HEALTH TIPS

ಅಮಾವಾಸ್ಯೆ ದಿನ 8 ವರ್ಷದ ಬಾಲಕನ ಕೊಂದ ತೃತೀಯ ಲಿಂಗಿ! ಕಾರಣ ಕೇಳಿದ್ರೆ ಬೆಚ್ಚಿ ಬೀಳ್ತೀರಿ

                ಹೈದರಾಬಾದ್​: ತಂತ್ರಜ್ಞಾನ (Technology) ಎಷ್ಟೇ ಮುಂದುವರಿದರೂ ಜನರು ಮೂಢನಂಬಿಕೆಗಳನ್ನು (Superstition) ಬಿಡುತ್ತಿಲ್ಲ. ಕ್ಷುದ್ರ ಪೂಜೆ, ನರಬಲಿ ಮಾಡುವುದರಿಂದ ಒಳಿತಾಗುತ್ತದೆ ಎಂದು ಭಾವಿಸಿ ಹಲವು ಪೂಜೆ, ಬಲಿ ಎಸಗುತ್ತಾರೆ. ಇತ್ತೀಚೆಗೆ ಹೈದರಾಬಾದ್​ನ (Hyderabad) ಸನತ್​ ನಗರದಲ್ಲಿ ಇಂತಹದೊಂದು ಘಟನೆ ನಡೆದಿದ್ದು, 8 ವರ್ಷದ ಬಾಲಕನನ್ನು ನರಬಲಿ (Human Sacrifice) ಕೊಡಲಾಗಿದೆ ಎಂಬ ಅನುಮಾನ ಮೂಡಿದೆ. ಮೃತ ಬಾಲಕನನ್ನು ಅಬ್ದುಲ್ ವಹೀದ್ ಎಂದು ಪೊಲೀಸರು (Police) ಗುರುತಿಸಿದ್ದಾರೆ. ಬಾಲಕನನ್ನು ತೃತೀಯ ಲಿಂಗಿಯೊಬ್ಬರು ಬಲಿ ಕೊಟ್ಟಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

               ಇತ್ತೀಚಿನ ದಿನಗಳಲ್ಲಿ ಜನರು ಮೂಢನಂಬಿಕೆಗಳನ್ನು ಕುರುಡಾಗಿ ನಂಬುತ್ತಿದ್ದಾರೆ. ಮನೆಯಲ್ಲಿ ಸರಿಯಲ್ಲ, ಮನಸ್ಸು ಸರಿಯಲ್ಲ ಎಂದು ಮಂತ್ರ ತಂತ್ರ ಮಾಡುವವರು ಹೇಳಿದ್ದನ್ನು ಕುರುಡಾಗಿ ಅನುಸರಿಸಿದ್ದಾರೆ. ಏನು ಮಾಡುತ್ತಿದ್ದೇವೆ ಎಂದು ಯೋಚಿಸದೆ ಪ್ರಾಣವನ್ನೂ ಬಲಿಕೊಡುತ್ತಿದ್ದಾರೆ. ಗುರುವಾರ ರಾತ್ರಿ ಹೈದರಾಬಾದ್ ಸನತ್ ನಗರದಲ್ಲಿ 8 ವರ್ಷದ ಬಾಲಕನ ಸಾವಿನ ಬಗ್ಗೆ ಹಲವು ಅನುಮಾನಗಳಿವೆ. 

           ಅಮಾವಾಸ್ಯೆ ಕಾರಣ ಬಾಲಕನನ್ನು ಬಲಿ ಕೊಡಲಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಅಮವಾಸ್ಯೆಯಂದು ತೃತೀಯಲಿಂಗಿಯೊಬ್ಬರು ಬಾಲಕನನ್ನು ಬಲಿಕೊಟ್ಟು ಮೃತದೇಹವನ್ನು ಕಾಲುವೆಗೆ ಎಸೆದಿದ್ದಾರೆ ಎನ್ನಲಾಗಿದೆ.

                ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ತಿಳಿಸಿದಾಗ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ನಾಲೆಯೊಂದರಲ್ಲಿ ಮೃತ ಬಾಲಕನ ಶವ ಪತ್ತೆಯಾಗಿದೆ. ಪೊಲೀಸರು ಬಾಲಕನನ್ನು ಅಬ್ದುಲ್ ವಹೀದ್ ಎಂದು ಗುರುತಿಸಿದ್ದಾರೆ. ಘಟನೆ ಕುರಿತು  ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ನರಬಲಿ ನಿಜವಾಗಿಯೂ ನಡೆದಿದೆಯೇ? ಅಥವಾ ಬೇರೆ ಕಾರಣಕ್ಕೆ ಕೊಲ್ಲಲಾಗಿದಿಯೇ?, ಸಂತ್ರಸ್ತೆಯ ಕುಟುಂಬಕ್ಕೆ ಸೇರದವರೇ ಈ ದುಷ್ಕೃತ್ಯ ಎಸಗಿದ್ದಾರೆಯೇ? ಅಥವಾ ಬಾಲಕನೇ ಆಕಸ್ಮಿಕವಾಗಿ ಸಾವನ್ನಪ್ಪಿದ್ದಾನೆಯೇ ಎಂದು ಹಲವು ಆಯಾಮಗಳಲ್ಲಿ ಪೊಲೀಸರು ಸ್ಥಳೀಯರನ್ನು ವಿಚಾರಣೆಗೊಳಪಡಿಸಿದ್ದಾರೆ.

ತೃತೀಯಲಿಂಗಿ ಮನೆ ಮೇಲೆ ದಾಳಿ


                 ಬಾಲಕನ ಸಾವಿಗೆ ಇಮ್ರಾನ್ ಎಂಬ ಹಿಜಿಡಾ ಕಾರಣ ಎಂದು ಆರೋಪಿಸಿ ಕುಟುಂಬಸ್ಥರು ಆಕೆಯ ಮನೆಯ ಮೇಲೆ ದಾಳಿ ನಡೆಸಿದ್ದಾರೆ. ಪೊಲೀಸರು ಇಮ್ರಾನ್‌ನನ್ನೂ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಗುರುವಾರ ಅಮವಾಸ್ಯೆ ಇದ್ದಿದ್ದರಿಂದ ಇಮ್ರಾನ್ ಈ ದುಷ್ಕೃತ್ಯ ಎಸಗಿದ್ದಾನೆ ಎಂದು ಸಂತ್ರಸ್ತೆಯ ಕುಟುಂಬದವರು ಆರೋಪಿಸಿದ್ದಾರೆ. ಬಾಲಕನನ್ನು ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ನಾಲೆಯಲ್ಲಿ ಎಸೆದಿರುವುದು ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್​ ಆಗಿದೆ. ತನಿಖೆಯಲ್ಲಿ ಈ ಕೊಲೆಗೆ ಇಮ್ರಾನ್​ಗೆ ಕೆಲವರು ಕೈಜೋಡಿಸಿದ್ದಾರೆ ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ.


 ತನಿಖೆಯಲ್ಲಿ ಕೊಲೆಗೆ ಕಾರಣ ಬಹಿರಂಗ


               ಅಮವಾಸ್ಯೆ ಇದ್ದುದರಿಂದ ಮೊದಲು ಬಾಲಕನನ್ನು ಬಲಿ ಕೊಡಲಾಗಿದೆ ಎಂದು ಸ್ಥಳೀಯರು ಮತ್ತು ಕುಟುಂಬಸ್ಥರು ಭಾವಿಸಿದ್ದರು. ಆದರೆ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಗಳನ್ನು ಗುರುತಿಸಿ ಬಂಧಿಸಿದ್ದರು. ತನಿಖೆಯಲ್ಲಿ ಕೊಲೆಗೆ ಹಣಕಾಸಿನ ವ್ಯವಹಾರವೇ ಕಾರಣ ಎಂಬುದು ಬೆಳಕಿಗೆ ಬಂದಿದೆ. ತೃತೀಯಲಿಂಗಿ ಇಮ್ರಾನ್ ಈ ದುಷ್ಕೃತ್ಯದಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಇಮ್ರಾನ್ ಪೊಲೀಸ್ ಕಸ್ಟಡಿಯಲ್ಲಿದ್ದಾನೆ.

ಇಮ್ರಾನ್​ಗೆ ಹಲವರ ಸಾಥ್​


              ಚೀಟಿ ಹೆಸರಿನಲ್ಲಿ ನಡೆದ ಹಣಕಾಸಿನ ವ್ಯವಹಾರವೇ ಕೊಲೆಗೆ ಕಾರಣ ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಕೃತ್ಯಕ್ಕೆ ಇಮ್ರಾನ್​ಗೆ ಇತರ ನಾಲ್ವರು ಸಹಾಯ ಮಾಡಿದ್ದಾರೆ. ಈ ಪ್ರಕರಣದಲ್ಲಿ ಇಮ್ರಾನ್ ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಇದರಿಂದ ಬಾಲಕ ನರಬಲಿಯಾಗಿಲ್ಲ, ನೀರಿನಲ್ಲಿ ಮುಳುಗಿಸಿ ಕೊಲ್ಲಲಾಗಿದೆ ಎಂಬುದು ಸ್ಪಷ್ಟವಾಗಿದೆ.


                  ಬಾಲಕನನ್ನು ಕೊಲೆ ಮಾಡಿ ನಂತರ ಕತ್ತರಿಸಿ ಬಕೆಟ್‌ನಲ್ಲಿ ಹಾಕಲಾಗಿದೆ. ಬಳಿಕ ಆಟೋ ಚಾಲಕನ ಸಹಾಯದಿಂದ ಕಾಲುವೆಗೆ ಎಸೆದಿದ್ದಾರೆ. ಆರೋಪಿಗಳ ವಿಚಾರಣೆಯಲ್ಲಿ ಪೊಲೀಸರಿಗೆ ಈ ಎಲ್ಲಾ ವಿಷಯಗಳನ್ನು ತಿಳಿಸಿದ್ದಾರೆ. ಸಚಿವ ತಲಸಾನಿ ಶ್ರೀನಿವಾಸ ಯಾದವ್ ಸಂತ್ರಸ್ತ ಕುಟುಂಬಸ್ಥರ ನಿವಾಸಕ್ಕೆ ತೆರಳಿ ಆರೋಪಿಗೆ ಕಠಿಣ ಶಿಕ್ಷೆ ಆಗುವ ಹಾಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries