ಡೆಹ್ರಾಡೂನ್ : ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳ ಬದರೀನಾಥ ದೇಗುಲ ಇಂದು(ಏ.27) ಬೆಳಿಗ್ಗೆ ತೀರ್ಥಯಾತ್ರಿಕರಿಗೆ ತೆರೆಯಲಾಯಿತು. ಈ ವಿಶೇಷ ಸಂದರ್ಭ ಟೆಲಿಕಾಂ ಕ್ಷೇತ್ರದ ಪ್ರಮುಖ ಕಂಪನಿ ರಿಲಯನ್ಸ್ ಜಿಯೊ ತನ್ನ 5ಜಿ ನೆಟ್ವರ್ಕ್ ಸೇವೆಯನ್ನು ಚಾರ್ ಧಾಮಗಳಲ್ಲಿ ಆರಂಭಿದೆ ಎಂದು ಘೋಷಿಸಿದೆ.

ಕೇದಾರನಾಥ, ಬದರೀನಾಥ, ಯಮುನೋತ್ರಿ, ಗಂಗೋತ್ರಿ ದೇಗುಲಗಳಿಗೆ ತೀರ್ಥಯಾತ್ರೆ ಹೋಗುವವರು 5ಜಿ ಬಳಕೆದಾರರಾಗಿದ್ದಲ್ಲಿ ಅವರು ತಡೆರಹಿತ 5ಜಿ ಸೇವೆ ಸಿಗಲಿದೆ ಎಂದು ರಿಲಯನ್ಸ್ ಜಿಯೊ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಟೆಲಿಕಾಂ ಸೇವೆಗೆ ಬದಿರೀನಾಥ-ಕೇದಾರನಾಥ ದೇಗುಲಗಳ ಸಮಿತಿ ಅಧ್ಯಕ್ಷ ಅಜೇಂದ್ರ ಅಜಯ್ ಅವರು ಚಾಲನೆ ನೀಡಿದರು.
ಈ ವೇಳೆ ಹಾಜರಿದ್ದ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮಾತನಾಡಿ, 'ಡಿಜಿಟಲ್ ಕ್ಷೇತ್ರದಲ್ಲಿ ಬದಲಾವಣೆ ತಂದ ರಿಲಯನ್ಸ್ ಜಿಯೊಗೆ ಧನ್ಯವಾದ' ಎಂದರು.