ಕೊಚ್ಚಿ: ಕೊಚ್ಚಿ ವಾಟರ್ ಮೆಟ್ರೋದಲ್ಲಿ ಮೊದಲ ದಿನ 6,559 ಮಂದಿ ಪ್ರಯಾಣಿಸಿದ್ದಾರೆ. ಆರಂಭ ದಿನ ಜಲ ಮೆಟ್ರೋಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನಿನ್ನೆ ಹೈಕೋರ್ಟ್ ಟರ್ಮಿನಲ್ ನಲ್ಲಿ ಭಾರೀ ಜನಜಂಗುಳಿ ಇತ್ತು. ಪ್ರವಾಸಿಗರು ಸೇರಿದಂತೆ ನೂರಾರು ಜನರು ಮೊದಲ ಪ್ರಯಾಣಕ್ಕೆ ತುದಿಗಾಲಲ್ಲಿ ನಿಂತಿದ್ದರು.
ಮೊದಲ ದಿನ ಟಿಕೆಟ್ ಮಾರಾಟದ ಮೂಲಕ ಗಳಿಸಿದ ಆದಾಯವನ್ನು ಕೆಎಂಆರ್‍ಎಲ್ ಬಹಿರಂಗಪಡಿಸಿಲ್ಲ. ವಾಟರ್ ಮೆಟ್ರೋದಲ್ಲಿ ಪ್ರಯಾಣಿಸಲು ಸ್ಮಾರ್ಟ್ ಕಾರ್ಡ್ ವಿತರಣೆ ಪ್ರಾರಂಭವಾಗಿದೆ. ಸ್ಮಾರ್ಟ್ ಕಾರ್ಡ್‍ಗಳು ಹೆಚ್ಚು ಜನರನ್ನು ತಲುಪುತ್ತಿದ್ದಂತೆ, ಟಿಕೆಟ್‍ಗಳ ಸರದಿ ಕಡಿಮೆಯಾಗಬಹುದು ಎಂದು ಕೆಎಂಆರ್‍ಎಲ್ ಆಶಿಸುತ್ತಿದೆ.
ವಾಟರ್ ಮೆಟ್ರೋ ನಿನ್ನೆ ಹೈಕೋರ್ಟ್-ವೈಪಿನ್ ಮಾರ್ಗದಲ್ಲಿ ತನ್ನ ಮೊದಲ ಸೇವೆಯನ್ನು ಪ್ರಾರಂಭಿಸಿತು. ಪ್ರತಿ 15 ನಿಮಿಷಗಳಿಗೊಮ್ಮೆ ದೋಣಿ ಸೇವೆ ಇದೆ. ಟಿಕೆಟ್ ದರ 20 ರೂಪಾಯಿ.