಳೆಯರಿಗಿಂತ ಮರಿಯಮ್ ಹೆಚ್ಚು ಮಕ್ಕಳಿಗೆ ಜನ್ಮ ನೀಡುತ್ತಿರುವ ಬಗ್ಗೆ ವೈದ್ಯರನ್ನು ಭೇಟಿ ಮಾಡಿ ಚರ್ಚಿಸಿದಾಗ, ಆಕೆ ಅಸಹಜವಾಗಿ ದೊಡ್ಡ ಅಂಡಾಶಯಗಳನ್ನು ಹೊಂದಿದ್ದು, ಇದು ಹೈಪರ್ ಓವ್ಯುಲೇಷನ್ ಎಂಬ ಸ್ಥಿತಿಗೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.
ಲೈಂಗಿಕ ಕ್ರಿಯೆ ಸಂದರ್ಭದಲ್ಲಿ, ಅಂಡಾಶಯಗಳು ಹಲವಾರು ಮೊಟ್ಟೆಗಳನ್ನು ಏಕಕಾಲದಲ್ಲಿ ಬಿಡುಗಡೆ ಮಾಡುತ್ತವೆ. ಈ ಕಾರಣಕ್ಕಾಗಿ ಆಕೆಗೆ ಹಲವು ಮಕ್ಕಳಾಗಿವೆ. ಇಂತಹವರಿಗೆ ಗರ್ಭನಿರೋಧಕ ಮಾತ್ರೆಗಳು ಕೆಲಸ ಮಾಡುವುದಿಲ್ಲ ಎಂದು ಆಕೆಗೆ ವೈದ್ಯಕೀಯ ತಜ್ಞರು ತಿಳಿಸಿದ್ದಾರೆ.
ಬೃಹತ್ ಕುಟುಂಬವನ್ನು ನಿಭಾಯಿಸಲಾಗದೆ ಪತಿ ಈ ಕುಟುಂಬವನ್ನು ಬಿಟ್ಟು ಪರಾರಿಯಾಗಿದ್ದಾನೆ. ಪ್ರಸ್ತುತ ಮರಿಯಮ್ ಕುಟುಂಬದ ನಿರ್ವಹಣೆಗಾಗಿ ಹಗಲು ರಾತ್ರಿ ದುಡಿಯುತ್ತಿದ್ದಾರೆ. ಆಕೆ ಈವೆಂಟ್ ಡೆಕೋರೇಟರ್ ಮತ್ತು ಕೇಶ ವಿನ್ಯಾಸಕಿಯಾಗಿದ್ದು, ಇದರ ಜೊತೆಗೆ ಕುಟುಂಬ ನಿರ್ವಹಸಿಲು ವಿವಿಧ ಗಿಡಮೂಲಿಕೆ ಔಷಧಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಅವಳು ಆಗಾಗ್ಗೆ ಎನ್ಜಿಒಗಳಿಂದ ನಿಧಿಸಂಗ್ರಹಣೆ ಮತ್ತು ಇತರ ದೇಣಿಗೆಗನ್ನು ಪಡೆದು ಮಕ್ಕಳನ್ನು ಸಾಕುತ್ತಿದ್ದಾರೆ.