ತಿರುವನಂತಪುರಂ: 80 ಲಕ್ಷ ರೂ. ಲಾಟರಿ ಗೆದ್ದವ ಸ್ನೇಹಿತರೊಂದಿಗೆ ಮದ್ಯ ಸೇವಿಸಿ ನಿಗೂಢವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.
ಪಾಂಗೋಡು ಮೂಲದ ಸಂತೋಷ್ ಎಂಬಾತನನ್ನು ಪೆÇಲೀಸರು ಬಂಧಿಸಿದ್ದಾರೆ. ಪಾಂಗೋಡು ಮೂಲದ ಸಜೀವ್ ಎಂಬಾತ ಲಾಟರಿ ಹೊಡೆದು ಸ್ನೇಹಿತರ ಜತೆ ಸೇರಿ ಮದ್ಯ ಸೇವಿಸಿ ಸೋಮವಾರ ಮೃತಪಟ್ಟಿದ್ದಾನೆ.
ಸಜೀವ್‍ನನ್ನು ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ಸಂಬಂಧಿಕರ ಹೇಳಿಕೆ ಮೇರೆಗೆ ಪೆÇಲೀಸರು ಸಂತೊï್ಷನನ್ನು ವಶಕ್ಕೆ ಪಡೆದಿದ್ದಾರೆ. ಅಸಹಜ ಸಾವು ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕವμÉ್ಟೀ ಸಜೀವ್ ಸಾವಿಗೆ ಕಾರಣ ತಿಳಿಯಲಿದೆ ಎಂದು ಪೆÇಲೀಸರು ತಿಳಿಸಿದ್ದಾರೆ. ಕಳೆದ ತಿಂಗಳು ಅವರಿಗೆ ರಾಜ್ಯ ಲಾಟರಿಯ ಎಂಬತ್ತು ಲಕ್ಷ ರೂಪಾಯಿ ಬಹುಮಾನ ಬಂದಿತ್ತು.
ಮೊತ್ತ ನಿನ್ನೆ ಬ್ಯಾಂಕ್‍ಗೆ ತಲುಪಿತ್ತು. ಬಳಿಕ ಸ್ನೇಹಿತರಿಗಾಗಿ ಪಾರ್ಟಿ ಏರ್ಪಡಿಸಲಾಗಿತ್ತು. ಇದೇ ವೇಳೆ ಗೆಳೆಯರೊಂದಿಗೆ ಮಾತನಾಡುತ್ತಿದ್ದ ವೇಳೆ ಕೆಳಗೆ ಬಿದ್ದಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆತನ ಪ್ರಾಣ ಉಳಿಸಲಾಗಲಿಲ್ಲ. ಆದರೆ ಸಂತೋಷ್ ಸಜೀವ್ ನನ್ನು ತಳ್ಳಿ ಬೀಳಿಸಿದ್ದ ಎಂದು ಸಂಬಂಧಿಕರ ದೂರಿನ ಮೇರೆಗೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಂತರ ಸಂತೋಷ್‍ನನ್ನು ವಶಕ್ಕೆ ಪಡೆಯಲಾಯಿತು.
ಲಾಟರಿ ಗೆದ್ದ ಖುಷಿಯಲ್ಲಿ ಸಜೀವನ್ ಪಿಳ್ಳೈ ಅವರ ಮನೆಯಲ್ಲಿ ಸಂತೋಷ್ ಸೇರಿದಂತೆ ಗೆಳೆಯರಿಗೆ ಔತಣಕೂಟ ಏರ್ಪಡಿಸಲಾಗಿತ್ತು. ಸಂತೊï್ಷ ಮತ್ತು ಸಜೀವ್ ನಡುವೆ ಮಾತಿನ ಚಕಮಕಿ ನಡೆದಿದೆ. ವಾಗ್ವಾದದ ವೇಳೆ ಸಂತೆï್ಷ್ಷ ಸಜೀವ್ ನನ್ನು ಹಿಡಿದು ಕೆಡವಿದ್ದು, ಸಜೀವ್ ಮಣ್ಣಿನ ದಿಬ್ಬದಿಂದ ರಬ್ಬರ್ ತೋಟಕ್ಕೆ ಬಿದ್ದಿದ್ದಾನೆ. ನಂತರ ಸಜೀವ್ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಿನ್ಷ್ಷ್ಯಿತು. ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಸಜೀವ್ ಮೃತಪಟ್ಟಿದ್ದಾರೆ ಎಂದು ಸಂಬಂಧಿಕರು ತಿಳಿಸಿದ್ದಾರೆ.
80 ಲಕ್ಷ ಲಾಟರಿ ಗೆದ್ದವ ಕುಡಿದ ಮತ್ತಿನಲ್ಲಿ ಸಾವು; ಸ್ನೇಹಿತ ಪೋಲೀಸ್ ವಶ: ಅಸಹಜ ಸಾವು ಪ್ರಕರಣ ದಾಖಲು
0
ಏಪ್ರಿಲ್ 04, 2023