ಕೊಚ್ಚಿ: ಕರಿಪ್ಪೂರ್ ವಿಮಾನ ನಿಲ್ದಾಣದ ಮೂಲಕ ಚಿನ್ನ ಕಳ್ಳಸಾಗಣೆಯಲ್ಲಿ ತೊಡಗಿದ್ದ 9 ಮಂದಿ ಕಸ್ಟಮ್ಸ್ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಲಾಗಿದೆ.
ಕಸ್ಟಮ್ಸ್ ಅಧೀಕ್ಷಕರಾದ ಎಸ್. ಆಶಾ, ಗಣಪತಿ ಪೋತ್ತಿ, ಇನ್ಸ್ ಪೆಕ್ಟರ್ ಗಳಾದ ಯೋಗೇಶ್, ಯಾಸರ್ ಅರಾಫತ್, ಸುಧೀರ್ ಕುಮಾರ್, ನರೇಶ್ ಗುಳಿಯ, ವಿ. ಮಿನಿಮೋಲ್, ಮುಖ್ಯ ಹವಾಲ್ದಾರ್ ಅಶೋಕನ್ ಮತ್ತು ಫ್ರಾನ್ಸಿಸ್ ಅವರನ್ನು ವಜಾಗೊಳಿಸಲಾಗಿದೆ. ಇμÉ್ಟೂಂದು ಅಧಿಕಾರಿಗಳು ಒಟ್ಟಾಗಿ ಕ್ರಮ ಎದುರಿಸುತ್ತಿರುವುದು ದೇಶದಲ್ಲಿ ಇದೇ ಮೊದಲು. ಈ ಆದೇಶವು ಕೊಚ್ಚಿ ಕಸ್ಟಮ್ಸ್ ಪ್ರಿವೆಂಟಿವ್ ಕಮಿಷನರ್ ಅವರದ್ದಾಗಿದ್ದು, ಅವರು ಕಸ್ಟಮ್ಸ್‍ನ ಆಂತರಿಕ ತನಿಖಾ ವರದಿಯ ಮೇಲೆ ಶಿಸ್ತು ಕ್ರಮ ಕೈಗೊಂಡಿದ್ದಾರೆ. ಚಿನ್ನ ಕಳ್ಳಸಾಗಣೆ ಕುರಿತು ತನಿಖೆ ನಡೆಸಿದ್ದ ಸಿಬಿಐ ಜನವರಿಯಲ್ಲಿ ಇವರ ವಿರುದ್ಧ ಚಾರ್ಜ್ ಶೀಟ್ ಹೊರಡಿಸಿತ್ತು. ಈ ಹಿನ್ನಲೆಯಲ್ಲಿ ಸಾಮೂಹಿಕ ವಜಾಗೊಳಿಸುವಿಕೆ ಜರುಗಿಸಲಾಗಿದೆ.
ಜನವರಿ 2021 ರಲ್ಲಿ, ಸಿಬಿಐ ಮತ್ತು ಕಂದಾಯ ಗುಪ್ತಚರ ನಿರ್ದೇಶನಾಲಯ ನಡೆಸಿದ ದಾಳಿಗಳಲ್ಲಿ ಕಸ್ಟಮ್ಸ್ ಅಧಿಕಾರಿಗಳು ಚಿನ್ನ ಕಳ್ಳಸಾಗಣೆಯಲ್ಲಿ ತೊಡಗಿರುವುದು ಕಂಡುಬಂದಿತ್ತು. ಕರಿಪ್ಪೂರ್ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ನೆರವಿನಿಂದ ಚಿನ್ನ ಕಳ್ಳಸಾಗಣೆ ಮಾಡಲಾಗುತ್ತಿದ್ದು, ಪ್ರಯಾಣಿಕರಿಂದ ಬಲವಂತವಾಗಿ ವಸೂಲಿ ಮಾಡಲಾಗುತ್ತಿದೆ ಎಂಬ ದೂರುಗಳ ಆಧಾರದ ಮೇಲೆ ತಪಾಸಣೆ ನಡೆಸಲಾಯಿತು. ಕಸ್ಟಮ್ಸ್ ಅಧಿಕಾರಿಗಳು ಕಡಿಮೆ ಸುಂಕ ವಿಧಿಸಿ ಕಳ್ಳಸಾಗಣೆ ಚಿನ್ನವನ್ನು ರಫ್ತು ಮಾಡಲು ಸಹಕರಿಸುತ್ತಿದ್ದಾರೆ ಎಂಬುದು ಸಿಬಿಐಗೆ ಸಿಕ್ಕಿರುವ ಮಾಹಿತಿ. ಸಿಬಿಐ ಕ್ರಮ ಎದುರಿಸಿದ ಅಧೀಕ್ಷಕ ಕೆ.ಎಂ. ಜೋಸ್ ಅವರು ಸೇವೆಯಿಂದ ನಿವೃತ್ತರಾಗಿದ್ದರು. ಕ್ರಮ ಎದುರಿಸಿದ ಕಸ್ಟಮ್ಸ್ ಸೂಪರಿಂಟೆಂಡೆಂಟ್ ಸತ್ಯಮೇಂದ್ರ ಸಿಂಗ್ ಅವರ ಬಂಧನ ಅವಧಿಯನ್ನು ರದ್ದುಗೊಳಿಸಲಾಗಿದೆ. ಅವರ ವಿರುದ್ಧ ಸಿಬಿಐ ಪ್ರಕರಣದ ವಿಚಾರಣೆ ನಡೆಯುತ್ತಿದೆ. ವಾದ ಮುಗಿದ ತಕ್ಷಣ ಅವರ ವಿರುದ್ಧ ನ್ಯಾಯಾಲಯ ಕ್ರಮ ಜರುಗಿಸಲಾಗುವುದು.