ಕಾಸರಗೋಡು: ರಾಜ್ಯಾದ್ಯಂತ ಸಂಚಾರ ನಿಯಮ ಉಲ್ಲಂಘನೆ ಪತ್ತೆ ಹಚ್ಚಲು ಸಾರಿಗೆ ಇಲಾಖೆ ಜಿಲ್ಲೆಯಲ್ಲಿ ಅಳವಡಿಸಿರುವ ಕೃತಕ ಬುದ್ಧಿಮತ್ತೆ (ಎಐ) ಕ್ಯಾಮೆರಾಗಳು ಕಾರ್ಯಾರಂಭಕ್ಕೆ ಸಜ್ಜುಗೊಳಿಸಲಾಗಿದೆ. ಸಿಸಿ ಕ್ಯಾಮರಾಗಳ ಚಟುವಟಿಕೆ ಏ. 20ರಿಂದ ಆರಂಭಗೊಳ್ಳಲಿದ್ದು, ಮುಂದಿನ ದಿನಗಳಲ್ಲಿ ಇದರ ಯೋಜನೆಗಳು ಜಾರಿಗೆ ಬರಲಿರುವುದಾಗಿ ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ 46 ಸ್ಥಳಗಳನ್ನು ಇದಕ್ಕಾಗಿ ಗುರುತಿಸಲಾಗಿದೆ. ಕಾಸರಗೋಡು ಹಳೇ ಬಸ್ ನಿಲ್ದಾಣದಲ್ಲಿ ಎಂಜಿ ರಸ್ತೆ ಮತ್ತು ಪ್ರೆಸ್ ಕ್ಲಬ್ ಜಂಕ್ಷನ್, ಕಾಸರಗೋಡು-ಕಾಞಂಗಾಡು ಕೆಎಸ್‍ಟಿಪಿ ರಸ್ತೆಯ ಚೆಮ್ನಾಡ್, ಮೇಲ್ಪರಂಬ, ಕಳನಾಡ್ ಜಂಕ್ಷನ್ 1, ಜಂಕ್ಷನ್ 2, ಪಾಲಕುನ್ನು, ಬೇಕಲ ಸೇತುವೆ, ಪಳ್ಳಿಕ್ಕರ, ಮಡಿಯನ್, ಚಿತ್ತಾರಿ, ಅದಿಙËಲ್, ಕಾಂಞಂಗಾಡ್ (2), ಟಿ.ಬಿ ರಸ್ತೆ, ಕೋಟಚೇರಿ, ಹೊಸದುರ್ಗ, ಪದಿಯಕೋಟಾ, ಒಡೆಯಂಚಲ್ ಮತ್ತು ಕಾಲಿಕ್ಕಡವ್, ಮಂಗಳೂರು ರಸ್ತೆಯ ಕುಂಬಳೆಯಲ್ಲಿ ಎರಡು, ಬಂದ್ಯೋಡು, ಉಪ್ಪಳ, ಹೊಸಂಗಡಿ ಮತ್ತು ಚೆರ್ಕಳ ಮೂಲಕ ಹಾದು ಹೋಗುವಾಗ ಚೆರ್ಕಳ ಜಂಕ್ಷನ್, ಬೋವಿಕಾನ, ಮುಳ್ಳೇರಿಯಾ, ಕುತ್ತಿಕೋಲ್, ಬಂದಡ್ಕ, ಮತ್ತು ಬದಿಯಡ್ಕದಲ್ಲಿ ಎರಡು, ಸೀತಾಂಗೋಳಿ ಜಂಕ್ಷನ್ ಮತ್ತು ಪೆರ್ಲದಲ್ಲಿ ಎರಡು ಸ್ಥಳಗಳಲ್ಲಿ ಸ್ಥಾಪಿಸಲಾಗಿದೆ. ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಾಲನೆ, ವಾಹನ ಚಲಾವಣೆ ಸಂದರ್ಭ ಮೊಬೈಲ್ ಸಂಭಾಷಣೆ, ಕೆಂಪು ರೇಖೆಯನ್ನು ನಿರ್ಲಕ್ಷಿಸುವುದು ಮತ್ತು ರಸ್ತೆಯಲ್ಲಿ ಹಳದಿ ರೇಖೆ ದಾಟುವುದನ್ನು ಪತ್ತೆಹಚ್ಚಿ ಆರ್‍ಸಿ ಮಾಲೀಕರ ಮೊಬೈಲ್ ಫೆÇೀನ್‍ಗೆ ತಕ್ಷಣ ಸೂಚನೆ ರವಾನೆಯಾಗಲಿದೆ. ಸೂಚನೆಗಳ ಉಲ್ಲಂಘನೆಯ ದಿನಾಂಕ, ಸಮಯ, ಸ್ಥಳ ಮತ್ತು ದಂಡದ ಮೊತ್ತವನ್ನು ಈ ಮೂಲಕ ತಿಳಿಸಲಾಗುತ್ತದೆ. ಅಕ್ರಮ ನಿಲುಗಡೆಗೆ ಕನಿಷ್ಠ ದಂಡ 250 ರೂ, ಹೆಲ್ಮೆಟ್ ಮತ್ತು ಸೀಟ್ ಬೆಲ್ಟ್ ಇಲ್ಲದೆ ವಾಹನ ಚಲಾಯಿಸಿದರೆ 500 ರೂ, ಅತಿವೇಗಕ್ಕೆ 1500 ರೂ. ಮತ್ತು ಚಾಲನೆ ಮಾಡುವಾಗ ಮೊಬೈಲ್ ಫೆÇೀನ್ ಬಳಸಿದರೆ 2000 ರೂ. ದಂಡ ಪಾವತಿಸಬೇಕಾಗುತ್ತದೆ.
232.25ಕೋಟಿ ರೂ. ಯೋಜನೆ:
ಕೇರಳ ರಸ್ತೆ ಸುರಕ್ಷಾ ಪ್ರಾಧಿಕಾರ 232.25ಕೋಟಿ ರೂ.. ವ್ಯಯಿಸಿ ಕೆಲ್ಟ್ರೋನ್ ಸಂಸ್ಥೆ ಸಹಕಾರದೊಂದಿಗೆ ಸಿ.ಸಿ ಕ್ಯಾಮರಾ ಅಳವಡಿಸುವ ಕಾರ್ಯ ಕೈಗೊಳ್ಳಲಾಗಿದೆ. ಕಾಸರಗೋಡು ಕರಂದಕ್ಕಾಡಿನಲ್ಲಿ ಸಿಸಿ ಕ್ಯಾಮರಾದ ನಿಯಂತ್ರಣ ಕೊಠಡಿ ಕಾರ್ಯಾಚರಿಸಲಿದೆ. ಏ. 20ರಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿರುವನಂತಪುರದಲ್ಲಿ ನಡೆಯುವ ಆನ್‍ಲೈನ್ ಸಮಾರಂಭದಲ್ಲಿ ಯೋಜನೆಗೆ ಚಾಲನೆ ನೀಡುವರು. ಷಟ್ಪಥ ನಿರ್ಮಾಣಕಾಮಗಾರಿ ಪೂರ್ತಿಗೊಂಡಲ್ಲಿ ಕಸರಗೋಡು ನಗರ ಸೇರಿದಂತೆ ಹೆಚ್ಚಿನ ಕೇಂದ್ರಗಳಲ್ಲಿ ಸಇಸಿ ಕ್ಯಾಮರಾ ಅಳವಡಿಸಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ.
ಸಂಚಾರ ನಿಯಮ ಉಲ್ಲಂಘನೆ ಪತ್ತೆಗೆ ಜಿಲ್ಲೆಯಲ್ಲಿ 46 ಸಿಸಿ ಕ್ಯಾಮರಾ ಅಳವಡಿಕೆ ಕಾರ್ಯ ಪೂರ್ತಿ: 20ರಂದು ಉದ್ಘಾಟನೆ
0
ಏಪ್ರಿಲ್ 16, 2023
Tags