ನವದೆಹಲಿ: 'ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಕೈಗೊಂಡಿರುವ ಕೇಂದ್ರ ಚುನಾವಣಾ ಆಯೋಗವು ಹೊಸದಾಗಿ 8.92 ಲಕ್ಷ ವಿವಿಪ್ಯಾಟ್‌ಗಳನ್ನು ತಯಾರಿಸಲು ಮುಂದಾಗಿದೆ' ಎಂದು ಮೂಲಗಳು ಬುಧವಾರ ತಿಳಿಸಿವೆ.
'ಎಂ-2 ಮಾದರಿಯ ಒಟ್ಟು 2.71 ಲಕ್ಷ ವಿವಿಪ್ಯಾಟ್ ಯಂತ್ರಗಳನ್ನು ಬಳಸದಿರಲು ನಿರ್ಧರಿಸಿರುವ ಆಯೋಗವು ನಿರ್ವಹಣೆ ಕಾರ್ಯಕ್ಕಾಗಿ 3.43 ಲಕ್ಷ ವಿವಿಪ್ಯಾಟ್‌ಗಳನ್ನು ಗುರುತಿಸಿದೆ. 2.43 ವಿವಿಪ್ಯಾಟ್‌ಗಳನ್ನು ಮೇಲ್ದರ್ಜೆಗೇರಿಸಲೂ ಮುಂದಾಗಿದೆ' ಎಂದು ಹೇಳಿವೆ.
'ಚುನಾವಣೆಗೂ ಮುನ್ನ ಪ್ರತಿ ರಾಜ್ಯದಲ್ಲೂ ಇವಿಎಂ ಹಾಗೂ ವಿವಿಪ್ಯಾಟ್‌ಗಳನ್ನು ಪರೀಕ್ಷಿಸುವ ಪ್ರಕ್ರಿಯೆಯನ್ನೂ ಆಯೋಗ ಕೈಗೊಳ್ಳಲಿದೆ' ಎಂದು ತಿಳಿಸಿವೆ.