ನವದೆಹಲಿ: ಮಹಿಳೆಯೊಬ್ಬರು ಭಾನುವಾರ ಮ್ಯಾಂಚೆಸ್ಟರ್ನಲ್ಲಿ ನಡೆದ 42.5 ಕಿಮೀ ಮ್ಯಾರಥಾನ್ನಲ್ಲಿ ಸೀರೆ ಧರಿಸಿ ಓಡಿ ಸುದ್ದಿಯಾಗಿದ್ದಾರೆ.
ಸಂಬಲ್ಪುರಿ ಕೈಮಗ್ಗದ ಸೀರೆ ಧರಿಸಿದ 41 ವರ್ಷದ ಮಧುಸ್ಮಿತಾ ಜೆನಾ ಮ್ಯಾರಥಾನ್ ಅನ್ನು 4 ಗಂಟೆ 50 ನಿಮಿಷಗಳಲ್ಲಿ ಪೂರ್ಣಗೊಳಿಸಿದರು.
ಮ್ಯಾರಥಾನ್ಗಳು ಮತ್ತು ಅಲ್ಟ್ರಾ ಮ್ಯಾರಥಾನ್ಗಳಲ್ಲಿ ಭಾಗವಹಿಸಿದ್ದಾರೆ. ಆದರೆ ಮಧುಸ್ಮಿತಾ ಸೀರೆ ಉಟ್ಟು ಮ್ಯಾರಥಾನ್ನಲ್ಲಿ ಭಾಗವಹಿಸಿದ್ದು ಇದೇ ಮೊದಲು. ಈಕೆ ಮ್ಯಾಂಚೆಸ್ಟರ್ನಲ್ಲಿ ಪ್ರೌಢಶಾಲಾ ಶಿಕ್ಷಕಿಯಾಗಿದ್ದಾರೆ.
'ಸೀರೆಯಲ್ಲಿ ತುಂಬಾ ಸಮಯ ಓಡುವುದು ಹೆಚ್ಚು ಕಷ್ಟ. ನಾನು 42.5 ಕಿಮೀ ಮ್ಯಾರಥಾನ್ನ 4.50 ಗಂಟೆಗಳಲ್ಲಿ ಪೂರ್ಣಗೊಳಿಸಿದ್ದು, ನನಗೆ ಸಂತೋಷವಾಗಿದೆ. ಸೀರೆ ಉಡಲು ತನ್ನ ತಾಯಿ ಮತ್ತು ಅಜ್ಜಿಯಿಂದ ಸ್ಫೂರ್ತಿ ಪಡೆದಿದ್ದೇನೆ. ಮಹಿಳೆಯರು ಸೀರೆಯನ್ನು ಧರಿಸಿ ಓಡಲಾರರು ಎಂದು ಹಲವರು ನಂಬುತ್ತಾರೆ. ಆದರೆ ನಾನು ಸಂಬಲ್ಪುರಿ ಕೈಮಗ್ಗದ ಸೀರೆ ಧರಿಸಿ ಓಡುವ ಮೂಲಕ ಅದು ತಪ್ಪು ಎಂದು ಸಾಬೀತುಪಡಿಸಿದೆ' ಎಂದು ಮಧುಸ್ಮಿತಾ ತಿಳಿಸಿದ್ದಾರೆ.