ತಿರುವನಂತಪುರಂ: ಅತಿವೇಗದ ಚಾಲನೆ ಹಾಗೂ ಮಾಡಿಫೈ ಬೈಕ್‍ಗಳಲ್ಲಿ ಸಾಹಸ ಪ್ರದರ್ಶಿಸುವವರನ್ನು ಪತ್ತೆ ಹಚ್ಚಲು ರಾಜ್ಯಾದ್ಯಂತ ನಡೆಸಿದ ತಪಾಸಣೆಯಲ್ಲಿ 53 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪೋಲೀಸರು ಹಾಗೂ ಮೋಟಾರು ವಾಹನ ಇಲಾಖೆ ಜಂಟಿಯಾಗಿ ತಪಾಸಣೆ ನಡೆಸಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಸಿದ ತಪಾಸಣೆಯಲ್ಲಿ 6,37,350 ರೂ.ಗಳ ದಂಡವನ್ನು ಸಂಗ್ರಹಿಸಲಾಗಿದೆ. 85 ಮಂದಿಗೆ ದಂಡ ವಿಧಿಸಲಾಗಿದೆ. ತಿರುವನಂತಪುರಂ ಗ್ರಾಮಾಂತರ ಜಿಲ್ಲೆ ಅತಿ ಹೆಚ್ಚು ಮೊತ್ತವನ್ನು ದಂಡವಾಗಿ ಸಂಗ್ರಹಿಸಿದೆ - ರೂ.1,66,500. ವಾಹನಗಳಲ್ಲಿ ಸಾಹಸ ಪ್ರದರ್ಶಿಸಿದ(!) 37 ಮಂದಿಯ ಪರವಾನಗಿ ರದ್ದುಪಡಿಸಲು ಶಿಫಾರಸು ಮಾಡಲಾಗಿದೆ.
ಸಂಚಾರ ವಿಭಾಗದ ಐಜಿ ಎ.ಅಕ್ಬರ್ ನಿರ್ದೇಶನದ ಮೇರೆಗೆ ದಕ್ಷಿಣ ವಲಯ ಟ್ರಾಫಿಕ್ ಎಸ್ ಪಿಯು ಸುನೀಲ್ ಕುಮಾರ್ ಹಾಗೂ ಉತ್ತರ ವಲಯ ಸಂಚಾರ ಎಸ್ ಪಿ ಹರೀಶ್ಚÀಂದ್ರ ನಾಯ್ಕ್ ರಾಜ್ಯಾದ್ಯಂತ ತಪಾಸಣೆ ನಡೆಸಿದರು.
ರಸ್ತೆಯಲ್ಲಿ ದ್ವಿಚಕ್ರ ವಾಹನದ ಮೂಲಕ ಸಾಹಸ ಪ್ರದರ್ಶನ ಮಾಡುವವರು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ವಿಡಿಯೋಗಳನ್ನು ಪತ್ತೆ ಹಚ್ಚಿ ಅವರಿಂದ ದ್ವಿಚಕ್ರ ವಾಹನ ಸವಾರರು ಹಾಗೂ ಅವುಗಳ ಮಾಲೀಕರನ್ನು ಗುರುತಿಸಿ ವಿಶೇಷ ತಪಾಸಣೆ ನಡೆಸಲಾಯಿತು. ರಾಜ್ಯ ಪೋಲೀಸ್ ಮಾಧ್ಯಮ ಕೇಂದ್ರ ಪತ್ರಿಕಾ ಪ್ರಕಟಣೆಯಲ್ಲಿ ಈ ಮಾಹಿತಿ ನೀಡಿದೆ.