ನವದೆಹಲಿ: ಮಹಿಳೆಯರು ಸ್ತನ್ಯಪಾನ ಮಾಡುವ ವೇಳೆ ಎಚ್ಚರ ವಹಿಸಬೇಕು. ಯಾಕೆ ಎಂದರೆ ಎದೆ ಹಾಲಿನ ಬಣ್ಣ ಯಾವುದು ಎಂಬುದು ತಿಳಿದಿರಬೇಕು. ಯಾಕೆಂದ್ರೆ ಬದಲಾಗುವ ಎದೆ ಹಾಲಿನ ಬಣ್ಣ ನಿಮ್ಮ ಆರೋಗ್ಯದ ಏರುಪೇರನ್ನು ಹೇಳುತ್ತದೆ.
ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಕೇಟ್ ಗ್ರೇಂಗರ್ ಗೆ ಈಗಾಗಲೇ ಮೂರು ಮಕ್ಕಳಿದ್ದಾರೆ.
ಫೆಬ್ರವರಿ 25 ರಂದು ಅವರು ನಾಲ್ಕನೇ ಮಗುವಿಗೆ ಜನ್ಮ ನೀಡಿದ್ದಾರೆ. ಆಕೆ ಎದೆ ಹಾಲಿನ ಬಣ್ಣ ಗುಲಾಬಿ ಬಣ್ಣಕ್ಕೆ ತಿರುಗಿತ್ತಂತೆ. ಅನುಮಾನ ಬಂದ ಗ್ರೇಂಗರ್, ಪರೀಕ್ಷೆಗೆ ಒಳಗಾಗಿದ್ದರು. ಆಗ ಅವರಿಗೆ ಟ್ರಿಪಲ್ ನೆಗೆಟಿವ್ ಸ್ತನ ಕ್ಯಾನ್ಸರ್ ಇದೆ ಎಂಬುದು ತಿಳಿದುಬಂದಿದೆ.
ಟ್ರಿಪಲ್ ನೆಗೆಟಿವ್ ಸ್ತನ ಕ್ಯಾನ್ಸರ್ :
ರಕ್ತ ಸಂಬಂಧಿಗಳಲ್ಲಿ ಈ ಖಾಯಿಲೆ ಮೊದಲೇ ಇದ್ದರೆ ನಿಮಗೆ ಬರುವ ಸಾಧ್ಯತೆಯಿರುತ್ತದೆ.
ತೂಕ ಹೆಚ್ಚಾದಾಗ, ಋತುಬಂಧದಲ್ಲಿ ವಿಳಂಬ, ವಿಕಿರಣಕ್ಕೆ ದೇಹವನ್ನು ಒಡ್ಡಿವುದು ಹಾಗೂ
ಅಧಿಕ ಪ್ರಮಾಣದಲ್ಲಿ ಮದ್ಯ ಸೇವನೆ ಕೂಡ ಇದಕ್ಕೆ ಕಾರಣವಾಗುತ್ತದೆ.
ಅಮೇರಿಕನ್
ಕ್ಯಾನ್ಸರ್ ಸೊಸೈಟಿಯ ಪ್ರಕಾರ, ಇದು ಬೇರೆ ಕ್ಯಾನ್ಸರ್ ಗಿಂತ ಬಹಳ ಭಿನ್ನವಾಗಿರುತ್ತವೆ. ಈ
ಕ್ಯಾನ್ಸರ್ ಸಾಮಾನ್ಯವಾಗಿ 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರಲ್ಲಿ
ಕಂಡುಬರುತ್ತದೆ. ಟ್ರಿಪಲ್ ನೆಗೆಟಿವ್ ಸ್ತನ ಕ್ಯಾನ್ಸರ್ ಅಪಾಯಕಾರಿ ಎಂದು ಅಮೇರಿಕನ್
ಕ್ಯಾನ್ಸರ್ ಸೊಸೈಟಿ ಹೇಳಿದೆ. ಟ್ರಿಪಲ್ ನೆಗೆಟಿವ್ ಸ್ತನ ಕ್ಯಾನ್ಸರ್ ವೇಗವಾಗಿ
ಹರಡುತ್ತದೆ.
ಸ್ತನದಲ್ಲಿ ಊತ, ಅಸಹಜವಾಗಿ ಬೆಳೆಯುವ ಚರ್ಮ, ನಿಪ್ಪಲ್ ನಲ್ಲಿ ನೋವು, ನಿಪ್ಪಲ್ ಒಳಗೆ ಹೋಗುವುದು, ನಿಪ್ಪಲ್ ಸುತ್ತ ಒಣ ಮತ್ತು ಫ್ಲಾಕಿ ಚರ್ಮ, ನಿಪ್ಪಲ್ ನಲ್ಲಿ ಡಿಸ್ಜಾರ್ಜ್, ತೋಳಿನ ಕೆಳಗೆ ದುಗ್ಧರಸ ಗ್ರಂಥಿಗಳು ಊದಿಕೊಳ್ಳುವುದು ಇದ್ರ ಲಕ್ಷಣವಾಗಿದೆ.