ಬದಿಯಡ್ಕ: ಯಕ್ಷಮಿತ್ರ ನಾರಂಪಾಡಿ ಬಳಗದವರಿಂದ ಏಪ್ರಿಲ್ 14 ಶುಕ್ರವಾರದಂದು ನಾರಂಪಾಡಿಯಲ್ಲಿ ಶ್ರೀ ಮಹಿಷರ್ಮನಿ ದಶಾವತಾರ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ನೀಲಾವರ ಮೇಳದವರಿಂದ ಬಡಗುತಿಟ್ಟಿನ ಸೂಪರ್ ಹಿಟ್ ಪ್ರಸಂಗದ 75ನೇ ಪ್ರದರ್ಶನ ಶಿವ ಮೆಚ್ಚಿದ ಹಾಯ್‍ಗುಳಿ ಎಂಬ ಕಥಾನಕವು ಪ್ರದರ್ಶನವಾಗಲಿದೆ. ರಾತ್ರಿ 10 ರಿಂದ ಬೆಳಗಿನ ತನಕ ನಡೆಯಲಿರುವ ಯಕ್ಷಗಾನ ಬಯಲಾಟದಲ್ಲಿ ಭಾಗವತರಾಗಿ ಡಾ. ರವಿಕುಮಾರ ಸೂರಾಲು, ಚಂದ್ರಯ್ಯ ಆಚಾರ್ಯ, ಶಶಾಂಕ ಸೂರಾಲು ಪಾಲ್ಗೊಳ್ಳಲಿದ್ದಾರೆ. ಮದ್ದಳೆಯಲ್ಲಿ ರಾಜಾರಾಮ ಹೆಗ್ಡೆ ಮಂದಾರ್ತಿ, ಮಂಜುನಾಥ ಭಟ್, ಚೆಂಡೆಯಲ್ಲಿ ರಾಹುಲ ಕೋಡಿ, ಶಿವಾನಂದ ಗುಲ್ವಾಡಿ, ಸ್ತ್ರೀವೇಷದಲ್ಲಿ ಮಂಜುನಾಥ ಕುಲಾಲ್ ಕಮಲಶಿಲೆ, ಪ್ರಶಾಂತ ಗೌಡ, ವಿಕ್ರಮ ದೇವಾಡಿಗ, ಯೋಗೇಂದ್ರ ಆಚಾರ್ಯ ಹಾಗೂ ಹಾಸ್ಯದಲ್ಲಿ ದ್ವಿತೇಶ ಕಾಮತ್ ಹಿರಿಯಡ್ಕ, ಅಶೋಕ ಬಾಬುಕೊಟ ಜೊತೆಗೂಡಲಿದ್ದಾರೆ. ಪ್ರಸಿದ್ಧ ಮುಮ್ಮೇಳ ಕಲಾವಿದರು ಯಕ್ಷವೇದಿಕೆಯಲ್ಲಿ ವಿವಿಧ ಪಾತ್ರಗಳಲ್ಲಿ ಮಿಂಚಲಿದ್ದಾರೆ.
ಸಭಾಕಾರ್ಯಕ್ರಮ :
ರಾತ್ರಿ 8 ರಿಂದ ನಡೆಯುವ ಸಭಾಕಾರ್ಯಕ್ರಮದಲ್ಲಿ ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ಪ್ರೌಢಶಾಲೆಯ ಅಧ್ಯಾಪಕ ಹರಿನಾರಾಯಣ ಭಟ್ ಅಧ್ಯಕ್ಷತೆ ವಹಿಸುವರು. ಡಾ. ವೇಣುಗೋಪಾಲ ಕಳೆಯತ್ತೋಡಿ, ಎಚ್.ಆರ್. ಅರುಣ್ ಕುಮಾರ್ ಬೆಂಗಳೂರು, ನಾರಾಯಣ ಶೆಟ್ಟಿ ಬೆಳಿಂಜ, ಸಂತೋಷ್ ರೈ ಗಾಡಿಗುಡ್ಡೆ, ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಇದೇ ಸಂದಭರ್Àದಲ್ಲಿ ನಾರಂಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರದ ಪ್ರಧಾನ ಅರ್ಚಕ ಶಂಕರನಾರಾಯಣ ಕೆದಿಲ್ಲಾಯ ಪುಂಡೂರು ಅವರನ್ನು ಸನ್ಮಾನಿಸಲಾಗುವುದು. 9.30ಕ್ಕೆ ಶ್ರೀ ಮಹಿಷರ್ಮನಿ ಅಮ್ಮನವರಿಗೆ ಚೌಕಿಪೂಜೆ ನಡೆಯಲಿರುವುದು. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಕ್ಷಗಾನ ಕಲೆಗೆ ಪ್ರೋತ್ಸಾಹವನ್ನು ನೀಡಬೇಕಾಗಿ ಸಂಬಂಧಪಟ್ಟವರು ತಿಳಿಸಿರುತ್ತಾರೆ.
ಬಡಗುತಿಟ್ಟಿನ ಯಕ್ಷಗಾನ: ಸೂಪರ್ ಹಿಟ್ ಪ್ರಸಂಗದ 75ನೇ ಪ್ರದರ್ಶನ: ಏಪ್ರಿಲ್ 14ರಂದು ನಾರಂಪಾಡಿಯಲ್ಲಿ ಶಿವ ಮೆಚ್ಚಿದ ಹಾಯ್‍ಗುಳಿ
0
ಏಪ್ರಿಲ್ 12, 2023
Tags