ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಡಿ ಜಿಲ್ಲೆ ರಜೌರಿಯ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಭದ್ರತಾ ಪಡೆಗಳು ಪಾಕಿಸ್ತಾನದ ಡ್ರೋಣ್'ವೊಂದನ್ನು ಹೊಡೆದುರುಳಿಸಿವೆ.
ಏಪ್ರಿಲ್ 12 ಮತ್ತು 13 ರ ಮಧ್ಯರಾತ್ರಿಯ ಸಮಯದಲ್ಲಿ, ಸುದರ್ಬಾನಿ ಸೆಕ್ಟರ್‌ನ ರಜೌರಿಯ ಬೆರಿ ಪಟ್ಟನ್ ಪ್ರದೇಶದ ಗಡಿ ನಿಯಂತ್ರಣ ರೇಖೆ ಬಳಿ ಅನುಮಾನಾಸ್ಪದ ಚಲನೆಯೊಂದನ್ನು ಭದ್ರತಾ ಪಡೆಗಳು ಪತ್ತೆಹಚ್ಚಿದ್ದವು. ಕೂಡಲೇ ಗುಂಡು ಹಾಕಿ ಡ್ರೋಣ್'ನ್ನು ಹೊಡೆದುರುಳಿಸಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹೊಡೆದುರುಳಿಸಲಾದ ಡ್ರೋಣ್ ನಲ್ಲಿ 131 ಸುತ್ತು ಏಕೆ-47. 5 ನಿಯತಕಾಲಿಕೆಗಳು ಹಾಗೂ ರೂ.2 ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಡ್ರೋಣ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಎಲ್‌ಒಸಿಗೆ ಸಮೀಪವಿರುವ ಹಲವು ಗ್ರಾಮಗಳಲ್ಲಿ ಸೇನೆ ಮತ್ತು ಪೊಲೀಸರು ಭಾರಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಈ ವಸ್ತುಗಳನ್ನು ಸಾಗಿಸಲು ಪದೇ ಪದೇ ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.