ಮಧೂರು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಶ್ರೀದೇವರ ನಿತ್ಯಬಲಿ ಸೋಮವಾರ ಪುನರಾರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ಉದಯಾಸ್ತಮಾನ ಪೂಜೆ ಮತ್ತು ಪ್ರಾರ್ಥನೆ ಬೆಳಗ್ಗೆ 8ರಿಂದ ಆರಂಭಗೊಳ್ಳಲಿದೆ. ದೀಪಾವಳಿಯಿಂದ ತೊಡಗಿ ಪತ್ತನಾಜೆ ವರೆಗೆ ದೇವಾಲಯದಲ್ಲಿ ನಿತ್ಯ ಬಲಿ ನಡೆಯುತ್ತಿದ್ದು, ಜೀರ್ಣೋದ್ಧಾರ ಹಿನ್ನೆಲೆಯಲ್ಲಿ ನಿತ್ಯಬಲಿ ತಾತ್ಕಾಲಿಕವಾಗಿ ನಿಲುಗಡೆಗೊಳಿಸಲಾಗಿತ್ತು. ದೇವಸ್ಥಾನದ ತಂತ್ರಿ ದೇರೆಬೈಲ್ ಶಿವಪ್ರಸಾದ ತಂತ್ರಿ ಅವರ ನಿರ್ದೇಶಾನುಸಾರ ಮತ್ತೆ ದೇವರ ನಿತ್ಯಬಲಿ ಆರಂಭಗೊಳಿಸಲಾಗಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.
ಮಧೂರು-ಬೆಳಗ್ಗೆ 8 ರಿಂದ ಉದಯಾಸ್ತಮಾನ ಪ್ರಾರ್ಥನೆ
0
ಏಪ್ರಿಲ್ 06, 2023