ಚೆನೈ : ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ, ಡಿಎಂಕೆ ಸರ್ಕಾರದ ವಿರುದ್ದ ಭ್ರಷ್ಟಾಚಾರದ ಆರೋಪ ಮಾಡಿದ ಬೆನ್ನಲ್ಲೇ ಖಾಸಗಿ ರಿಯಲ್ ಎಸ್ಟೇಟ್ ಕಂಪನಿ 'ಜಿ ಸ್ಕ್ವೇರ್'ಗೆ ಸಂಬಂಧಿಸಿದ ಕನಿಷ್ಠ 50 ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ.

ಅಣ್ಣಾನಗರದ ಡಿಎಂಕೆ ಶಾಸಕ ಎಂ.ಕೆ ಮೋಹನ್ ಅವರ ಪುತ್ರ 'ಜಿ ಸ್ಕ್ವೇರ್'ನಲ್ಲಿ ಷೇರು ಹೊಂದಿದ್ದು, ಅವರ ನಿವಾಸದ ಮೇಲೂ ದಾಳಿ ನಡೆದಿದೆ. ಐಟಿ ರೈಡ್‌ಅನ್ನು ವಿರೋಧಿಸಿ ಡಿಎಂಕೆ ಕಾರ್ಯಕರ್ತರು ಎಂ.ಕೆ. ಮೋಹನ್ ಅವರ ಪುತ್ರನ ನಿವಾಸದ ಎದುರುಗಡೆ ಪ್ರತಿಭಟನೆ ನಡೆಸಿದ್ದಾರೆ.
ಒಂದು ವಾರಗಳ ಹಿಂದಷ್ಟೆ ಅಣ್ಣಾಮಲೈ ಅವರು ಮುಖ್ಯಮಂತ್ರಿ ಸ್ಟಾಲಿನ್ ಹಾಗೂ ಅವರ ಕುಟುಂಬ ಮತ್ತು ಡಿಎಂಕೆ ಸರ್ಕಾರದ ಸಚಿವರ ವಿರುದ್ದ ಅಕ್ರಮ ಆಸ್ತಿ ಮತ್ತು ಭ್ರಷ್ಟಾಚಾರದ ಆರೋಪ ಮಾಡಿ 'ಡಿಎಂಕೆ ಫೈಲ್ಸ್' ಎಂಬ ವಿಡಿಯೊ ಬಿಡುಗಡೆ ಮಾಡಿದ್ದರು. ಇದರ ಬೆನ್ನಲ್ಲೇ ಐಟಿ ದಾಳಿ ನಡೆಸಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿ ಕೊಟ್ಟಿದೆ.
'ಜಿ ಸ್ಕ್ವೇರ್' ಒಂದು ಖಾಸಗಿ ಕಂಪನಿಯಾಗಿದ್ದು, 2012 ಅಕ್ಟೋಬರ್ 12ರಂದು ಸ್ಥಾಪನೆಯಾಗಿದೆ. ಇದೊಂದು ಸರ್ಕಾರೇತರ ಕಂಪೆನಿಯಾಗಿದೆ.ಈ ಹಿಂದೆ 2019ರಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಈ ಕಂಪೆನಿಯ ಮೇಲೆ ದಾಳಿ ನಡೆಸಿದ್ದರು. ಇದೀಗ ಎರಡನೇ ಬಾರಿ ದಾಳಿಗೆ ಒಳಗಾಗಿದೆ.